ಗುಟ್ಟಾಗಿ ಮದುವೆಯಾದ ಹಸೀನ್ ದಿಲ್ ರುಬಾ ; ತಾಪ್ಸಿಯ ಕರಿಮಣಿ ಮಾಲೀಕ ಯಾರು..?

''ಸಿನಿಮಾ''ದವರ ''ಜೀವನ'' ಸಿಕ್ಕಾಪಟ್ಟೆ ''ನಿಗೂಢ''. ಇಲ್ಲಿ ಯಾರು ಯಾರ ಜೊತೆ ಸುತ್ತಾಡ್ತಾರೆ.. ಯಾರು ಯಾವಾಗ ಕಿತ್ತಾಡ್ಕೊಂಡು ದೂರ ಆಗ್ತಾರೆ.. ಎಂದು ಹೇಳುವುದು ಕಷ್ಟ. ಇನ್ನೂ ಸದ್ದಿಲ್ಲದೇ ಇಲ್ಲಿ ಅನೇಕರು ''ಹಸೆಮಣೆ'' ಏರಿ ಇಳಿದಿದ್ದಾರೆ ಕೂಡ. ''ತ್ಯಾಪ್ಸಿ ಪನ್ನು'' ಇದಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ನಟಿ

ಹೌದು, ಇದ್ದಿದ್ದನ್ನ ಇದ್ದ ಹಾಗೆ ಹೇಳುವ ''ತಾಪ್ಸಿ ಪನ್ನು'', ತಮ್ಮ ಬಹುಕಾಲದ ಗೆಳೆಯ ''ಮಥಿಯಾಸ್ ಬೋ'' ಜೊತೆ ''ಸಪ್ತಪದಿ'' ತುಳಿಯಲಿದ್ದಾರೆ ಎಂಬ ಸುದ್ದಿ ಈ ವರ್ಷದ ಆರಂಭದಲ್ಲಿಯೇ ''ಬ್ರೇಕಿಂಗ್ ನ್ಯೂಸ್'' ರೂಪದಲ್ಲಿ ಎಲ್ಲೆಡೆ ಬಿತ್ತರವಾಗಿತ್ತು. ಆದರೆ ಎಲ್ಲವನ್ನೂ ನೋಡಿಯೂ ''ತಾಪ್ಸಿ'' ಸುಮ್ಮನಾಗಿದ್ದರು. ''ಮದುವೆ''ಯ ವಿಚಾರದಲ್ಲಿ ''ಮೌನ'' ಮುರಿದಿರಲಿಲ್ಲ.

Taapsee Pannu Ties The Knot With Mathias Boe In Udaipiur

ಯಾಕೆಂದರೆ ''ಮದುವೆ'' ವಿಚಾರದಲ್ಲಿ ''ತ್ಯಾಪ್ಸಿ''ಗೆ ಯಾವ ''ಪ್ರಚಾರ''ವೂ ಬೇಕಿರಲಿಲ್ಲ. ಆದರೆ ತ್ಯಾಪ್ಸಿ ''ಕುಂತರೂ ನಿಂತರೂ'' ಅದ್ಯಾವಾಗ ಮದುವೆಯ ''ಚರ್ಚೆ'' ತಾರಕಕ್ಕೇರಿತು. ಆಗ ತಾಪ್ಸಿ, ''ವೈಯಕ್ತಿಕ'' ವಿಷಯಗಳ ಬಗ್ಗೆ ''ಸಾರ್ವಜನಿಕ''ವಾಗಿ ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದು ಖಂಡ ತುಂಡವಾಗಿ ಹೇಳಿದ್ದರು. ''ಪ್ರೀತ್ಸೋದು ತಪ್ಪಾ''.? ''ಮದುವೆ''ಯಾಗುವುದು ತಪ್ಪಾ.? ಎಂದು ಕೆಂಡ ಕಾರಿದ್ದರು.

ಆದರೂ ಕುತೂಹಲ.. ! ತಾಪ್ಸಿ ಹೋದಲ್ಲಿ ಬಂದಲ್ಲಿ ''ಕ್ಯಾಮರಾ ಕಣ್ಣು'' ಇವರನ್ನ ಹಿಂಬಾಲಿಸುತ್ತಾನೇ ಇತ್ತು. ತಾಪ್ಸಿಯ ಜೊತೆ ಆಕೆಯ ಅತ್ಯಾಪ್ತ ''ಸ್ನೇಹಿತರ'' ''ಸಾಮಾಜಿಕ ಜಾಲತಾಣ''ದ ಮೇಲೂ ಒಂದು ವರ್ಗ ''ನಿಗಾ'' ವಹಿಸಿತ್ತು. ಇದೆಲ್ಲದರ ಪ್ರತಿಫಲವೆನ್ನುವಂತೆ ''ಎರಡು ದಿನ''ಗಳ ಹಿಂದೆ ''ಉದಯಪುರ''ದ ಪಂಚತಾರಾ ಹೋಟೆಲ್‌ನಲ್ಲಿ, ತಮ್ಮ ಪ್ರಿಯಕರ ''ಮಥಿಯಾಸ್ ಬೋ'' ಜೊತೆ ''ತಾಪ್ಸಿ ಪನ್ನು'', ''ಗುಟ್ಟಾಗಿ ಮದುವೆ''ಯಾಗಿದ್ದಾರೆ ಎಂಬ ಸುದ್ದಿ ಈಗ ಕಾಡ್ಗಿಚ್ಚಿನಂತೆ ಹಬ್ಬಿದೆ. ಇವರಿಬ್ಬರ ಮದುವೆಯ ಗುಟ್ಟನ್ನ ''ರಟ್ಟು'' ಮಾಡುವಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ ''ಸಾಮಾಜಿಕ ಜಾಲತಾಣ''ದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ.

Taapsee Pannu Ties The Knot With Mathias Boe In Udaipiur

ಇನ್ನೂ ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರ ಹಾಗೂ ಕೋಚ್ ''ಮಥಿಯಾಸ್ ಬೋ'' ಜೊತೆ ''ತ್ಯಾಪ್ಸಿ'' ''ಮದುವೆಯ ಬಂಧನ''ಕ್ಕೊಳಗಾಗುವ ಸಂದರ್ಭದಲ್ಲಿ, ನಿರ್ದೇಶಕ ''ಅನುರಾಗ್ ಕಶ್ಯಪ್'', ಬರಹಗಾರ್ತಿ ''ಕನಿಕಾ ಧಿಲ್ಲೋನ್'' , ನಟ ''ಪಾವಿಲ್ ಗುಲಾಟಿ'', ಸೇರಿ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಇದ್ದರು, ನವ ಜೋಡಿಗೆ ಶುಭ ಹಾರೈಸಿದರು ಅನ್ನುವ ಸುದ್ದಿ ಸದ್ಯಕ್ಕೆ ಬಾಲಿವುಡ್ ನಲ್ಲಿ ಗುಲ್ಲಾಗಿದೆ. ಇದಕ್ಕೆ ಪೂರಕವಾಗಿ ''ಕನ್ನಿಕಾ ಧಿಲ್ಲೋನ್'' ಹಾಗೂ ''ಪಾವಿಲ್ ಗುಲಾಟಿ'' ಮದುವೆಯಲ್ಲಿ ಪಾಲ್ಗೊಂಡಿರುವ ''ಫೋಟೋ''ಗಳನ್ನು ಹಂಚಿಕೊಂಡಿದ್ದಾರೆ. ನಿಜಾ .. ತಮ್ಮೆದುರು ನಡೆದಿದ್ದು ''ತಾಪ್ಸಿ''ಯದ್ದೇ ಮದುವೆ ಎಂದು ಇಬ್ಬರು ಹೇಳಿಲ್ಲ. ಆದರೂ ಈ ಫೋಟೋ ಗಳು ತಾಪ್ಸಿಯ ಮದುವೆಯ ಸಂಭ್ರಮದಲ್ಲಿ ತೆಗೆದಿರುವಂತಹ ಫೋಟೋಗಳೇ ಅನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಅನುಮಾನ.

Taapsee Pannu Ties The Knot With Mathias Boe In Udaipiur

ಒಟ್ನಲ್ಲಿ ತಾಪ್ಸಿ ಹಾಗೂ ಮಥಿಯಾಸ್ ಬೋ ಎಲ್ಲರಂತೆ ''ಪ್ರಣಯ ಪಕ್ಷಿ''ಗಳ ಹಾಗೆ ಜೊತೆ ಜೊತೆಯಾಗಿ ಸುತ್ತಾಡಿದ ಉದಾಹರಣೆ ಇಲ್ಲ. ಸಾರ್ವಜನಿಕವಾಗಿ ''ಕಣ್ಣುಕುಕ್ಕು''ವಂತೆ ಇಬ್ಬರೂ ಓಡಾಡಿಯೂ ಇಲ್ಲ. ಇಲ್ಲ ಸಲ್ಲದ ಮಾತುಗಳು ಹೊರಬಿದ್ದರೂ ತುಟಿಪಿಟಿಕ್ ಎನ್ನದೇ ಉಳಿದು, ಕೆಲವೇ ಕೆಲವರ ಸಮ್ಮುಖದಲ್ಲಿ ಮಾಧ್ಯಮದವರ ಕಣ್ತಪ್ಪಿಸಿ ಈಗ ಇಬ್ಬರು ಮದುವೆಯಾಗಿದ್ದಾರೆ. ನಿಜವಾಗಿಯೂ ಇಬ್ಬರು ಮದುವೆಯಾಗಿದ್ದಾರಾ ಅಥವಾ ಇದು ಊಹಾಪೋಹದ ಮದುವೆನಾ ಉತ್ತರ ಖುದ್ದು ತಾಪ್ಸಿ ಹೇಳಿದಾಗಲೇ ಗೊತ್ತಾಗಲಿದೆ. Any Ways Congratulations Taapsee

More from Filmibeat

English summary
Actress Taapsee Pannu married her long-term boyfriend and badminton player, Mathias Boe on March 23. The intimate wedding took place in Udaipur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X