»   » ತಮನ್ನಾ ಭಾಟಿಯಾ ಸೆರಗೆಳೆದವರು ಯಾರು?

ತಮನ್ನಾ ಭಾಟಿಯಾ ಸೆರಗೆಳೆದವರು ಯಾರು?

By: ರವಿಕಿಶೋರ್
Subscribe to Filmibeat Kannada

ಪ್ರೇಕ್ಷಕ ಪ್ರಭುಗಳನ್ನು ಚಿತ್ರಮಂದಿರಕ್ಕೆ ಸೆಳೆಯಲು ಚಿತ್ರರಂಗದ ದಣಿಗಳು ಏನೇನೋ ಕಸರತ್ತು ಮಾಡುತ್ತಿರುತ್ತಾರೆ. ಗಿಮ್ಮಿಕ್ ಗಳು ಪ್ರೇಕ್ಷಕರನ್ನು ಸ್ವಲ್ಪ ಮಟ್ಟಿಗೆ ಸೆಳೆಯಬಹುದು ಅಷ್ಟೇ. ಚಿತ್ರದಲ್ಲಿ ಧಂ ಇದ್ದರೆ ಸೆಂಚುರಿ ಬಾರಿಸುತ್ತವೆ. ಇಲ್ಲದಿದ್ದರೆ ಮೂರೇ ದಿನಕ್ಕೆ ಎತ್ತಂಗಡಿ.

ಇದು ಎಲ್ಲರಿಗೂ ಗೊತ್ತಿರುವ ಸಮಾಚಾರವೇ ಆದರೂ ಮತ್ತೊಮ್ಮೆ ನೆನಪಿಸಬೇಕಾಯಿತು. ಈಗ ತಾರೆ ತಮನ್ನಾ ಅವರ ಸೀರೆ ಸಮಾಚಾರಕ್ಕೆ ಬರೋಣ. ಈಕೆಯ ಸೆರಗನ್ನು ಯಾರೋ ಎಳೆಯುತ್ತಿರುವ ಸ್ಟಿಲ್ ಬಿಡುಗಡೆಯಾಗಿದೆ.


ಈ ಫೋಟೋದಲ್ಲಿ ತಮನ್ನಾ ಒಪ್ಪ ಓರಣವಾಗಿ ಸೀರೆ ಉಟ್ಟುಕೊಂಡಿದ್ದಾರೆ. ಅದ್ಯಾರದೋ ಕೈ ಆಕೆಯ ಸೆರಗನ್ನು ಹಿಂದಿನಿಂದ ಹಿಡಿದು ಎಳೆಯುತ್ತಿರುವಂತಿದೆ. ಈ ಕಾಣದ ಕೈ ಯಾರದಪ್ಪಾ ಎಂದು ನೋಡಿದರೆ...

ಇನ್ಯಾರು ಇರಲಿಕ್ಕೆ ಸಾಧ್ಯ? ಇದು 'ಹಿಮ್ಮತ್ ವಾಲಾ' ಚಿತ್ರದ ಟ್ರಿಕ್. ತಮನ್ನಾ ಸೆರಗೆಳೆಯುತ್ತಿರುವುದು ಅಜಯ್ ದೇವಗನ್. ಅಜಯ್ ದೇವಗನ್ ನಾಯಕ ನಟನಾಗಿರುವ ಹಿಮ್ಮತ್ ವಾಲಾ ರೀಮೇಕ್ ಚಿತ್ರ.

1983ರಲ್ಲಿ ತೆರಕಂಡಿದ್ದ ಬ್ಲಾಕ್ ಬಸ್ಟರ್ ಚಿತ್ರ ಹಿಮ್ಮತ್ ವಾಲಾ ರೀಮೇಕ್ ಇದು. ಮೂಲ ಚಿತ್ರದಲ್ಲಿ ಜಿತೇಂದ್ರ ಹಾಗೂ ಶ್ರೀದೇವಿ ಅಭಿನಯಿಸಿದ್ದರು. ಈಗ ಅಜಯ್ ಹಾಗೂ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್ ನಿರ್ದೇಶನದ ಈ ಚಿತ್ರ ಇದೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ.

English summary
Tamannaah Bhatia wears Yellow Saree in Himmatwala. The film features Ajay Devgan opposite Tamannaah in the lead roles. Check out Bollywood Movie Himmatwala 2013 New Still.
Please Wait while comments are loading...