ಮಾರುಕಟ್ಟೆಯಲ್ಲಿ ಸೈಫ್-ಕರೀನಾ ಪುತ್ರ ತೈಮೂರ್ ಪ್ರತಿರೂಪದ ಗೊಂಬೆ.!

2016 ಡಿಸೆಂಬರ್ 20 ರಂದು ಮುದ್ದಾದ ಮಗು ತೈಮೂರ್ ಅಲಿ ಖಾನ್ ಪಟೌಡಿಗೆ ನಟಿ ಕರೀನಾ ಕಪೂರ್ ಖಾನ್ ಜನ್ಮ ನೀಡಿದರು. ತೈಮೂರ್ ಆಗಮನವನ್ನ ಇಡೀ ಬಾಲಿವುಡ್ ಸಂಭ್ರಮಿಸಿತು.

ತೈಮೂರ್ ಅಲಿ ಖಾನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದವು. ಮುದ್ದು ಮುದ್ದಾಗಿ ಕಾಣುವ ತೈಮೂರ್ ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ ಅಂದ್ರೆ ನೀವು ನಂಬಲೇಬೇಕು.

ಅಪ್ಪ-ಅಮ್ಮನ ಜೊತೆಗೆ ಎಲ್ಲೇ ಹೊರಗೆ ಬಂದರೂ, ಫೋಟೋಗ್ರಾಫರ್ ಗಳು ತೈಮೂರ್ ಭಾವಚಿತ್ರಗಳನ್ನು ಸೆರೆಹಿಡಿಯಲು ಕಾಯುತ್ತಿರುತ್ತಾರೆ. ಪುಟಾಣಿ ತೈಮೂರ್ ಗೆ ಇಷ್ಟೊಂದು ಜನಪ್ರಿಯತೆ ಇರುವುದಕ್ಕೋ ಏನೋ, ಮಾರುಕಟ್ಟೆಗೆ 'ತೈಮೂರ್' ಗೊಂಬೆಗಳು ಕೂಡ ಲಗ್ಗೆ ಇಟ್ಟಿವೆ.

Taimur Ali Khan dolls in the Market now

ಹೌದು, ಕೇರಳದಲ್ಲಿ ಥೇಟ್ ಸೈಫ್-ಕರೀನಾ ಪುತ್ರ ತೈಮೂರ್ ನಂತೆ ಕಾಣುವ ಗೊಂಬೆಗಳನ್ನ ಮಾರಾಟ ಮಾಡಲಾಗುತ್ತಿದೆ. ಅಚ್ಚರಿ ಅಂದ್ರೆ ಆ ಗೊಂಬೆಗೆ ತೈಮೂರ್ ಅಂತಲೇ ಹೆಸರಿಡಲಾಗಿದೆ.

ಖ್ಯಾತ ನಿರ್ಮಾಪಕಿ ಅಶ್ವಿನಿ ಯಾರ್ಡಿ ಕೇರಳಕ್ಕೆ ಹೋಗಿದ್ದಾಗ, 'ತೈಮೂರ್ ಗೊಂಬೆ'ಯನ್ನ ಕಂಡು ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಹಾಗ್ನೋಡಿದ್ರೆ, ತೈಮೂರ್ ಗಿನ್ನೂ ಎರಡು ವರ್ಷ ತುಂಬಿಲ್ಲ. ಅಷ್ಟು ಬೇಗ ತೈಮೂರ್ ಇಷ್ಟೊಂದು ಜನಪ್ರಿಯತೆ ಗಳಿಸಿದ್ದಾರೆ.

More from Filmibeat

English summary
Bollywood Actor Saif Ali Khan-Kareena Kapoor Khan son Taimur Ali Khan dolls in the Market now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X