For Quick Alerts
  ALLOW NOTIFICATIONS  
  For Daily Alerts

  ಟಬು ಮದುವೆ ಆಗದೇ ಇರಲು ಬಾಲಿವುಡ್‌ ಖ್ಯಾತ ನಟ ಕಾರಣ

  |

  ನಟಿ ಟಬು ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎರಡರಲ್ಲೂ ಮಿಂಚಿದ ನಟಿ. ವಯಸ್ಸು 50 ಆಗಿದ್ದರೂ ಈಗಲೂ ಅವಕಾಶಗಳಿಗೆ ಕಡಿಮೆ ಇಲ್ಲ.

  ತಮ್ಮ 15ನೇ ವಯಸ್ಸಿನಲ್ಲಿಯೇ ಸಿನಿಮಾ ನಟಿಯಾದ ಟಬು, ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದರು. ಟಬು ಚಾಲ್ತಿಯ ನಟಿಯಾಗಿದ್ದಾಗ ಅವರ ಹೆಸರು ಹಲವು ನಟರೊಂದಿಗೆ ಕೇಳಿಬಂದಿತ್ತು. ಆದರೆ ಏಕೋ ಏನೊ ಯಾವುದೂ ಮದುವರೆಗೆ ಹೋಗಲೇ ಇಲ್ಲ.

  ಟ್ರೇಲರ್: ಹರೆಯದ ಹುಡುಗನೊಂದಿಗೆ ನಟಿ ಟಬು ರೊಮ್ಯಾನ್ಸ್ಟ್ರೇಲರ್: ಹರೆಯದ ಹುಡುಗನೊಂದಿಗೆ ನಟಿ ಟಬು ರೊಮ್ಯಾನ್ಸ್

  ಇಂದಿಗೆ (ನವೆಂಬರ್ 4) ಕ್ಕೆ ಟಬು ವಯಸ್ಸು 50 ಆಗುತ್ತದೆ. ಆದರೆ ಇನ್ನೂ ಮದುವೆಯಾಗಿಲ್ಲ. ಆದರೆ ತಾವು ಮದುವೆ ಆಗದೇ ಇರಲು ಬಾಲಿವುಡ್‌ನ ನಾಯಕನಟನೊಬ್ಬ ಕಾರಣ ಎಂಬುದನ್ನು ಟಬು ಬಹಿರಂಗಪಡಿಸಿದ್ದಾರೆ. ಅವರೇ ನಟ ಅಜಯ್ ದೇವಗನ್.

  ಟಬು-ಅಜಯ್ ದೇವಗನ್ ಬಾಲ್ಯದ ಗೆಳೆಯರು

  ಟಬು-ಅಜಯ್ ದೇವಗನ್ ಬಾಲ್ಯದ ಗೆಳೆಯರು

  ನಟಿ ಟಬು-ಅಜಯ್ ದೇವಗನ್ ಬಾಲ್ಯದ ಗೆಳೆಯರಂತೆ. ಟಬು ನೆರೆಹೊರೆಯಾಗಿದ್ದ ಸಮೀರ್ ಆರ್ಯಾ ಮನೆಯ ಪಕ್ಕದಲ್ಲಿ ಅಜಯ್ ದೇವಗನ್ ಮನೆ ಇತ್ತಂತೆ. ಸಮೀರ್ ಆರ್ಯಾ ಹಾಗೂ ಅಜಯ್ ದೇವಗನ್, ನಾನು ಯಾವ ಹುಡುಗನೊಂದಿಗೂ ಮಾತನಾಡಲು ಬಿಡುತ್ತಲೇ ಇರಲಿಲ್ಲ' ಎಂದಿದ್ದಾರೆ ಟಬು.

  ಅಜಯ್ ದೇವಗನ್ ರೌಡಿಯಂತೆ ವರ್ತಿಸುತ್ತಿದ್ದ: ಟಬು

  ಅಜಯ್ ದೇವಗನ್ ರೌಡಿಯಂತೆ ವರ್ತಿಸುತ್ತಿದ್ದ: ಟಬು

  'ನಾನು ಯಾರಾದರು ಹುಡುಗನೊಂದಿಗೆ ಮಾತನಾಡಿದರೆ ಸಾಕು ಅಜಯ್ ದೇವಗನ್ ಹಾಗೂ ಸಮೀರ್ ಆತನಿಗೆ ಹೊಡೆದು ಬಿಡುತ್ತಿದ್ದರು. ಇಬ್ಬರೂ ಸಹ ಸಖತ್ ರೌಡಿಗಳಾಗಿದ್ದರು ಆಗ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಟಿ ಟಬು.

  ನಟಿ ಟಬು ಜೊತೆ ರೊಮ್ಯಾನ್ಸ್: ಅನುಭವ ಹಂಚಿಕೊಂಡ ಯುವ ನಟನಟಿ ಟಬು ಜೊತೆ ರೊಮ್ಯಾನ್ಸ್: ಅನುಭವ ಹಂಚಿಕೊಂಡ ಯುವ ನಟ

  ಟಬು ಹೆಸರು ಹಲವರೊಟ್ಟಿಗೆ ಕೇಳಿಬಂದಿತ್ತು

  ಟಬು ಹೆಸರು ಹಲವರೊಟ್ಟಿಗೆ ಕೇಳಿಬಂದಿತ್ತು

  ನಟಿ ಟಬು ಹೆಸರು ಹಲವರೊಟ್ಟಿಗೆ ಕೇಳಿಬಂದಿತ್ತು, ನಟ ನಾಗಾರ್ಜುನ, ನಿರ್ದೇಶಕ ಮಧುರ್ ಬಂಡಾರ್ಕರ್ ಹಾಗೂ ಸ್ವತಃ ಅಜಯ್ ದೇವಗನ್ ಜೊತೆಗೆ ಸಹ ಟಬು ಹೆಸರು ಕೇಳಿಬಂದಿತ್ತು. ಆದರೆ ಟಬು ಈ ಸುದ್ದಿಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದರು. ಒಳ್ಳೆಯ ವರ ಸಿಕ್ಕರೆ ಈಗಲೂ ಮದುವೆಗೆ ರೆಡಿ ಎಂದೇ ಹೇಳುತ್ತಾರೆ ಟಬು.

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಅಜಯ್-ಟಬು

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಅಜಯ್-ಟಬು

  ಅಜಯ್ ದೇವಗನ್ ಹಾಗೂ ಟಬು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ಪತ್‌ ನಿಂದ ಆರಂಭಿಸಿ, ಹಕೀಕತ್, ಗೋಲ್‌ಮಾಲ್ ಅಗೇನ್, ದೇ ದೇ ಪ್ಯಾರ್ ದೇ ಹಾಗು ದೃಶ್ಯಂ ಸಿನಿಮಾದಲ್ಲಿ ಸಹ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಅಜಯ್ ದೇವಗನ್ ಪ್ರಸ್ತುತ ತೆಲುಗಿನ ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಟಬು 'ಎ ಸುಟೇಬಲ್ ಬಾಯ್' ವೆಬ್ ಸರಣಿಯಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Actress Tabu did not married still. She said in an interview that because of Ajay Devagan she is still single.
  Wednesday, November 4, 2020, 16:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X