'ವಿ. ಶಾಂತಾರಾಮ್' ಬಯೋಪಿಕ್: ಜಯಶ್ರೀಯಾಗಿ ತಮನ್ನಾ ಬದಲಾಗಿದ್ದೇಗೆ?

ಸಿನಿಮಾ ಮಾಂತ್ರಿಕ ವಿ. ಶಾಂತಾರಾಮ್. ಭಾರತೀಯ ಚಿತ್ರರಂಗ ಕಂಡ ಅದ್ಭುತ ಫಿಲ್ಮ್‌ ಮೇಕರ್. ಅವರ ಜೀವನ ಚರಿತ್ರೆಯು ಈಗ ಬಯೋಪಿಕ್ ಆಗಿ ಮೂಡಿಬರುತ್ತಿದೆ. ಈ ಸುದ್ದಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. 'ಯಶ್ರೀ ಪಾತ್ರಕ್ಕೆ ಮಿಲ್ಕಿ ಬ್ಯೂಟಿ ಜೀವ ತುಂಬುತ್ತಿದ್ದಾರೆ. ಜಯಶ್ರೀ 40ರ ದಶಕದ ಪ್ರಸಿದ್ಧ ನಟಿ. ವಿ. ಶಾಂತಾರಾಮ್ ಪತ್ನಿ ಕೂಡ ಹೌದು. ಹಾಗಾಗಿ ಈ ಪಾತ್ರಕ್ಕೂ ಬಹಳ ಮಹತ್ವ ಇದೆ. ತಮನ್ನಾ ಅವರಿಗೆ ಈ ಐತಿಹಾಸಿಕ ಪಾತ್ರ ಬಹಳ ವಿಶೇಷವಾಗಿದೆ.

Tamannaah Bhatia Shines as Jayashree in V Shantaram s Grand Biopic

ಈ ರೋಮಾಂಚಕ ಪಾತ್ರದ ಬಗ್ಗೆ ತಮನ್ನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಜಯಶ್ರೀ ಪಾತ್ರದಲ್ಲಿ ನಟಿಸುವುದು ನನಗೆ ಬಹಳಷ್ಟು ಕಲಿಸುತ್ತಿದೆ" ಎಂದು ತಮನ್ನಾ ಹೇಳಿದ್ದಾರೆ. ಇದೊಂದು "ಬಹಳ ವಿಶೇಷವಾದ ಮತ್ತು ಅತ್ಯಂತ ತೃಪ್ತಿ ನೀಡಿದ ಅನುಭವ" ಎಂದೂ ಅವರು ವಿವರಿಸಿದ್ದಾರೆ. ಹಳೆಯ ಕಾಲದ ನಟಿಯ ಪಾತ್ರ ಮಾಡುವುದು ಒಂದು ದೊಡ್ಡ ಸವಾಲು. ಅದನ್ನು ಬಹಳ ಖುಷಿಯಿಂದ ಸ್ವೀಕರಿಸಿದ್ದಾರೆ.

ಜಯಶ್ರೀ ಆ ಕಾಲದ ಟಾಪ್ ನಟಿಯರಲ್ಲಿ ಒಬ್ಬರು. ವಿ. ಶಾಂತಾರಾಮ್ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರ ಕರಿಯರ್ ಮತ್ತು ವೈಯಕ್ತಿಕ ಜೀವನವು ಕುತೂಹಲಕಾರಿಯಾಗಿದೆ. ಈ ಬಯೋಪಿಕ್ ಮೂಲಕ ಹಿಂದಿನ ಚಿತ್ರರಂಗದ ಕಷ್ಟ ಸುಖಗಳ ಕಥೆ ಗೊತ್ತಾಗುತ್ತದೆ. ಈ ಪಾತ್ರವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ.

ತಮನ್ನಾ ತಯಾರಿ

ಈ ಪಾತ್ರಕ್ಕೆ ನಟಿ ತಮನ್ನಾ ಬಹಳ ತಯಾರಿ ನಡೆಸಿದ್ದಾರೆ. ಆ ಕಾಲದ ಶೈಲಿ ಮತ್ತು ಬಾಡಿ ಲ್ಯಾಂಗ್ವೇಜ್ ಕಲಿಯುತ್ತಿದ್ದಾರೆ. ಹಳೆಯ ನಟಿಯರ ರೀತಿ ನೀತಿ ಅರ್ಥ ಮಾಡಿಕೊಂಡಿದ್ದಾರೆ. ಮೇಕಪ್ ಮತ್ತು ಕಾಸ್ಟ್ಯೂಮ್ ಸಹ ಹಳೆಯ ಕಾಲದ್ದೇ ಇರಲಿದೆ. ತಮನ್ನಾ ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದಾರೆ. ಚಿತ್ರತಂಡವು ಕೂಡ ರಿಸರ್ಚ್ ಮೇಲೆ ಫೋಕಸ್ ಮಾಡಿದೆ. ಆ ಕಾಲದ ಸೆಟ್ ಮತ್ತು ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ.

ಟರ್ನಿಂಗ್ ಪಾಯಿಂಟ್...

ತಮನ್ನಾ ಭಾಟಿಯಾ ಈಗಾಗಲೇ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದಾರೆ. ಈ ಬಯೋಪಿಕ್ ಅವರ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಲಿದೆ. ಇಂತಹ ಐತಿಹಾಸಿಕ ಪಾತ್ರಗಳು ನಟಿಯರಿಗೆ ಹೊಸ ಗುರುತು ಕೊಡುತ್ತವೆ. ಜಯಶ್ರೀ ಪಾತ್ರವು ತಮನ್ನಾ ನಟನಾ ಸಾಮರ್ಥ್ಯಕ್ಕೆ ನಿಜವಾದ ಅಗ್ನಿಪರೀಕ್ಷೆಯಾಗಿದೆ. ಇದು ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಆಗಲಿದೆ. ಆಕೆ ಈ ಪಾತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.

ಹೆಚ್ಚಿದ ಕುತೂಹಲ

ವಿ. ಶಾಂತಾರಾಮ್ ಅವರಂತಹ ದಿಗ್ಗಜರ ಕಥೆ ಅಂದರೆ ಸಿನಿಪ್ರೇಮಿಗಳಿಗೆ ಒಂದು ಹಬ್ಬ. ತಮನ್ನಾ ಅವರಂಥ ಸ್ಟಾರ್ ನಟಿ ಪಾತ್ರ ಮಾಡುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಚಿತ್ರ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ತಮನ್ನಾ ಜಯಶ್ರೀ ಪಾತ್ರಕ್ಕೆ ಜೀವ ತುಂಬುತ್ತಾರೆ ಎಂಬ ನಂಬಿಕೆ ಇದೆ. ಭಾರತೀಯ ಚಿತ್ರರಂಗದ ಇತಿಹಾಸವನ್ನು ತೆರೆಯ ಮೇಲೆ ನೋಡುವುದು ರೋಚಕ ಅನುಭವ. ಈ ಬಯೋಪಿಕ್ ಒಂದು ಮಾಸ್ಟರ್ ಪೀಸ್ ಆಗುವ ಎಲ್ಲಾ ಲಕ್ಷಣಗಳಿವೆ.

ಹೊಸ ಇಮೇಜ್

ಇತ್ತೀಚಿನ ವರ್ಷಗಳಲ್ಲಿ ತಮನ್ನಾ ನಾಯಕಿಯಾಗಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ಹೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ಹೊಸಬರ ಹಾವಳಿ ನಡುವೆ ಮಿಲ್ಕಿ ಬ್ಯೂಟಿ ಕ್ರೇಜ್ ಕಮ್ಮಿ ಆಗಿದೆ. ಆದರೂ ಕೋಟಿ ಕೋಟಿ ಕೊಟ್ಟು ಡ್ಯಾನ್ಸಿಂಗ್ ನಂಬರ್‌ಗಳಿಗೆ ಕುಣಿಸಲಾಗುತ್ತಿದೆ. ಈ ಬಯೋಪಿಕ್ ಸಿನಿಮಾ ಆಕೆಗೆ ಹೊಸ ಇಮೇಜ್ ಕೊಡುವ ನಿರೀಕ್ಷೆಯಿದೆ.

More from Filmibeat

Read more about: tamannaah bhatia jayashree
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X