»   » ಮಗನಿಗೆ 1.3 ಕೋಟಿ ವೆಚ್ಚದ ಗಿಫ್ಟ್ ಕೊಟ್ಟ ಸೈಫ್ ಅಲಿ ಖಾನ್.!

ಮಗನಿಗೆ 1.3 ಕೋಟಿ ವೆಚ್ಚದ ಗಿಫ್ಟ್ ಕೊಟ್ಟ ಸೈಫ್ ಅಲಿ ಖಾನ್.!

Posted By:
Subscribe to Filmibeat Kannada

ಮಕ್ಕಳ ದಿನಾಚರಣೆಯ ಪ್ರಯುಕ್ತ ಸಿನಿಮಾ ತಾರೆಯರು ತಮ್ಮ ಮಕ್ಕಳಿಗೆ ಉಡುಗೊರೆಗಳನ್ನ ನೀಡುವುದು ಸಾಮಾನ್ಯ. ಈ ಬಾರಿಯ ಮಕ್ಕಳ ದಿನಾಚರಣೆಗೆ ಸೈಫ್ ಅಲಿ ಖಾನ್ ದಂಪತಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಹೌದು, ಮಕ್ಕಳ ದಿನಾಚರಣೆಯ ವಿಶೇಷವಾಗಿ ಸೈಫ್ ಅಲಿ ಖಾನ್ ತಮ್ಮ ಮಗನಿಗೆ 1.3 ಕೋಟಿ ವೆಚ್ಚದ ಗಿಫ್ಟ್ ನೀಡಿದ್ದಾರೆ. ಕೆಂಪು ಬಣ್ಣದ 'swanky Jeep Grand Cherokee SRT' ಕಾರ್ ಖರೀದಿಸಿದ್ದು, ತೈಮೂರ್ ಗೆ ಮೊದಲ ಗಿಫ್ಟ್ ಆಗಿದೆ.

Taimur received a gift from his father Saif

''ಮಕ್ಕಳ ಸುರಕ್ಷತೆ ತುಂಬ ಮುಖ್ಯ. ಈ ಜೀಪ್ ತುಂಬ ಸುರಕ್ಷತೆಯಿಂದ ಕೂಡಿದೆ. ಹಿಂಬದಿಯಲ್ಲಿ ಮಗುವಿಗಾಗಿ ಬೇಬಿ ನೀಟ್ ಇದೆ. ತೈಮೂರ್ ಜೊತೆ ಮೊದಲ ಡ್ರೈವ್ ಹೋಗಲು ಕಾತುರದಿಂದ ಇದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇನ್ನು ಡಿಸೆಂಬರ್ ನಲ್ಲಿ ತೈಮೂರ್ ಹುಟ್ಟುಹಬ್ಬವಿದೆ. ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಮುಂಚೆಯೇ ತಮ್ಮ ಮಗನಿಗೆ ದುಬಾರಿ ಗಿಫ್ಟ್ ನೀಡಿರುವುದು ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

English summary
Taimur received a gift on his first Children’s day. This gift has been given by his father Saif, who is worth about Rs 1.3 crore. ಮಕ್ಕಳ ದಿನಾಚರಣೆಯ ವಿಶೇಷವಾಗಿ ನಟ ಸೈಫ್ ಅಲಿ ಖಾನ್ 1.3 ಕೋಟಿ ವೆಚ್ಚದ ಉಡುಗೊರೆಯನ್ನ ಮಗನಿಗೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada