"ವಿಜಯ್ ನನ್ನ ಖುಷಿಯ ಖಜಾನೆ": ಪ್ರೀತಿಲಿ ಬಿದ್ದಿರೋದನ್ನು ಒಪ್ಪಿಕೊಂಡ ಮಿಲ್ಕಿ ಬ್ಯೂಟಿ
ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಪ್ರೀತಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಕೊನೆಗೂ ಈ ವಿಚಾರವನ್ನು ತಮನ್ನಾ ಒಪ್ಪಿಕೊಂಡಿದ್ದಾರೆ. ತಾವು ವಿಜಯ್ ವರ್ಮಾ ಜೊತೆ ರಿಲೇಷನ್‌ಶಿಪ್‌ನಲ್ಲಿರೋದನ್ನು ಸ್ವತಃ ಆಕೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಈ ವರ್ಷ ಹೊಸ ವರ್ಷವನ್ನು ಜೋಡಿ ಗೋವಾದಲ್ಲಿ ಸ್ವಾಗತಿಸಿತ್ತು. ಅಂದಿನಿಂದಲೇ ಭಾರೀ ಚರ್ಚೆ ಶುರುವಾಗಿತ್ತು.
ಹೊಸ ವರ್ಷದ ಸ್ವಾಗತದ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಲಿಪ್‌ಲಾಕ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಮುಂಬೈನಲ್ಲಿ ಹೋಟೆಲ್‌ಗೆ ಡಿನ್ನರ್‌ಗೆ ಜೋಡಿ ಒಟ್ಟಿಗೆ ಕಾರ್ ಏರಿ ಹೋಗಿತ್ತು. ಕ್ಯಾಮರಾಗಳ ಕಡೆ ಕೈ ಬೀಸಿ ಹೋಗಿದ್ದರು. ಆಗ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಅನ್ನೋದು ಮತ್ತಷ್ಟು ಖಾತ್ರಿಯಾಗಿತ್ತು. ಇಬ್ಬರು 'ಲಸ್ಟ್ ಸ್ಟೋರಿಸ್'- 2 ಪ್ರಾಜೆಕ್ಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಶೂಟಿಂಗ್ ವೇಳೆ ಇಬ್ಬರ ಪ್ರೀತಿಲಿ ಬಿದ್ದಿರುವ ಬಗ್ಗೆ ಸುಳಿವು ಸಿಕ್ಕಿತ್ತು.

ಬಾಲಿವುಡ್ ಬೆಡಗಿ ಆದರೂ ತಮನ್ನಾ ಸೌತ್ ಸಿನಿದುನಿಯಾದಲ್ಲಿ ಮೊದಲಿಗೆ ಹೆಸರು ಮಾಡಿದರು. ತಮಿಳು ಸಿನಿಮಾಗಳಲ್ಲಿ ನಟಿಸಿ ಗೆದ್ದ ಬಳಿಕ ಟಾಲಿವುಡ್ ಸ್ಟಾರ್ಸ್ ಜೊತೆ ನಟಿಸಿ ಸೈ ಎನಿಸಿಕೊಂಡರು. ನಂತರ ಬಾಲಿವುಡ್ ಕರೆದು ಅವಕಾಶ ಕೊಟ್ಟಿತ್ತು. ಈ ನಡುವೆ ಕನ್ನಡದ 2 ಐಟಂ ಸಾಂಗ್‌ಗೂ ಕುಣಿದರು. ಇದೆಲ್ಲದರ ನಡುವೆ ವಿಜಯ್ ವರ್ಮಾ ಜೊತೆ ಹೇಗೆ ಪ್ರೀತಿಲಿ ಬಿದ್ರು ಅಂತ ಕೆಲವರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.
ಲವ್ ಸ್ಟೋರಿ ಶುರುವಾಗಿದ್ಹೇಗೆ?
ಕೊನೆಗೂ ತಮನ್ನಾ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಫಿಲ್ಮ್ ಕಂಪಾನಿಯನ್ ಸಂದರ್ಶನದಲ್ಲಿ ಮಿಲ್ಕಿಬ್ಯೂಟಿ ಮಾತನಾಡಿದ್ದಾರೆ. "ಹೌದು ನಾವಿಬ್ಬರು ರಿಲೇಷನ್‌ಶಿಪ್‌ನಲ್ಲಿ ಇದ್ದೀವಿ. 'ಲಸ್ಟ್ ಸ್ಟೋರೀಸ್'- 2 ಸೆಟ್‌ನಲ್ಲಿ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಯಿತು" ಎಂದಿದ್ದಾರೆ. ಸದ್ಯ ಮಿಲ್ಕಿ ಬ್ಯೂಟಿ ಹೇಳಿಕೆ ವೈರಲ್ ಆಗಿದೆ.

ಸಹನಟ ಅಂತ ಇಷ್ಟಪಡಲಿಲ್ಲ
"ಕೇವಲ ಸಹನಟ ಎನ್ನುವ ಕಾರಣಕ್ಕೆ ವಿಜಯ್‌ನ ಇಷ್ಟಪಡಲಿಲ್ಲ. ಯಾರೋ ಒಬ್ಬರು ಸಹನಟ ಆಗಿದ್ದ ಮಾತ್ರಕ್ಕೆ ಅವರೆಡೆಗೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವು ನಟರೊಡನೆ ಅಭಿನಯಿಸಿದ್ದೇನೆ. ಅದ್ಯಾಕೋ ಯಾರ ಕಡೆಗೂ ನಾನು ಆಕರ್ಷಿತಳಾಗಲಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿದ್ದೀರ ಅಂದರೆ, ಭಾವನೆಗಳು ಹುಟ್ಟಿದೆ ಅಂದರೆ ಅದು ಬಹಳ ಖಾಸಗಿ ವಿಷಯವಾಗಿರುತ್ತದೆ. ಆತ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿನಾ ಅನ್ನುವುದೆಲ್ಲ ನಗಣ್ಯ" ಎಂದಿದ್ದಾರೆ.
ಆತ ನನ್ನ ಖುಷಿಯ ಖಜಾನೆ
"ವಿಜಯ್ ವರ್ಮ ಬಹಳ ವಿಶೇಷ. ನನಗೆ ರಕ್ಷಣೆಯಾಗಿ ನಿಲ್ಲುತ್ತಾನೆ ಎನ್ನುವ ನಂಬಿಕೆ ಇದೆ. ನಮ್ಮದು ಆರ್ಗಾನಿಕ್ ಬಂಧ. ನನ್ನನ್ನು ನೋಯಿಸಬೇಕು ಎನ್ನುವವರಿಂದ ರಕ್ಷಿಸುತ್ತಾನೆ. ನನಗಾಗಿ ಒಂದು ಸುಂದರವಾದ ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದೇನೆ. ಅದಕ್ಕೆ ವಿಜಯ್ ಬಂದಿದ್ದಾನೆ. ಅವನು ನನ್ನ ಖುಷಿಯ ಖಜಾನೆ" ಎಂದು ತಮನ್ನಾ ಬಣ್ಣಿಸಿದ್ದಾರೆ.
ವಿಜಯ್ ವರ್ಮಾ ಹಿನ್ನಲೆ
ಹೈದರಾಬಾದ್ ಮೂಲದ ವಿಜಯ್ ವರ್ಮಾ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಪುಣೆ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಅಭಿನಯ ಕಲಿತ ವಿಜಯ್ 'ಚಿತ್ತಗಾಂಗ್' ಚಿತ್ರದಲ್ಲಿ ಮೊದಲಿಗೆ ಬನ್ಣ ಹಚ್ಚಿದ್ದರು. ನಂತರ 'ಪಿಂಕ್', 'ಗ್ಯಾಂಗ್ ಗೋಸ್ಟ್', 'ಸೂಪರ್ 30', 'ಬಾಗಿ - 2', 'ಗಲ್ಲಿ ಬಾಯ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹೈದರಾಬಾದ್ ಮೂಲದವರಾದರೂ ವಿಜಯ್ ದಕ್ಷಿಣದಲ್ಲಿ ನಟಿಸಿದ್ದು ಕಡಿಮೆ. ನಾನಿ ನಟನೆಯ 'ಎಂಸಿಎ' ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದರು.


Click it and Unblock the Notifications











