ಬಾಲಿವುಡ್-ಟಾಲಿವುಡ್: ಜೊತೆಯಾಗುತ್ತಿದ್ದಾರೆ ಇಬ್ಬರು ಗಟ್ಟಿಗಿತ್ತಿಯರು

ಬಾಲಿವುಡ್‌ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎಂಬ ಗೆರೆಯೊಂದು ಬಹಳ ಹಿಂದೆ ಇತ್ತು. ತನ್ನ ಶಕ್ತ ಸಿನಿಮಾಗಳ ಮೂಲಕ ಆ ಗೆರೆಯನ್ನು ಅಳಿಸಿ ಹಾಕಿದೆ ದಕ್ಷಿಣ ಭಾರತ ಸಿನಿಮಾರಂಗ.

ಬಾಲಿವುಡ್‌ನವರೇ ದಕ್ಷಿಣ ಭಾರತ ಚಿತ್ರರಂಗವನ್ನು ಅರಸಿ ಬರುತ್ತಿದ್ದಾರೆ. ಇಲ್ಲಿ ಬಂಡವಾಳ ಹೂಡಿ, ಇಲ್ಲಿನ ಸಿನಿಮಾಗಳನ್ನು ಅಲ್ಲಿ ರೀಮೇಕ್ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ನಟರು ಸಹ ಪರಸ್ಪರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಿಗಾಗಿ, ಮುಖ್ಯ ಪಾತ್ರಗಳಿಗಾಗಿ ಬಣ್ಣ ಹಚ್ಚುತ್ತಿದ್ದಾರೆ.

ಇದೀಗ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ, ಹಾಗೂ ಬಾಲಿವುಡ್‌ನ ಸ್ಟಾರ್ ನಟಿ ಇಬ್ಬರು ಸಿನಿಮಾ ಒಂದಕ್ಕಾಗಿ ಒಂದಾಗುತ್ತಿದ್ದಾರೆ. ಈ ಬಗ್ಗೆ ದೊಡ್ಡದಾಗಿಯೇ ಸುದ್ದಿ ಹರಿದಾಡುತ್ತಿದೆ.

ನಟಿ ಸಮಂತಾ ಹಾಗೂ ತಾಪ್ಸಿ ಪನ್ನು ಇಬ್ಬರು ಸಿನಿಮಾ ಒಂದಕ್ಕಾಗಿ ಒಂದಾಗುತ್ತಿದ್ದಾರೆ. ಇಬ್ಬರೂ ತಮ್ಮ ತಮ್ಮ ಸಿನಿಮಾರಂಗದಲ್ಲಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ವರ್ಗ ಹೊಂದಿರುವ ನಟಿಯರಾಗಿದ್ದಾರೆ. ಹಾಗಾಗಿ ಈ ಇಬ್ಬರು ಒಟ್ಟಾಗುವ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಸಮಂತಾ ನಟಿಸಲಿರುವ ಸಿನಿಮಾಕ್ಕೆ ತಾಪ್ಸಿ ಬಂಡವಾಳ

ಸಮಂತಾ ನಟಿಸಲಿರುವ ಸಿನಿಮಾಕ್ಕೆ ತಾಪ್ಸಿ ಬಂಡವಾಳ

ವಿಶೇಷವೆಂದರೆ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿಲ್ಲ ಬದಲಿಗೆ ಸಮಂತಾ ನಟಿಸಲಿರುವ ಸಿನಿಮಾಕ್ಕೆ ತಾಪ್ಸಿ ಪನ್ನು ಬಂಡವಾಳ ಹೂಡುತ್ತಿದ್ದಾರೆ. ತಾಪ್ಸಿ ಪನ್ನು ಇತ್ತೀಚೆಗಷ್ಟೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ 'ದಿ ಔಟ್‌ಸೈಡರ್ಸ್ ಫಿಲಮ್ಸ್' ಸ್ಥಾಪಿಸಿದ್ದಾರೆ. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಟಿಸುವಂತೆ ಸಮಂತಾರನ್ನು ಕೇಳಿಕೊಂಡಿದ್ದಾರೆ ತಾಪ್ಸಿ.

ಸಂದರ್ಶನದಲ್ಲಿ ಹೇಳಿರುವ ತಾಪ್ಸಿ

ಸಂದರ್ಶನದಲ್ಲಿ ಹೇಳಿರುವ ತಾಪ್ಸಿ

ಸಮಂತಾರಿಗೆ ಸಿನಿಮಾ ಆಫರ್ ಕೊಟ್ಟಿರುವ ಬಗ್ಗೆ ತಾಪ್ಸಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಮಂತಾ ಸಹ ತಾಪ್ಸಿಯ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರಂತೆ. ಮೂಲಗಳ ಪ್ರಕಾರ ತಾಪ್ಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಸಮಂತಾ ನಟಿಸಿದರೆ ತಾಪ್ಸಿ ಹಿಂದಿ ಭಾಷೆಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚುತ್ತಿರುವ ತಾಪ್ಸಿ

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚುತ್ತಿರುವ ತಾಪ್ಸಿ

'ಫೆಮಿನಿಸ್ಟ್' ಮಾದರಿ ಸಿನಿಮಾಗಳ ಮೂಲಕ ತಾಪ್ಸಿ ಪನ್ನು ಬಾಲಿವುಡ್‌ನಲ್ಲಿ ಮನೆ ಮಾತು. 'ಪಿಂಕ್', 'ತಪ್ಪಡ್', 'ರಶ್ಮಿ ರಾಕೆಟ್', 'ಮುಲ್ಕ್', 'ಬದ್ಲಾ' ಇತರೆ ಮಹಿಳಾ ಪ್ರಧಾನ ಸಿನಿಮಾಗಳನ್ನು ನೀಡಿದ್ದಾರೆ. ಇತ್ತ ಸಮಂತಾ ಸಹ ಮಹಿಳಾ ಪ್ರಧಾನ ಸಿನಿಮಾಗಳತ್ತ ವಾಲಿ ಕೆಲ ವರ್ಷಗಳೇ ಆಗಿದ್ದು ಯಶಸ್ಸನ್ನೂ ಕಂಡುಕೊಂಡಿದ್ದಾರೆ. 'ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯ ಮೂಲಕ ತಾವು ಎಂಥಹಾ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಇಬ್ಬರು ಒಂದಾದರೆ ಒಂದೊಳ್ಳೆ ಮಹಿಳಾ ಪ್ರಧಾನ ಸಿನಿಮಾ ಬರುವುದಂತೂ ಖಂಡಿತ ಎನ್ನಲಾಗುತ್ತಿದೆ.

ಇಬ್ಬರು ನಟಿಯರ ಕೈಲಿ ಹಲವು ಸಿನಿಮಾಗಳು

ಇಬ್ಬರು ನಟಿಯರ ಕೈಲಿ ಹಲವು ಸಿನಿಮಾಗಳು

ಇನ್ನು ನಟಿ ಸಮಂತಾ ವಿಚ್ಛೇಧನದ ಬಳಿಕ ಸಿನಿಮಾಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಗುಣಶೇಖರ್ ನಿರ್ದೇಶನದ 'ಶಕುಂತಲಮ್', ಹರಿ ಶಂಕರ್ ನಿರ್ದೇಶನದ 'ಯಶೋಧಾ' ಜೊತೆಗೆ ತಮ್ಮ ಮೊದಲ ಹಾಲಿವುಡ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಕುಣಿದಿದ್ದಾರೆ. ಇನ್ನು ತಾಪ್ಸಿ ಪನ್ನು ನಟನೆಯ 'ಶಬಾಶ್ ಮಿತು' ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆಗೆ 'ದೊ ಬಾರ', 'ಬ್ಲರ್', 'ಮಿಷನ್ ಇಂಪಾಸಿಬಲ್', 'ತಡ್ಕಾ', 'ಲೂಪ್ ಲಪೇಟಾ', 'ವೋಹ್ ಲಡ್ಕಿ ಹೇ ಕಹಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Taapsee Pannu will produce movie which staring Samantha. Taapsee started her own production house recently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X