ರಿಹರ್ಸಲ್‌ನಲ್ಲೂ ಅದೇ ಗ್ರೇಸ್, ಜೋಶ್, ಬಿಂದಾಸ್; ತಮನ್ನಾ ಅಂದ ಚೆಂದ ಥಕಧಿಮಿತ

ಇತ್ತೀಚಿನ ಸಿನಿಮಾಗಳಲ್ಲಿ ಸ್ಪೆಷಲ್‌ ಸಾಂಗ್ಸ್ ಕ್ರೇಜ್ ಕಮ್ಮಿ ಆಗಿದೆ. ಆದ್ರೂ ಸ್ಟಾರ್ ನಟಿಯರು ಕೊಂಚ ಬೋಲ್ಡ್ ಆಗಿ ಹೆಜ್ಜೆ ಹಾಕಿದರೆ ಹಿಟ್ ಆಗುತ್ತದೆ. ಅದಕ್ಕೆ ತಾಜಾ ಉದಾಹರಣೆ 'ಸ್ತ್ರೀ-2' ಚಿತ್ರದ 'ಆಜ್ ಕಿ ರಾತ್' ಸಾಂಗ್.

ಮೊನ್ನೆ ಮೊನ್ನೆ ತಮನ್ನಾ ಸ್ಪೆಷಲ್ ಸಾಂಗ್‌ಗಳ ಬಗ್ಗೆ ತಮಿಳು ನಟ ಪಾರ್ತಿಬನ್ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. ಬಳಿಕ ಅದಕ್ಕೆ ಅವರು ಸ್ಪಷ್ಟನೆ ನೀಡಿದ್ದರು. ಈಗ ಏನಿದ್ದರೂ ತಮನ್ನಾ ಡ್ಯಾನ್ಸ್ ಮೊದಲು, ಸಿನಿಮಾ ಕಥೆ ಗಿತೆ ಎಲ್ಲಾ ಆಮೇಲೆ ಎಂದುಬಿಟ್ಟಿದ್ದರು. 'ಜೈಲರ್' ಹಾಗೂ 'ಅರಣ್ಮನೆ'-4 ಸಿನಿಮಾಗಳ ಸ್ಪೆಷಲ್ ಸಾಂಗ್‌ಗಳ ಬಗ್ಗೆ ಪಾರ್ತಿಬನ್ ಹೀಗೆ ಹೇಳಿದ್ದಾರೆ ಎಂದು ಕೆಲವರು ಹೇಳಿದ್ದರು.

Tamannaah Bhatia shares Stree 2 movie Aaj Ki Raat song rehearsal video

'ಸ್ತ್ರೀ-2' ಚಿತ್ರದ ಈ ಸಾಂಗ್ ನೋಡಿದ ಮೇಲೆ ಪಾರ್ತಿಬನ್ ಮಾತು ನಿಜವೇ ಎಂದು ಕೆಲವರು ಹೇಳುತ್ತಿದ್ದಾರೆ. ಆ ಚಿತ್ರಕ್ಕಿಂತ ತಮನ್ನಾ ಹೆಜ್ಜೆ ಹಾಕಿರುವ 'ಆಜ್ ಕಿ ರಾತ್' ಸಾಂಗ್ ಭಾರೀ ಸದ್ದು ಮಾಡ್ತಿದೆ. ಆಕೆ ಮಿಲ್ಕಿ ಬ್ಯೂಟಿ ಪ್ರದರ್ಶಿಸುತ್ತಾ ಹಾಕಿರುವ ಬಿಂದಾಸ್ ಸ್ಟೆಪ್ಸ್ ಪಡ್ಡೆ ಹುಡುಗರ ನಿದ್ದೆ ಕದ್ದಿದೆ. ಹಸಿರು ಬಣ್ಣದ ಶಿಮೆರಿ ಔಟ್‌ಫಿಟ್‌ನಲ್ಲಿ ತಮನ್ನಾ ತನ್ನ ಅಂದ ಚೆಂದ ಪ್ರದರ್ಶನಕ್ಕಿಟ್ಟಿದ್ದರೆ.

ಕವ್ವಾಲಿ ಬೀಟ್ಸ್‌ಗೆ ತಮನ್ನಾ ಸೊಗಸಾಗಿ ಕುಣಿದು ರಂಜಿಸಿದ್ದಾರೆ. ಸಚಿನ್ ಜಿಗರ್ ಸಂಗೀತ, ಅಮಿತಾಬ್ ಬಟ್ಟಾಚಾರ್ಯ ಸಾಹಿತ್ಯ ಸಾಂಗ್‌ಗಿದೆ. ಮಧುಬಂತಿ ಬಾಗ್ಚಿ ಮಾದಕ ಕಂಠದಲ್ಲಿ ಸಾಂಗ್ ಮತ್ತಷ್ಟು ಕಿಕ್ ಕೊಡ್ತಿದೆ. ಇದೀಗ ಡ್ಯಾನ್ಸ್ ರಿಹರ್ಸಲ್ ವೀಡಿಯೋವನ್ನು ತಮನ್ನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ರಾಪ್‌ಟಾಪ್ ಟೀ ಶರ್ಟ್ ಹಾಗೂ ಪ್ಯಾಂಟ್ ತೊಟ್ಟು ಇಬ್ಬರು ಡ್ಯಾನ್ಸರ್ ಜೊತೆ ಅದೇ ಗ್ರೇಸ್‌, ಜೋಶ್‌ನಲ್ಲಿ ತಮನ್ನಾ ಕುಣಿದಿರುವುದು ನೋಡಬಹುದು.

"ಆಜ್ ಕಿ ರಾತ್ ಸಾಂಗ್ ಇಷ್ಟಪಟ್ಟ ಎಲ್ಲರಿಗೂ ಧನ್ಯವಾದ. ಹೇಗೆ ಈ ಸ್ಟೆಪ್ಸ್ ಮಾಡುವುದು ಎಂದು ಕೇಳುವವರಿಗೆ ಇಲ್ಲಿದೆ ನೋಡಿ" ಎಂದು ವೀಡಿಯೋವನ್ನು ತಮನ್ನಾ ಹಂಚಿಕೊಂಡಿದ್ದಾರೆ. ವಿಜಯ್ ಗಂಗೂಲಿ ನಿಮ್ಮ ಕೊರಿಯೋಗ್ರಫಿ ಸೂಪರ್, ನೀವೆಲ್ಲಾ ರೀಲ್ಸ್ ಮಾಡುವುದನ್ನು ನೋಡಲು ಕಾಯುತ್ತಿದ್ದೇನೆ" ಎಂದು ಮಿಲ್ಕಿ ಬ್ಯೂಟಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳು 'ಆಜ್ ಕಿ ರಾತ್' ರಿಹರ್ಸಲ್ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ನೀವು ನಿಜಕ್ಕೂ ಅದ್ಭುತ ಡ್ಯಾನ್ಸರ್ ಎಂದು ಲೈಕ್ಸ್, ಕಾಮೆಂಟ್ಸ್ ಮಾಡಿ ತಮನ್ನಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆಗಸ್ಟ್ 15ಕ್ಕೆ ಕಾಮಿಡಿ ಹಾರರ್ 'ಸ್ತ್ರೀ-2' ಸಿನಿಮಾ ತೆರೆಗೆ ಬರಲಿದೆ. ತಮನ್ನಾ ಈ ಸ್ಪೆಷಲ್ ಸಾಂಗ್‌ನಲ್ಲಿ ಮಾತ್ರ ಹೆಜ್ಜೆ ಹಾಕಿದ್ದಾರೆ.

ಇನ್ನು ತೆಲುಗು ನಟ ವಿಜಯ್ ವರ್ಮಾ ಜೊತೆ ನಟಿ ತಮನ್ನಾ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಈ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಶೀಘ್ರದಲ್ಲೇ ಮದುವೆ ಆಗುವ ಪ್ಲ್ಯಾನ್‌ನಲ್ಲಿದ್ದಾರೆ. ಸದ್ಯ 'ಒಡೆಲ-2' ಎನ್ನುವ ತೆಲುಗು ಚಿತ್ರದಲ್ಲಿ ಮಾತ್ರ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ.

ಈ ಹಿಂದೆ 'ಜೈಲರ್' ಚಿತ್ರದ 'ಕಾವಾಲಯ್ಯ' ಸ್ಪೆಷಲ್ ಸಾಂಗ್ ಸಹ ಹಿಟ್ ಆಗಿತ್ತು. ಅಲ್ಲೂ ತಮನ್ನಾ ಬಿಂದಾಸ್ ಡ್ಯಾನ್ಸ್ ಮೋಡಿ ಮಾಡಿತ್ತು. ಬಳಿಕ ಅರಣ್ಮನೆ-2 ಚಿತ್ರದಲ್ಲಿ ರಾಶಿ ಖನ್ನಾ ಜೊತೆ ಸೇರಿ ತಮನ್ನಾ ಹಾಟ್ ಹಾಟ್ ಸ್ಟೆಪ್ಸ್ ಹಾಕಿದ್ದರು.

More from Filmibeat

English summary
Tamannaah Bhatia Aaj Ki Raat song dance moves goes viral;
Read more about: tamannaah bhatia bollywood song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X