ನನಗೆ ಮದುವೆ ಬೇಡ, ಮಂಚದ ಮೇಲೆ ಒಬ್ಬ ವ್ಯಕ್ತಿ ಇದ್ದರೆ ಸಾಕು, ಟಬು ಕೆಂಡಾಮಂಡಲ..!
ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಇದಕ್ಕೆ ಬಾಲಿವುಡ್‌ನ ಸ್ಟಾರ್ ನಾಯಕಿ ಟಬು ಅವರ ಕುರಿತು ಹರಿದಾಡುತ್ತಿರುವ ಸುದ್ದಿ ಸದ್ಯದ ಸಾಕ್ಷಿ.

ಹೌದು, ಅಸಲಿಗೆ ಕಳೆದ ಕೆಲ ದಿನಗಳಿಂದ ಟಬು ಅವರ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಮದುವೆ ಬೇಡ ನನಗೆ ನನ್ನ ಹಾಸಿಗೆಯಲ್ಲಿ ಒಬ್ಬ ವ್ಯಕ್ತಿ ಬೇಕು ಎಂಬ ಹೇಳಿಕೆ ಅದು. ಸತ್ಯಾಸತ್ಯತೆಯನ್ನು ಅರಿಯದ ಅನೇಕರು ಈ ಹೇಳಿಕೆಯನ್ನು ವರದಿ ಮಾಡಿವೆ. ಅನೇಕ ಮಾಧ್ಯಮಗಳಲ್ಲಿ ಈ ಹೇಳಿಕೆಯ ಕುರಿತು ಚರ್ಚೆ ಕೂಡ ನಡೆದಿವೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಹೇಳಿಕೆಯ ಆಧಾರದ ಮೇಲೆ ಕಳೆದೊಂದು ಹದಿನೈದು ದಿನದಿಂದ ಟಬು ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ತೀರಾ ಅಸಹ್ಯ- ಅಶ್ಲೀಲ ಭಾಷೆಯ ಬಳಕೆಯನ್ನು ಮಾಡಲಾಗುತ್ತಿದೆ.
ಈ ಸುದ್ದಿಯ ಕುರಿತು ಟಬು ಈಗ ಕೆಂಡಾಮಂಡಲವಾಗಿದ್ದಾರೆ. ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರ ವಿರುದ್ದ ಕಿಡಿ ಕಾರಿದ್ದಾರೆ. ಈ ಕುರಿತು ಆಕ್ರೋಶವನ್ನು ಹೊರ ಹಾಕಿರುವ ಟಬು ಮದುವೆ ಬೇಡ ನನಗೆ ಹಾಸಿಗೆಯಲ್ಲಿ ಒಬ್ಬ ವ್ಯಕ್ತಿ ಬೇಕು ಎಂದು ನಾನು ಯಾವತ್ತು ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ. ನಾನು ಹೇಳದಿರುವ ಮಾತನ್ನು ಅನೇಕ ವೆಬ್ ಸೈಟ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆಯಲಾಗಿದೆ ಈ ಮೂಲಕ ನನ್ನ ಚಾರಿತ್ರ್ಯಹರಣವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ನನ್ನ ಅಭಿಮಾನಿಗಳನ್ನು ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ನನ್ನ ಕುರಿತು ಬರೆಯಲಾದ ಈ ಸುಳ್ಳು ಸುದ್ದಿಗಳನ್ನು ತೆಗೆದು ಹಾಕಬೇಕು ಎಂದು ಎಚ್ಚರಿಕೆಯನ್ನು ನೀಡಿರುವ ಟಬು ತಮ್ಮ ಈ ತಪ್ಪಿಗೆ ಕ್ಷಮೆಯನ್ನು ಕೂಡ ಹೇಳಬೇಕೆಂದು ಆಗ್ರಹಿಸಿದ್ದಾರೆ.


Click it and Unblock the Notifications











