ತಮನ್ನಾ ಮದುವೆಗೆ ಮುಹೂರ್ತ ಫಿಕ್ಸ್, ಮನೆ ಹುಡುಕುತ್ತಿದ್ದಾರೆ ಮಿಲ್ಕಿ ಬ್ಯೂಟಿ..!
ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಬಣ್ಣದ ಮೋಹಕ್ಕೆ 19 ವರ್ಷಗಳು ಉರುಳಿವೆ.
ಇಂಥಾ ತಮನ್ನಾ ಈಗ ಹಸೆಮಣೆ ಏರಲು ಅಣಿಯಾಗಿದ್ದಾರೆ. ಹೌದು, ತಮ್ಮ ಅಂದ-ಚೆಂದದಿಂದ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುವ ತಮನ್ನಾ ಹೈದ್ರಾಬಾದ್‌ನ ಚೆಲುವ ವಿಜಯ್ ವರ್ಮಾಗೆ ಮನ ಸೋತು ಅನೇಕ ದಿನಗಳಾಗಿವೆ. ಹೋದಲ್ಲಿ.. ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ.. ತಮನ್ನಾ ಪಕ್ಕ ವಿಜಯ್ ವರ್ಮಾ ಇರಲೇಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಇನ್ನೂ ತಮನ್ನಾ ಈ ಹಿಂದೆ ಎರಡು ಪ್ರೀತಿಯಲ್ಲಿ ನೊಂದು ಬೆಂದವರು. ಹೀಗಾಗಿಯೇ ಬೇಗ ಮದ್ವೆಯಾಗುವ ಸಲಹೆಯನ್ನು ತಮನ್ನಾಗೆ ಇಲ್ಲಿಯವರೆಗೆ ಅನೇಕರು ನೀಡಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಅವರದ್ದು ಹೇಳಿ ಮಾಡಿಸಿದ ಜೋಡಿಯೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರ ದೃಷ್ಟಿಯನ್ನು ಕೂಡ ತೆಗೆದಿದ್ದಾರೆ. ಅದ್ಯಾಗೂ ತಮನ್ನಾ ಇಲ್ಲಿಯವರೆಗೆ ಮದುವೆಯಾಗುವ ಮನಸನ್ನು ಮಾಡಿರಲಿಲ್ಲ. ಆದರೆ ಈಗ ತಮನ್ನಾ ತಮ್ಮ ಪ್ರಿಯಕರ ವಿಜಯ್ ವರ್ಮಾ ಜೊತೆ ಸಪ್ತಪದಿಯನ್ನು ತುಳಿಯುವ ಮನಸು ಮಾಡಿದಂತೆ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯಕ್ಕೆ ತಮನ್ನಾ ಮತ್ತು ವಿಜಯ್ ವರ್ಮಾ ಅವರ ಮದುವೆಯ ಕುರಿತು ಮುಂಬೈ ಮತ್ತು ಹೈದ್ರಾಬಾದ್‌ನ ಚಿತ್ರಪಂಡಿತರು ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಇಬ್ಬರು ಅದ್ಧೂರಿಯಾಗಿ ಮದುವೆಯಾಗಲಿದ್ದಾರಂತೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಮನ್ನಾ ಮತ್ತು ವಿಜಯ್ ವರ್ಮಾ ಜೊತೆಯಲ್ಲಿ ವಾಸ ಮಾಡಲು ಭವ್ಯವಾದ ಬಂಗಲೆಯನ್ನು ಹುಡುಕುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಹೀಗಾಗಿ 2025ರಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಮದುವೆ ಖಚಿತ- ನಿಶ್ಚಿತ ಅಂತಲೇ ಎಲ್ಲರೂ ಭಾವಿಸಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಈಗಿಂದಾನೇ ಶುಭಾಶಯವನ್ನು ಕೂಡ ಕೋರಲು ಶುರುಮಾಡಿದ್ದಾರೆ. ಆದರೆ, ವಿಜಯ್ ವರ್ಮಾ ಆಗಲಿ, ತಮನ್ನಾ ಆಗಲಿ ಈ ವಿಚಾರದ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲ.ತಮ್ಮ ಮದುವೆಯ ಕುರಿತು ಹಬ್ಬಿರುವ ಈ ಸುದ್ದಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿಲ್ಲ.
ಅಂದ್ಹಾಗೇ ಕೆಲ ದಿನಗಳ ಹಿಂದೆ ತಮ್ಮ ಸಂಬಂಧದ ಕುರಿತು ಮಾತನಾಡಿದ್ದ ವಿಜಯ್ ವರ್ಮಾ ಎಲ್ಲರಿಗೂ ಬೇರೆಯವರ ಜೀವನದಲ್ಲಿ ಏನೆಲ್ಲ ಆಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅದಕ್ಕೆ ನಾವೇನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಜಗತ್ತು ಇರುವುದೇ ಹಾಗೇ, ಕೆಲಸದಲ್ಲಿ ನನ್ನಿಂದ ತಪ್ಪಾದರೆ ಹೇಳಿ ಆಗ ನಾನು ತಿದ್ದಿಕೊಳ್ಳುತ್ತೇನೆ ಎಂದು ಕೂಡ ವಿಜಯ್ ವರ್ಮಾ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
ಮುಂದುವರೆದು ಪ್ರೀತಿ ಮಾಡಿದ ನಂತರ ಜಗಕೆ ಯಾಕೆ ಹೆದರಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದ ವಿಜಯ್ ವರ್ಮಾ, ಇಬ್ಬರು ಒಪ್ಪಿದ ಮೇಲೆ, ಇಬ್ಬರು ಜೊತೆಯಾಗಿ ಕಾಲ ಕಳೆಯುವ ನಿರ್ಧಾರವನ್ನು ಮಾಡಿದ ಮೇಲೆ, ಕದ್ದು-ಮುಚ್ಚಿ ಓಡಾಡುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದರು. ನಮ್ಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೂ ನಾವು ನಮ್ಮ ಸಂಬಂಧದಲ್ಲಿ ಇನ್ನೂ ಖಾಸಗಿತನ ಉಳಿಸಿಕೊಂಡಿದ್ದೇವೆ ಎಂದು ಕೂಡ ಹೇಳಿದ್ದರು.
ಇನ್ನೂ ತಮನ್ನಾ ಸಂಬಂಧಗಳಲ್ಲಿ ಸುಳ್ಳು ಹೇಳುವರನ್ನು ಕೂಡ ನಾವು ಯಾವತ್ತು ನಂಬಬಾರದು ಎಂದು ಹೇಳಿದ್ದರು. ಚಿಕ್ಕ ಚಿಕ್ಕ ವಿಚಾರಕ್ಕೆಲ್ಲ ಸುಳ್ಳು ಹೇಳುವವರು ಹುಟ್ಟಾ ಸುಳ್ಳುಗಾರರಾಗಿರುತ್ತಾರೆ ಎಂದು ಹೇಳಿದ್ದ ತಮನ್ನಾ ಸುಳ್ಳಿನ ಮೇಲೆ ಸಂಬಂಧದ ಸೌಧ ಕಟ್ಟಿ ನಿಲ್ಲಿಸಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದರು. ಒಂದು ಸಂಬಂಧ ಯಶಸ್ವಿಯಾಗಿ ಮುಂದುವರೆಯಬೇಕೆಂದರೆ ಪುರುಷರಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಎಂದು ಹೇಳಿದ್ದರು.


Click it and Unblock the Notifications











