ಪಾಕ್ ಕ್ರಿಕೆಟಿಗನ ಜೊತೆ ಮದುವೆ; ಮೌನ ಮುರಿದ ತಮನ್ನಾ ಭಾಟಿಯಾ

ಸಿನಿಮಾ ತಾರೆಯರ ಡೇಟಿಂಗ್, ಮದುವೆ, ಡಿವೋರ್ಸ್ ವಿಚಾರ ಭಾರೀ ಸದ್ದು ಮಾಡುತ್ತದೆ. ಕೆಲವರು ಕದ್ದು ಮುಚ್ಚಿ ಓಡಾಡುವುದು ಇದೆ. ಆದರೆ ಬಹಳ ದಿನ ಇದು ಗುಟ್ಟಾಗಿ ಉಳಿಯುವುದಿಲ್ಲ. ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ಮಾಡಿದ್ದು ಗೊತ್ತೇಯಿದೆ. ಬಳಿಕ ಇಬ್ಬರೂ ದೂರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂತು.

ಇತ್ತೀಚಿನ ವರ್ಷಗಳಲ್ಲಿ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ತಮನ್ನಾ ಹೆಜ್ಜೆ ಹಾಕುವುದೇ ಹೆಚ್ಚು. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಮಿಲ್ಕಿ ಬ್ಯೂಟಿಗೆ ಕೆಲ ವರ್ಷಗಳ ಹಿಂದೆ ಇದ್ದ ಕ್ರೇಜ್ ಈಗ ಇಲ್ಲ. ವಿಜಯ್ ವರ್ಮಾ ಜೊತೆಗಿನ ಲವ್ವಿ ಡವ್ವಿ ಕಾರಣಕ್ಕೆ ಇತ್ತೀಚೆಗೆ ತಮನ್ನಾ ಸುದ್ದಿಯಾಗಿದ್ದರು.

Tamannaah Bhatia Breaks Silence on Dating and Marriage Rumors with Virat Kohli and Abdul Razzaq

ತಮನ್ನಾ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿತ್ತು. ಆಕೆ ಸ್ಪಷ್ಟನೆ ನೀಡದ ಕಾರಣ ಅದನ್ನು ಬಹುತೇಕ ನಂಬಿಬಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಂತೆ ಕಂತೆ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಹಿಂದೆ ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ಮಿಲ್ಕಿ ಬ್ಯೂಟಿ ಮದುವೆ ಎಂದು ಗುಲ್ಲಾಗಿತ್ತು. ಕ್ರಿಕೆಟಿಗ ವಿರಾಕ್ ಕೊಹ್ಲಿ ಜೊತೆಗೂ ಹೆಸರು ತಳುಕು ಹಾಕಿಕೊಂಡಿತ್ತು. The Lallantop ಯೂಟ್ಯೂಬ್ ಸಂದರ್ಶನದಲ್ಲಿ ತಮನ್ನಾ ಮಾತನಾಡಿದ್ದಾರೆ. ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ತಮನ್ನಾ "ಇನ್ನು ಬೇಸರವಾಯಿತು, ನಾನು ವಿರಾಟ್ ಕೊಹ್ಲಿ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ. ಆ ಜಾಹೀರಾತು ಚಿತ್ರೀಕರಣದ ಬಳಿಕ ಎಂದೂ ಭೇಟಿ ಮಾಡಲಿಲ್ಲ. ನಂತರ ಅವರೊಟ್ಟಿಗೆ ಮಾತನಾಡಲೂ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆಗಿನ ಮದುವೆ ವದಂತಿ ಬಗ್ಗೆ ಕೂಡ ತಮನ್ನಾ ಮಾತನಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಇಬ್ಬರೂ ಒಂದು ಆಭರಣ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆ ಸಮಯದಲ್ಲಿ ಇಂತಾದೊಂದು ಊಹಾಪೋಹ ಶುರುವಾಗಿತ್ತು. "ತಮಾಷೆ ಅಂದ್ರೆ ತಮಾಷೆ, ಇಂಟರ್‌ನೆಟ್ ಅಂದ್ರೆ ಫನ್. ಇಂಟರ್‌ನೆಟ್ ಪ್ರಕಾರ ನಾನು ಅಬ್ದುಲ್ ರಜಾಕ್ ಅವರನ್ನು ಮದುವೆ ಆಗಿಬಿಟ್ಟಿದ್ದೆ" ಎಂದು ತಮನ್ನಾ ನಕ್ಕಿದ್ದಾರೆ.

Tamannaah Bhatia Breaks Silence on Dating and Marriage Rumors with Virat Kohli and Abdul Razzaq

ಮುಂಬೈನಲ್ಲಿ ಹುಟ್ಟಿ ಬೆಳೆದ ತಮನ್ನಾ ಒಂದು ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಬಳಿಕ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದರು. ತಮಿಳಿಕ 'ಕೆಡಿ', 'ವ್ಯಾಬಾರಿ' ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನ 'ಹ್ಯಾಪಿಡೇಸ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಪ್ರಯೋಜನವಾಲಿಲ್ಲ. ಕೊನೆಗೆ ತಮಿಳಿನ 'ಪಯ್ಯಾ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಮುಂದೆ ಸೂರ್ಯ, ಅಜಿತ್, ವಿಜಯ್ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ಅವಕಾಶ ಗಿಟ್ಟಿಸಿಕೊಂಡಿದ್ದರು.

ತೆಲುಗಿನಲ್ಲಿ ನಾಗಾರ್ಜುನ, ಚಿರಂಜೀವಿ, ಜ್ಯೂ. ಎನ್‌ಟಿಆರ್, ರಾಮ್‌ಚರಣ್, ಪ್ರಭಾಸ್ ಹೀಗೆ ಸ್ಟಾರ್ ನಟರೊಟ್ಟಿಗೆ ನಟಿಸಿ ಸೈ ಎನಿಸಿಕೊಂಡರು. ಬಳಿಕ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಕರೆದು ಅವಕಾಶ ಕೊಟ್ಟರು. ಆಗೊಮ್ಮ ಈಗೊಮ್ಮೆ ಸ್ಪೆಷಲ್ ಸಾಂಗ್‌ಗಳಲ್ಲಿ ಬಿಂದಾಸ್ ಆಗಿ ಕುಣಿದು ರಂಜಿಸಲು ಆರಂಭಿಸಿದ್ದರು. ಕನ್ನಡದ ಯಾವುದೇ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ನಟಿಸಿಲ್ಲ. ಆದರೆ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

'ಜಾಗ್ವಾರ್' ಚಿತ್ರದಲ್ಲಿ 'ಸಂಪಿಗೆ ಎಣ್ಣೆ' ಎಂದು ಕುಣಿದಿದ್ದ ತಮನ್ನಾ 'KGF' ಚಿತ್ರದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು' ಎಂದು ಹೆಜ್ಜೆ ಹಾಕಿ ರಂಗೇರಿಸಿದ್ದರು.

More from Filmibeat

English summary
Tamannaah Bhatia on Dating Rumors with Abdul Razzaq
Read more about: tamannaah bhatia hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X