ಕಾಬೂಲ್ ವಶಪಡಿಸಿಕೊಂಡ ತಾಲಿಬಾನ್; ಅಫ್ಘಾನ್ ಮಹಿಳೆಯರಿಗಾಗಿ ಪ್ರಾರ್ಥಿಸಿ ಎಂದ ಬಾಲಿವುಡ್

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಕ್ಕೆ ಪಡೆದಿದ್ದಾರೆ. ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಸಾವಿರಾರು ಮಂದಿ ದೇಶ ತೊರೆದು ಕಾಬೂಲ್ ನಿಂದ ಹೊರಡುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಜಮಾಯಿಸಿದ್ದು, ಸಾವಿರಾರು ಮಂದಿ ವಿಮಾನ ಏರಲು ಮುಗಿಬಿದ್ದಿದ್ದಾರೆ. ಈ ವೇಳೆ ಅನೇಕರು ಸಾವನ್ನಪ್ಪದ್ದಾರೆ ಎಂದು ವರದಿಯಾಗಿದೆ.

ಕಾಬೂಲ್‌ನಲ್ಲಿದ್ದ ಬೇರೆ ಬೇರೆ ದೇಶದ ಪ್ರಜೆಗಳು ನಮ್ಮ ದೇಶ ಸೇರಿಕೊಳ್ಳಲು ಪರದಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜಮಾಯಿಸಿರುವ ಜನರು ಗುಂಪು ಮತ್ತು ವಿಮಾನ ಏರಲು ಮುಗಿಬಿದ್ದಿರುವ ಜನರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಬೂಲ್ ಪರಿಸ್ಥಿತಿ ನೋಡಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ಅಫ್ಘಾನಿಸ್ತಾನ ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಈಗಾಗಲೇ ತಾಲಿಬಾನ್ ಉಗ್ರರು ಅಧ್ಯಕ್ಷೀಯ ಅರಮನೆಯನ್ನು ವಶಪಡಿಸಿಕೊಂಡಿದೆ. ಬಳಿಕ ದೇಶದ ಧ್ವಜವನ್ನು ಕೆಳಗಿಳಿಸಿ, ತಾಲಿಬಾನ್ ಧ್ವಜವನ್ನು ಹಾರಿಸಿದ್ದಾರೆ. ಭೀಕರ ಪರಿಸ್ಥಿತಿ ಎದುರಿಸುತ್ತಿರುವ ತಾಲಿಬಾನ್ ನೆರವಿಗೆ ಧಾವಿಸುವಂತೆ ನೆಟ್ಟಿಗರು ವಿಶ್ವ ನಾಯಕರಲ್ಲಿ ಒತ್ತಾಯಿಸುತ್ತಿದ್ದಾರೆ. ಮುಂದೆ ಓದಿ...

ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ಪ್ರಾರ್ಥಿಸಿ

ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ಪ್ರಾರ್ಥಿಸಿ

ಕಾಬೂಲ್‌ನಿಂದ ಹೊರಬರಲು ಸಾವಿರಾರು ಜನ ಪರದಾಡುತ್ತಿದ್ದಾರೆ. ಕಾಬೂಲ್ ಪರಿಸ್ಥಿತಿ ಬಗ್ಗೆ ಮತ್ತು ಅಲ್ಲಿನ ಮಹಿಳೆಯರ ಬಗ್ಗೆ ಬಾಲಿವುಡ್ ನಟಿಯರು ಪ್ರತಿಕ್ರಿಯೆ ನೀಡಿ, ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ ಮತ್ತು ಎಲ್ಲರೂ ಪ್ರಾರ್ಥಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸ್ವರಾ ಭಾಸ್ಕರ್, ರಿಯಾ ಚಕ್ರವರ್ತಿ, ಕಂಗನಾ ರಣಾವತ್, ಅರ್ಮನ್ ಮಲ್ಲಿಕ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಶೇರ್ ಮಾಡಿ ಅಫ್ಘಾನಿಸ್ತಾನದ ಜನರಿಗಾಗಿ ಪ್ರಾರ್ಥಿಸಿದ್ದಾರೆ.

ರಿಯಾ ಚಕ್ರವರ್ತಿ ಪೋಸ್ಟ್

ರಿಯಾ ಚಕ್ರವರ್ತಿ ಪೋಸ್ಟ್

ರಿಯಾ ಚಕ್ರವರ್ತಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ ಶೇರ್ ಮಾಡಿ ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ನೋವು ಹೊರಹಾಕಿದ್ದಾರೆ. "ಜಗತ್ತಿನಾದ್ಯಂತ ಮಹಿಳೆಯರು ವೇತನ ಸಮಾನತೆಗೆ ಹೋರಾಡುತ್ತಿದ್ದರೆ, ಅಫ್ಘಾನಿಸ್ತಾನದಲ್ಲಿ ಮಹಿಳೆಯರೇ ವೇತನ ಆಗಿ ಮಾರ್ಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯನ್ನು ಕಂಡು ಹೃದಯಛಿದ್ರವಾಗಿದೆ. ಜಾಗತಿಕ ನಾಯಕರಿಗೆ ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿ. ಮಹಿಳೆಯರು ಕೂಡ ಮನುಷ್ಯರೆ" ಎಂದು ಬರೆದುಕೊಂಡಿದ್ದಾರೆ.

ಸ್ವರಾ ಭಾಸ್ಕರ್-ಅರ್ಮನ್ ಮಲಿಕ್ ಪ್ರತಿಕ್ರಿಯೆ

ಸ್ವರಾ ಭಾಸ್ಕರ್-ಅರ್ಮನ್ ಮಲಿಕ್ ಪ್ರತಿಕ್ರಿಯೆ

ಬಾಲಿವುಡ್ ನ ಮತ್ತೋರ್ವ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಮಾನ ನಿಲ್ದಾಣದ ಹೃದಯ ವಿದ್ರಾವಕ ಘಟನೆ ಶೇರ್ ಮಾಡಿ ಹಾರ್ಟ್ ಬ್ರೇಕ್ ಇಮೋಜಿ ಇರಿಸಿದ್ದಾರೆ. ಖ್ಯಾತ ಗಾಯಕ ಅರ್ಮನ್ ಮಲಿಕ್ ಕೂಡ ಅಫ್ಘಾನ್ ಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿ ನೋಡಲು ನಿಜಕ್ಕೂ ದುಃಖವಾಗುತ್ತಿದೆ. ನನ್ನ ಪ್ರಾರ್ಥನೆ ಮತ್ತು ಆಲೋಚನೆ ಜನರೊಂದಿಗೆ ಇದೆ" ಎಂದು ಹೇಳಿದ್ದಾರೆ.

ಕಂಗನಾ ರಣಾವತ್ ಪ್ರತಿಕ್ರಿಯೆ

ಕಂಗನಾ ರಣಾವತ್ ಪ್ರತಿಕ್ರಿಯೆ

ಕಂಗನಾ ರಣಾವತ್ ಕೂಡ ಟ್ವೀಟ್ ಮಾಡಿ, ಅಫ್ಘಾನಿಸ್ತಾನವನ್ನು ಉಳಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧೀರ್ಘವಾದ ಪೋಸ್ಟ್ ಹಾಕಿದ್ದಾರೆ. "ಪ್ಯಾಲೆಸ್ಟೈನ್ ಮುಸ್ಲಿಮರು ಅಫ್ಘಾನಿಸ್ತಾನ ಮುಸ್ಲಿಮರ ಕ್ರೂರ ರಕ್ತಪಾತವನ್ನು ಆನಂದಿಸುತ್ತಿದ್ದಾರೆ. ಸಿಎಎಯನ್ನು ಪ್ರಸ್ತಾಪಿಸಿ ಎಲ್ಲಾ ಹಿಂದೂಗಳು, ಸಿಖ್, ಜೈನ, ಪಾರ್ಸಿ, ಕ್ರಿಶ್ಚಿಯನ್ ಮತ್ತು ಎಲ್ಲಾ ನೆರೆೆಹೊರೆಯ ಇಸ್ಲಾಮಿಕ್ ರಾಷ್ಟ್ರಗಳ ಇತರ ಅಲ್ಪಸಂಖ್ಯಾತಿಗೆ ವಾಸಿಸಲು ಅವಕಾಶಕೊಟ್ಟ ನಮ್ಮ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಾವು ಇಡೀ ಅಫ್ಘಾನಿಸ್ತಾನವನ್ನು ಉಳಿಸಬೇಕೆಂದು ಬಯಸುತ್ತೇನೆ. ಅದು ಮನೆಯಿಂದನೇ ಪ್ರಾರಂಭವಾಗಬೇಕಿದೆ. ಅಫ್ಘಾನಿಸ್ತಾನಕ್ಕಾಗಿ ಪ್ರಾರ್ಥಿಸುತ್ತಿದ್ದೀವೆ" ಎಂದು ಬರೆದುಕೊಂಡಿದ್ದಾರೆ.

ನಟ ಸೋನು ಸೂದ್

ನಟ ಸೋನು ಸೂದ್

ನಟ ಸೋನು ಸೂದ್ ಟ್ವೀಟ್ ಮಾಡಿ, "ಅಫ್ಘಾನಿಸ್ತಾನ ಸ್ಟ್ರಾಂಗ್ ಆಗಿರಿ. ಇಡೀ ಜಗತ್ತು ನಿಮಗಾಗಿ ಪ್ರಾರ್ಥಿಸುತ್ತಿದೆ. ಎಂದು ಹೇಳಿದ್ದಾರೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ. ಇತ್ತೀಚಿಗಷ್ಟೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಧಾರ್ಮಿಕ ಮುಖಂಡರಿಗೆ ಆದೇಶ ನೀಡಿದ್ದು, 15 ವರ್ಷ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷಗ ಒಳಗಿನ ಮಹಿಳೆಯರ ಲಿಸ್ಟ್ ನೀಡುವಂತೆ ಹೇಳಿದೆ. ತಾಲಿಬಾನ್ ಉಗ್ರರ ಜೊತೆ ಮದುವೆ ಮಾಡಿಸಲು" ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

More from Filmibeat

English summary
Taliban takes over Kabul, Bollywood Celebs pray for women in Afghanistan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X