ರೂಮರ್ಡ್ ಬಾಯ್‌ಫ್ರೆಂಡ್ ಜೊತೆ ತಮನ್ನಾ ಡಿನ್ನರ್ ಡೇಟ್: ಒಂದೇ ಕಾರಿನಲ್ಲಿ ಸುತ್ತಾಟ

ನಟಿ ತಮನ್ನಾ ಹಾಗೂ ಖಳನಟ ವಿಜಯ್ ವರ್ಮಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಬಗ್ಗೆ ಮಿಲ್ಕಿಬ್ಯೂಟಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಪರೋಕ್ಷವಾಗಿ ಇದೆಲ್ಲಾ ಸುಳ್ಳು ಎಂದು ಹೇಳಿದ್ದರು. ಇದೀಗ ವಿಜಯ್ ಜೊತೆ ತಮನ್ನಾ ಡಿನ್ನರ್‌ ಡೇಟ್‌ಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ. ಕಾರ್ ಏರಿ ಇಬ್ಬರು ಸುತ್ತಾಡಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಜೋಡಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಇಬ್ಬರು ಲಿಪ್‌ಲಾಕ್‌ ಮಾಡಿದ್ದರು ಎಂದು ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸು ಗುಸು ಶುರುವಾಗಿತ್ತು. ಇನ್ನು ಈ ಹಿಂದೆ ಮಿಲ್ಕಿ ಬ್ಯೂಟಿನ ಟೊಮೆಟೊ ಎಂದು ಸಂಬೋಧಿಸಿ ವಿಜಯ್ ಮಾಡಿದ್ದ ಇನ್‌ಸ್ಟಾ ಪೋಸ್ಟ್ ವೈರಲ್ ಆಗಿತ್ತು. ವಿಜಯ್ ತನ್ನ ಪ್ರಿಯತಮೆಗೆ ಈ ರೀತಿ ಮುದ್ದು ಹೆಸರು ಇಟ್ಟುಕೊಂಡಿದ್ದಾರೆ ಅಂತೆಲ್ಲಾ ಚರ್ಚೆ ನಡೆದಿತ್ತು. ಇದೀಗ ಇಬ್ಬರು ಒಟ್ಟಿಗೆ ಸುತ್ತಾಡುವ ವಿಡಿಯೋ ಚಕ್ಕರ್ ಹೊಡೀತಿದೆ.

Tamanna Bhatia Steps Out For Dinner Date With Rumoured Boyfriend Vijay Varma; Video viral

ಮುಂಬೈನಲ್ಲಿ ಜೋಡಿ ಡಿನ್ನರ್‌ ಡೇಟ್‌ಗೆ ಹೊರಟಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಇದನ್ನು ನೋಡಿದವರು ಇದು ಬರೀ ಫ್ರೆಂಡ್‌ಶಿಪ್‌ ಮಾತ್ರನಾ? ಇಲ್ಲಾ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಇನ್ನು ಹೊಟೇಲ್‌ನಿಂದ ಹೊರ ಬಂದ ಜೋಡಿ ಮಾಧ್ಯಮಗಳ ಕ್ಯಾಮರಾಗಳನ್ನು ನೋಡಿ ಭಯ ಬೀಳಲಿಲ್ಲ. ಕ್ಯಾಮರಾಗಳಿಗೆ ಹಾಯ್ ಹೇಳಿ ಹೊರಟಿದ್ದಾರೆ. ಗೋವಾದ ನ್ಯೂ ಇಯರ್ ಪಾರ್ಟಿ ಸಮಯದಲ್ಲೇ ಇಬ್ಬರ ರಿಲೇಷನ್‌ಶಿಪ್‌ ಬಗ್ಗೆ ಸುಳಿವು ಸಿಕ್ಕಿತ್ತು.

ಬಾಲಿವುಡ್‌ನ 'ಪಿಂಕ್', 'ಸೂಪರ್ 30', 'ಗಲ್ಲಿ ಬಾಯ್', 'ಭಾಗಿ- 3' ಸಿನಿಮಾಗಳಲ್ಲಿ ವಿಜಯ್ ವರ್ಮಾ ನಟಿಸಿದ್ದಾರೆ. ತೆಲುಗಿನ ಒಂದು ಸಿನಿಮಾದಲ್ಲೂ ವಿಲನ್ ಆಗಿ ಅಬ್ಬರಿಸಿದ್ದಾರೆ. ಮಿಲ್ಕಿ ಬ್ಯೂಟಿ ಮದುವೆ ಬಗ್ಗೆ ಸಾಕಷ್ಟು ದಿನಗಳಿಂದ ಗುಸುಗುಸು ಕೇಳಿ ಬರ್ತಿದೆ. ಮುಂಬೈ ಮೂಲದ ಉದ್ಯಮಿ ಒಬ್ಬರನ್ನು ಮದುವೆ ಆಗುತ್ತಾರೆ? ಚಿನ್ನದ ವ್ಯಾಪಾರ ಒಬ್ಬರ ಕೈ ಹಿಡಿಯುತ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ವಿಡಿಯೋವೊಂದಕ್ಕೆ ಶೇರ್ ಮಾಡಿ ಪರೋಕ್ಷವಾಗಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದರು.

ನಟಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕನ್ನಡದ 'KGF' ಹಾಗೂ 'ಜಾಗ್ವಾರ್' ಸಿನಿಮಾ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆದ ಮಿಲ್ಕಿಬ್ಯೂಟಿ ಮೊದಲು ಸಕ್ಸಸ್ ಸಿಕ್ಕಿದ್ದು ದಕ್ಷಿಣದ ಸಿನಿಮಾಗಳಲ್ಲಿ. ನಂತರ ಬಾಲಿವುಡ್ ಮಂದಿ ಕೂಡ ಕರೆದು ಒಳ್ಳೆ ಅವಕಾಶಗಳನ್ನು ಕೊಟ್ಟರು. ಸದಯ ಹೊಸ ನಟಿಯರ ಆರ್ಭಟದ ನಡುವೆ ಮಿಲ್ಕಿಬ್ಯೂಟಿ ಕ್ರೇಜ್ ಕಮ್ಮಿ ಆಗಿದೆ. ದೊಡ್ಡ ಸಿನಿಮಾಗಳು ಆಕೆಗೆ ಸಿಗುತ್ತಿಲ್ಲ. ತೆಲುಗು, ತಮಿಳಿನ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿದ್ದಾರೆ. ಸ್ಟಾರ್ ನಟರು ನಾಯಕಿಯರನ್ನು ರಿಪೀಟ್ ಮಾಡದ ಕಾರಣ ತಮನ್ನಾಗೆ ಅವಕಾಶಗಳು ಕಮ್ಮಿ ಆಗಿದೆ.

Tamanna Bhatia Steps Out For Dinner Date With Rumoured Boyfriend Vijay Varma; Video viral

ಚಿರಂಜೀವಿ ನಟನೆಯ 'ಭೋಳಾ ಶಂಕರ್', ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾಗಳು ತಮನ್ನಾ ಕೈಯಲ್ಲಿವೆ. ಇದರ ಜೊತೆಗೆ ತಮಿಳಿನ 'ಅರನ್ಮಣೈ', ಮಲಯಾಲಂ ಬಾಂದ್ರಾ, ಬಾಲಿವುಡ್‌ನ 'ಬೋಲೆ ಚೂಡಿಯಾ' ಸಿನಿಮಾಗಳಲ್ಲಿ ಮಿಲ್ಕಿಬ್ಯೂಟಿ ಬಣ್ಣ ಹಚ್ಚಿದ್ಧಾರೆ. 'ಚಾಂದ್‌ ಸೆ ರೋಷನ್ ಚೆಹ್ರಾ' ಚಿತ್ರದ ಮೂಲಕ ತಮನ್ನಾ ಚಿತ್ರರಂಗಕ್ಕೆ ಬಂದರು. ಆದರೆ 5 ವರ್ಷಗಳ ನಂತರ ತಮಿಳಿನ 'ಪಯ್ಯಾ' ಸಿನಿಮಾದಿಂದ ಒಳ್ಳೆ ಬ್ರೇಕ್ ಸಿಕ್ಕಿತ್ತು. ಅಲ್ಲಿಂದ ಮುಂದೆ ಪ್ರಭಾಸ್‌, ಜ್ಯೂ. ಎನ್‌ಟಿಆರ್‌, ರಾಮ್‌ಚರಣ್, ದಳಪತಿ ವಿಜಯ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಗೆದ್ದರು.

More from Filmibeat

English summary
Tamanna Bhatia Steps Out For Dinner Date With Rumoured Boyfriend Vijay Varma; Video viral. Recently rumoured couple was spotted in Mumbai city. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X