'ನಶಾ' ಹಾಡಿನಲ್ಲಿ ಬೆಣ್ಣೆಯಂತೆ ಅಂದ ಚೆಂದ ಉಣಬಡಿಸಲು ತಮನ್ನಾ ಪಡೆದ ಸಂಭಾವನೆ ಎಷ್ಟು?

ಸಿನಿಮಾ ನಾಯಕಿಯರು ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಲು ಆರಂಭಿಸಿ ದಶಕಗಳೇ ಕಳೆದಿದೆ. ಸಿನಿಮಾ ಸೋಲು ಗೆಲುವಿನ ತಲೆನೋವು ಇಲ್ಲದೇ, ತಿಂಗಳಗಟ್ಟಲೆ ಕಾಲ್‌ಶೀಟ್ ಕೊಡದೇ ಒಂದೆರಡು ದಿನ ಹೆಜ್ಜೆ ಹಾಕಿ ಲಕ್ಷ ಲಕ್ಷ ಎಣಿಸೋಕೆ ನಟಿಮಣೀಯರು ಮುಂದಾಗಿದ್ದಾರೆ. ಈಗ ಲಕ್ಷ ಅಲ್ಲ ಐಟಂ ಸಾಂಗ್‌ಗಳಿಗೆ ಕುಣಿಯಲು ಕೋಟಿ ಕೇಳುತ್ತಿದ್ದಾರೆ.

ಒಂದ್ಕಾಲದಲ್ಲಿ ಕ್ಯಾಬರೆ ಡ್ಯಾನ್ಸ್ ಟ್ರೆಂಡ್ ಆಗಿತ್ತು. ಅಂತಹ ಹಾಡುಗಳಿಗೆ ಹೆಜ್ಜೆ ಹಾಕಲು ಕೆಲ ನಟಿಮಣಿಯರು ಇರುತ್ತಿದ್ದರು. ಬಳಿಕ ಸಿಲ್ಕ್ ಸ್ಮಿತಾ, ಡಿಸ್ಕೋಶಾಂತಿ, ಅನುರಾಧರಂತಹ ನಟಿಯರು ಮಾದಕ ನೃತ್ಯ ಮಾಡಿ ಗಮನ ಸೆಳೆಯುತ್ತಿದ್ದರು. ಬಳಿಕ ನಿಧಾನವಾಗಿ ಬಾಲಿವುಡ್ ಸ್ಟಾರ್ ನಟಿಯರೇ ಸ್ಪೆಷಲ್ ಸಾಂಗ್‌ಗಳಿಗೆ ಕುಣಿಯಲು ಆರಂಭಿಸಿದರು. ಕರೀನಾ ಕಪೂರ್, ಕತ್ರೀನಾ ಕೈಫ್ ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಈಗ ತಮನ್ನಾ ಹವಾ ನಡೀತಿದೆ.

Tamannaah Bhatia Remuneration For Nasha Song in Ajay Devgn s Raid- 2

ಕಮರ್ಷಿಯಲ್ ಸಿನಿಮಾಗಳಲ್ಲಿ ಒಂದು ಬಿಂದಾಸ್ ಸಾಂಗ್ ಇರಬೇಕು. ಜನಪ್ರಿಯ ನಟಿ ಕುಣಿಯಬೇಕು, ಅದನ್ನು ನೋಡಿ ಪಡ್ಡೆ ಹುಡುಗರು ಎಂಜಾಯ್ ಮಾಡಬೇಕು ಎನ್ನುವ ಲೆಕ್ಕಾಚಾರ ಚಿತ್ರರಂಗದಲ್ಲಿದೆ. ಸದ್ಯ ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಈ ಕ್ರೇಜ್ ಹೆಚ್ಚಾಗಿದೆ. ವಿಶೇಷ ಅಂದ್ರೆ ಮಿಲ್ಕಿ ಬ್ಯೂಟಿ ತಮನ್ನಾ ಐಟಂ ಸಾಂಗ್‌ಗೆ ಕುಣಿಯಬೇಕು ಎನ್ನುವ ಬೇಡಿಕೆ ಇತ್ತೀಚೆಗೆ ಹೆಚ್ಚಾಗಿದೆ.

ತಮನ್ನಾ ಹೆಜ್ಜೆ ಹಾಕಿದರೆ ಸಾಂಗ್ ಹಿಟ್ ಆಗುತ್ತದೆ. ಸಹಜವಾಗಿಯೇ ಚಿತ್ರಕ್ಕೆ ಬಲ ಬಂದಂತಾಗುತ್ತದೆ ಎನ್ನುವ ನಂಬಿಕೆ ಚಿತ್ರರಂಗದಲ್ಲಿದೆ. ಅದಕ್ಕಾಗಿ ಆಕೆ ಕೇಳಿದಷ್ಟು ಸಂಭಾವನೆ ಕೊಡುವವರು ಇದ್ದಾರೆ. ಇತ್ತೀಚೆಗೆ ತಮನ್ನಾಗಿ ನಾಯಕಿಯಾಗಿ ದೊಡ್ಡ ಅವಕಾಶಗಳು ಸಿಗುತ್ತಿಲ್ಲ. ಹೊಸ ನಟಿಯರ ನಡುವೆ ಮಿಲ್ಕಿ ಬ್ಯೂಟಿಗೆ ಡಿಮ್ಯಾಂಡ್ ಕಮ್ಮಿ ಆಗಿದೆ. ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯೋಕೆ ಮಾತ್ರ ಅವಕಾಶ ಅರಸಿ ಬರ್ತಿದೆ. 'ಜೈಲರ್' ಚಿತ್ರದ 'ಕಾವಾಲಯ್ಯ' ಸಾಂಗ್ ಹುಟ್ಟಾಕ್ಕಿದ ಕ್ರೇಜ್ ಗೊತ್ತೇಯಿದೆ.

'ಕಾವಾಲಯ್ಯ' ಇತ್ತೀಚೆಗೆ 'ಸ್ತ್ರೀ- 2' ಚಿತ್ರದ 'ಆಜ್ ಕಿ ರಾತ್' ಸಾಂಗ್ ಕೂಡ ಸೂಪರ್ ಹಿಟ್ ಆಗಿತ್ತು. ಚಿತ್ರದ ಸಕ್ಸಸ್‌ನಲ್ಲಿ ಪಾಲು ಪಡೆದಿತ್ತು. ಮಾದಕ ಮೈಮಾಟದ ಮಲ್ಕಿ ಬ್ಯೂಟಿ ಒಳ್ಳೆ ಡ್ಯಾನ್ಸರ್ ಕೂಡ. ಸದ್ಯ ಬಾಲಿವುಡ್‌ 'ರೈಡ್-2' ಚಿತ್ರದ 'ನಶಾ' ಸಾಂಗ್ ಮೂಲಕ ತಮನ್ನಾ ಮೋಡಿ ಮಾಡುತ್ತಿದ್ದಾರೆ. ಬಿಂದಾಸ್ ಐಟಂ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ವೈಟ್ ನಾಯ್ಸ್ ಕಲೆಕ್ಟಿವ್ಸ್ ಮ್ಯೂಸಿಕ್‌ನಲ್ಲಿ ಸಾಂಗ್ ಕೇಳೋಕೆ ಮಜಾ ಕೊಡ್ತಿಲ್ಲ. ಆದರೆ ತಮನ್ನಾ ಅಂದ ಚೆಂದ ಪ್ರದರ್ಶಿಸುತ್ತಾ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದಾರೆ. ಜಾಸ್ಮಿನ್ ಸ್ಯಾಂಡ್ಲಾಸ್, ಸ್ಯಾಚೆಟ್ ಟಂಡನ್ ಮತ್ತು ದಿವ್ಯಾ ಕುಮಾರ್ ದನಿಯಾಗಿರುವ ಹಾಡಿಗೆ ಜಾನಿ ಸಾಹಿತ್ಯ ಬರೆದಿದ್ದಾರೆ. ಭಾರೀ ಸೆಟ್ ಹಾಕಿ ಬಹಳ ಅದ್ಧೂರಿಯಾಗಿ ಸಾಂಗ್ ಸೆರೆಹಿಡಿಯಲಾಗಿದೆ. ತಮನ್ನಾ ಎಕ್ಸ್‌ಪ್ರೆಶನ್, ಎನರ್ಜಿ ಹಾಗೂ ಸ್ಕ್ರೀನ್ ಪ್ರಸೆನ್ಸ್ ಸಿಂಪ್ಲಿ ಸೂಪರ್ ಎನ್ನುವಂತಿದೆ. ಪಿಯೂಷ್-ಶಾಜಿಯಾ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.

ಗೋಲ್ಡ್ ಕಲರ್ ಬ್ಲೌಸ್ ಹಾಗೂ ಥೈ ಸ್ಲಿಟ್ ಇರುವ ಬಿಳಿ ಬಣ್ಣದ ಸ್ಕರ್ಟ್ ಧರಿಸಿ ಹಳ ಮಾದಕವಾಗಿ ತಮನ್ನಾ ಮಿಂಚಿದ್ದಾರೆ. ತಮ್ಮ ಬೆಲ್ಲಿ ಡ್ಯಾನ್ಸ್ ಮೂವ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ದಶಕಗಳ ಹಿಂದೆ ಸ್ಪೆಷಲ್ ಸಾಂಗ್‌ಗಳಿಗೆ ಕುಣಿಯುವ ನಟಿಯರಿಗೆ ಹೆಚ್ಚು ಸಂಭಾವನೆ ಸಿಗುತ್ತಿರಲಿಲ್ಲ. ಆದರೆ ಸ್ಟಾರ್ ನಟಿಯರೇ ಹೆಜ್ಜೆ ಹಾಕಲು ಸೈ ಎಂದಾಗ ಭಾರೀ ಸಂಭಾವನೆ ಕೇಳಲು ಆರಂಭಿಸಿದರು. ತಮನ್ನಾ ಕೂಡ ಐಟಂ ಸಾಂಗ್‌ಗಳಿಗೆ ಹೆಚ್ಚು ಸಂಬಳ ಕೇಳುತ್ತಾರೆ. ಸದ್ಯ 'ರೈಡ್-2' ಚಿತ್ರದ 'ನಶಾ' ಸಾಂಗ್‌ಗೆ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಅದಕ್ಕಿಂತ ಹೆಚ್ಚು ಕೊಟ್ಟಿದ್ದರೂ ಅಚ್ಚರಿ ಪಡಬೇಕಿಲ್ಲ ಎನ್ನುವವರು ಇದ್ದಾರೆ.

ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ತಮನ್ನಾ ಐಟಂ ಸಾಂಗ್ ಹೆಚ್ಚು ಸದ್ದು ಮಾಡುತ್ತದೆ. ಜನ ಸಿನಿಮಾ ನೋಡಲು ಬರುವುದಕ್ಕಿಂತ ಆಕೆಯ ಡ್ಯಾನ್ಸ್ ನೋಡೋಕೆ ಬರ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. 'ಜೈಲರ್' ಹಾಗೂ 'ಅರನ್ಮಣೆ' ಸಿನಿಮಾ ರಿಲೀಸ್ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಇಂತಾದೊಂದು ಮಾತು ಕೇಳಿಬಂದಿತ್ತು.

More from Filmibeat

English summary
How much did Tamannaah Bhatia for Raid- 2 film Nasha Song;
Read more about: song tamannaah bhatia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X