ಬಾಲಿವುಡ್ ನಲ್ಲಿ ಬರ್ತಿದೆ ಕನ್ನಡದ 'ಯು ಟರ್ನ್': ನಾಯಕಿ ಇವರೇ
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ್ದ 'ಯು ಟರ್ನ್' ಸಿನಿಮಾ ನಂತರ ತೆಲುಗು, ತಮಿಳು ಸುತ್ತಿಕೊಂಡು ಈಗ ಬಾಲಿವುಡ್ ಕಡೆ ಹೊರಟಿದೆ. 2016ರಲ್ಲಿ ತೆರೆಗೆ ಬಂದ ಯು ಟರ್ನ್ ಕನ್ನಡ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಲೂಸಿಯ ಖ್ಯಾತಿಯ ಪವನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ.
ಯು ಟರ್ನ್ ಮೂಲಕ ನಟಿ ಶ್ರದ್ಧಾ ಶ್ರೀನಾಥ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಕನ್ನಡಾಭಿಮಾನಿಗಳನ್ನು ರಂಜಿಸಿದ್ದ ಯು ಟರ್ನ್ ಆ ನಂತರ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿತ್ತು. ತೆಲುಗಿನಲ್ಲಿಯೂ ಪವನ್ ಕುಮಾರ್ ಅವರೆ ಆಕ್ಷನ್ ಕಟ್ ಹೇಳಿದ್ದರು. ನಟಿ ಸಮಂತಾ ಪತ್ರಕರ್ತೆಯ ಪಾತ್ರದಲ್ಲಿ ಮಿಂಚಿದ್ದರು. ಆದರೆ ಕನ್ನಡದಲ್ಲಿ ಸೌಂಡ್ ಮಾಡಿದ್ದಷ್ಟು ಯು ಟರ್ನ್ ತೆಲುಗು ಮತ್ತು ತಮಿಳಿನಲ್ಲಿ ಸದ್ದು ಮಾಡಿಲ್ಲ.
ಯು ಟರ್ನ್ ಈಗ ಬಾಲಿವುಡ್ ನಲ್ಲಿ ಸೆಟ್ಟೇರಲು ತಯಾರಿ ನಡೆಸುತ್ತಿದೆ. ಹಿಂದಿಯಲ್ಲೂ ನಟಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಸಮಂತಾ ಜಾಗಕ್ಕೆ ನಟಿ ತಾಪ್ಸಿ ಪನ್ನು ಹೆಸರು ಕೇಳಿ ಬರುತ್ತಿದೆ. ಬಾಲಿವುಡ್ ಸಿನಿಮಾದಿಂದ ಸಮಂತಾ ಯು ಟರ್ನ್ ಹೊಡೆದ ಕಾರಣ ಸಮಂತಾ ಜಾಗಕ್ಕೆ ತಾಪ್ಸಿ ಹೆಸರು ಕೇಳಿ ಬರುತ್ತಿದೆ.

ಚಿತ್ರ ನಿರ್ಮಾಪಕರರಿಗೆ ನಟಿ ಸಮಂತಾ ಅವರೆ ಅಭಿನಯಿಸಬೇಕು ಎನ್ನುವ ಆಸೆಯಂತೆ. ಆದರೆ ಸಮಂತಾ ಬಾಲಿವುಡ್ ಕಡೆ ಪಯಣ ಬೆಳೆಸಲು ಹಿಂದೇಟು ಹಾಕುತ್ತಿದ್ದಾರಂತೆ. ಹಾಗಾಗಿ ಕನ್ನಡದ ಯುಟರ್ನ್ ನಲ್ಲಿ ತಾಪ್ಸಿ ಪನ್ನು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಚಿತ್ರಕ್ಕೆ ನಿರ್ದೇಶನ ಯಾರು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ.


Click it and Unblock the Notifications