ನನ್ನಂತ ಸಂಗಾತಿ ಸಿಕ್ಕಿದ್ದಕ್ಕೆ ಆತ ಸಂಭ್ರಮಿಸಬೇಕು, ಆ ಅದೃಷ್ಟವಂತ...- ತಮನ್ನಾ ಭಾಟಿಯಾ

ಬಿಂದಾಸ್ ಬೆಡಗಿ ತಮನ್ನಾ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಮಿಂಚುತ್ತಿದ್ದಾರೆ. ನಟ ವಿಜಯ್ ವರ್ಮಾ ಜೊತೆ ಪ್ರೀತಿಲಿ ಬಿದ್ದಿದ್ದ ಮಿಲ್ಕಿ ಬ್ಯೂಟಿ ಬಳಿಕ ದೂರಾಗಿದ್ದಾರೆ ಎನ್ನಲಾಗ್ತಿದೆ. 'ಡು ಯು ವಾಂಟ್ ಅ ಪಾರ್ಟ್‌ನರ್' ವೆಬ್ ಸೀರಿಸ್ ಪ್ರಚಾರದ ವೇಳೆ ತಮನ್ನಾ ತಮ್ಮ ಮದುವೆ ಬಗ್ಗೆ NDTV ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮಿಲ್ಕಿ ಬ್ಯೂಟಿ ಈಗ ತಮ್ಮ ಜೀವನ ಮತ್ತು ಪ್ರೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ವಿಜಯ್ ವರ್ಮಾ ಅವರೊಂದಿಗಿನ ಬ್ರೇಕಪ್‌ ಬಗ್ಗೆ ಆಕೆ ಮಾತಾಡಿಲ್ಲ. ಬದಲಿಗೆ ತಾವು ಯಾವ ರೀತಿಯ ಸಂಗಾತಿಯಾಗಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ. "ನಾನು ಉತ್ತಮ ಜೀವನ ಸಂಗಾತಿಯಾಗಲು ಪ್ರಯತ್ನಿಸುತ್ತಿದ್ದೇನೆ. ಈಗ ನನ್ನ ಪ್ರಯತ್ನ ಅದೇ. ಯಾರೋ ತಮ್ಮ ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಕ್ಕೆ ನಾನು ಅವರ ಜೀವನದಲ್ಲಿ ಬಂದಿದ್ದೇನೆ ಎಂದು ಭಾವಿಸುವಂತಹ ಸಂಗಾತಿಯಾಗಲು ನಾನು ಬಯಸುತ್ತೇನೆ. ಆ ಅದೃಷ್ಟಶಾಲಿ ವ್ಯಕ್ತಿ ಯಾರು ಎಂಬುದನ್ನು ನೋಡಬೇಕು, ನಾನು ಅದಕ್ಕಾಗಿ ಶ್ರಮಿಸುತ್ತಿದ್ದೇನೆ" ಎಂದು ತಮನ್ನಾ ಹೇಳಿರುವುದು ವೈರಲ್ ಆಗ್ತಿದೆ.

Tamannaah Bhatia Reveals the Kind of Partner She Wants Sparks Speculation

ಎರಡು ವರ್ಷಗಳ ಹಿಂದೆ ವಿಜಯ್ ವರ್ಮಾ ಹಾಗೂ ತಮನ್ನಾ ಡೇಟಿಂಗ್ ವಿಚಾರ ಬಹಿರಂಗವಾಗಿತ್ತು. ಇಬ್ಬರೂ 'ಲಸ್ಟ್ ಸ್ಟೋರಿಸ್- 2' ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಇದೇ ವೇಳೆ ಶುರುವಾದ ಪರಿಚಯ ಬಳಿಕ ಸ್ನೇಹವಾಗಿ ಬದಲಾಗಿತ್ತು. ನಂತರ ಅದು ಪ್ರೀತಿಯಾಗಿ ಮಾರ್ಪಡಲು ಬಹಳ ಸಮಯ ಬೇಕಾಗಲಿಲ್ಲ. 2023 ಇಬ್ಬರೂ ಗುಟ್ಟಾಗಿ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಆ ವೀಡಿಯೋ ಲೀಕ್ ಆಗಿ ಡೇಟಿಂಗ್ ಬಗ್ಗೆ ಗುಲ್ಲಾಗಿತ್ತು.

ಬಳಿಕ ಮುಂಬೈ ಬೀದಿಗಳಲ್ಲಿ ಇಬ್ಬರೂ ಕಾರ್ ಏರಿ ಸುತ್ತಾಡಲು ಆರಂಭಿಸಿದರು. ಡಿನ್ನರ್ ಪಾರ್ಟಿಗೆ ಒಟ್ಟಿಗೆ ಹೋಗಲು ಆರಂಭಿಸಿದ್ದರು. ಹಾಗಾಗಿ ಇಬ್ಬರ ಲವ್ ಸ್ಟೋರಿ ಖಚಿತವಾಗಿತ್ತು. ಬಳಿಕ ಇಬ್ಬರೂ ಸಂದರ್ಶನಗಳಲ್ಲಿ ಈ ಬಗ್ಗೆ ಮಾತಾಡಿದ್ದರು. ಆದರೆ ಒಂದೂವರೆ ವರ್ಷದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎನ್ನುವ ಊಹಾಪೋಹ ಕೇಳಿಬಂತು. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಲಿಲ್ಲ. ಈಗ ತಮನ್ನಾ ಮಾತನಾಡುತ್ತಿರುವುದು ನೋಡಿ ಅದು ನಿಜ ಎಂದೇ ಕೆಲವರು ಭಾವಿಸುತ್ತಿದ್ದಾರೆ.

Tamannaah Bhatia Reveals the Kind of Partner She Wants Sparks Speculation

ಶೀಘ್ರದಲ್ಲೇ ಹೊಸ ಪಾರ್ಟ್ನರ್ ಸಿಗ್ತಾರೆ, ಆ ಅದೃಷ್ಟವಂತ ಯಾರೋ ಗೊತ್ತಿಲ್ಲ ಎಂದು ತಮನ್ನಾ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಶೀಘ್ರದಲ್ಲೇ ಮಿಲ್ಕಿಬ್ಯೂಟಿ ಹಸೆಮಣೆ ಏರುತ್ತಾರಾ? ಎನ್ನುವ ಅನುಮಾನ ಮೂಡಿಸಿದೆ.

ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಡು ಯು ವಾಂಟ್ ಅ ಪಾರ್ಟ್‌ನರ್' ಶೋ ಸ್ಟ್ರೀಮಿಂಗ್ ಆರಂಭಿಸಿದೆ. ಶ್ವೇತಾ ತಿವಾರಿ, ನೀರಜ್ ಕಬಿ, ಜಾವೇದ್ ಜಾಫ್ರಿ, ನಕುಲ್ ಮೆಹ್ತಾ, ಸೂಫಿ ಮೋಟಿವಾಲಾ ಮತ್ತು ರಣ್‌ವಿಜಯ್ ಸಿಂಘಾ ಕೂಡ ಬಣ್ಣ ಹಚ್ಚಿ ನಟಿಸಿದ್ದಾರೆ. ನಟಿಸಿದ್ದಾರೆ. ಅರ್ಚಿತ್ ಕುಮಾರ್ ಮತ್ತು ಕಾಲಿನ್ ಡಿ'ಕುನ್ಹಾ ಆಕ್ಷನ್ ಕಟ್ ಹೇಳಿದ್ದು ಕರಣ್ ಜೋಹರ್, ಆದಾರ್ ಪೂನವಾಲ ಹಾಗೂ ಅಪೂರ್ವ ಮೆಹ್ತಾ ಬಂಡವಾಳ ಹೂಡಿದ್ದಾರೆ.

ತಮನ್ನಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದು ಕಮ್ಮಿ ಆಗಿದೆ. ಹೊಸಬರ ಆರ್ಭಟದ ನಡುವೆ ಮೊದಲಿನಂತೆ ದೊಡ್ಡ ಅವಕಾಶಗಳು ಸಿಗುತ್ತಿಲ್ಲ. ಆದರೆ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಕಮಾಲ್ ಮಾಡುತ್ತಿದ್ದಾರೆ. ಅದಕ್ಕಾಗಿ ಒಳ್ಳೆ ಸಂಭಾವನೆ ಪಡೆಯುತ್ತಿದ್ದಾರೆ.

More from Filmibeat

English summary
After Breakup Buzz, Tamannaah Shares Her Views on Love & Partnership
Read more about: tamannaah bhatia hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X