"ಆವಂತಿಕಾಳನ್ನು ಬಾಹುಬಲಿ ರೇ* ಮಾಡ್ಲಿಲ್ಲ, ಸೆ* ಪ್ರಕೃತಿ ನಿಯಮ"- ತಮನ್ನಾ

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ, ರಮ್ಯಾಕೃಷ್ಣ, ಸತ್ಯರಾಜ್, ತಮನ್ನಾ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಆವಂತಿಕಾ ಪಾತ್ರದ ಬಗ್ಗೆ ಕೊಂಚ ಚರ್ಚೆ ನಡೆದಿತ್ತು. 'ದಿ ರೇ* ಆಫ್ ಆವಂತಿಕಾ' ಹೆಸರಿನಲ್ಲಿ ಒಂದು ಆರ್ಟಿಕಲ್ ಬಂದು ವೈರಲ್ ಆಗಿತ್ತು.

ಬಹಳ ವರ್ಷಗಳ ಬಳಿಕ ನಟಿ ತಮನ್ನಾ ಆ ಆರ್ಟಿಕಲ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ The Lallantop ಯೂಟ್ಯೂಬ್ ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಬಗೆಗಿನ ಸಾಕಷ್ಟು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಭಾರೀ ಚರ್ಚೆ ಹುಟ್ಟಾಕ್ಕಿದ್ದ ಆ ಆರ್ಟಿಕಲ್ ಬಗ್ಗೆಯೂ ಮೌನ ಮುರಿದಿದ್ದಾರೆ. ಆ ಪಾತ್ರ, ಸನ್ನಿವೇಶವನ್ನು ನಿರ್ದೇಶಕ ರಾಜಮೌಳಿ ತಮಗೆ ಹೇಗೆ ಅರ್ಥ ಮಾಡಿಸಿದರು. ನಾನು ನಟಿಸೋಕೆ ಯಾಕೆ ಒಪ್ಪಿಕೊಂಡೆ ಎನ್ನುವ ಬಗ್ಗೆ ವಿವರಿಸಿದ್ದಾರೆ.

Tamannaah Breaks Silence on Avantika Role in Baahubali Responds to Feminist Criticism

'ಬಾಹುಬಲಿ' ಮೊದಲ ಭಾಗದಲ್ಲಿ ಶಿವುಡು ಹಾಗೂ ಆವಂತಿಕಾ ಭೇಟಿ, ಪ್ರೀತಿ, ಪ್ರಣಯದ ಸನ್ನಿವೇಶಗಳಿವೆ. 'ಪಚ್ಚಬೊಟ್ಟು' ಸಾಂಗ್ ಅನ್ನು ಕೊಂಡ ಬೋಲ್ಡ್ ಆಗಿಯೇ ಚಿತ್ರಿಸಲಾಗಿತ್ತು. ಕೆಲ ಸ್ತ್ರೀವಾದಿಗಳು ನಿರ್ದೇಶಕ ರಾಜಮೌಳಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೆಲ್ಲದರ ಬಗ್ಗೆ ತಮನ್ನಾ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

"ನಮ್ಮ ದೇಶದಲ್ಲಿ ರೊಮ್ಯಾನ್ಸ್ ಎನ್ನುವುದನ್ನು ಕೆಟ್ಟದಾಗಿ ನೀಚವಾದದು ಎನ್ನುವಂತೆ ನೋಡುತ್ತಾರೆ. ಅದೇ ಪೋಷಕರು ಅದೇ ಮಾಡದಿದ್ದರೆ ನಾನು ಹುಟ್ಟುತ್ತಲೇ ಇರಲಿಲ್ಲ ಅಲ್ವಾ? ಅದು ಸಹಜ ಪ್ರಕ್ರಿಯೆ. ಅದನ್ನು ಕೂಡ ಕೆಲವರು ಕೆಟ್ಟದು, ಅಸಹ್ಯ ಎನ್ನುವಂತೆ ನೋಡುತ್ತಾರೆ. ಒಳ್ಳೆ ವಿಷಯವನ್ನು ನಾವು ತಪ್ಪಾಗಿ ಭಾವಿಸುತ್ತಿದ್ದೇವೆ. ಅದು ಆ ರೀತಿ ಕಾಣಲು ಅದೇ ಕಾರಣ. ನಾವು ಏನೋ ತಪ್ಪು ಮಾಡ್ತಿದ್ದೀವಿ ಎನ್ನುವ ಭಾವನೆ ಬರುತ್ತದೆ. ಆದರೆ ಅದೇನು ತಪ್ಪುಲ್ಲ" ಎಂದು ತಮನ್ನಾ ಹೇಳಿದ್ದಾರೆ.

Tamannaah Breaks Silence on Avantika Role in Baahubali Responds to Feminist Criticism

ಆವಂತಿಕಾ ಪಾತ್ರದ ಬಗ್ಗೆ ಮಾತನಾಡುತ್ತಾ ರಾಜಮೌಳಿ ಯಾವ ರೀತಿ ಆ ಪಾತ್ರವನ್ನು ವಿಶ್ಲೇಷಿಸಿ ಒಪ್ಪಿಸಿದರು ಎಂದು ತಮನ್ನಾ ಹೇಳಿದ್ದಾರೆ. "ಆ ಪಾತ್ರಕ್ಕೆ ಸಾಕಷ್ಟು ಕೋನಗಳಿವೆ. ಆಕೆ ಬಹಳ ಸುಂದರ ಚೆಲುವೆ. ಆದರೆ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು, ಒಬ್ಬ ಹೋರಾಟಗಾರ್ತಿಯಾಗಿರುತ್ತಾಳೆ. ಒಬ್ಬ ಸ್ತ್ರಿವಾದಿಯಾಗಿರುತ್ತಾಳೆ. ಪ್ರೀತಿ, ಪ್ರೇಮಕ್ಕೆ ಬಹಳ ದೂರವಾಗಿರುತ್ತಾಳೆ. ಒಂದು ಧ್ಯೇಯದೊಂದಿಗೆ ಹೋರಾಡುತ್ತಿರುತ್ತಾಳೆ. ಅಂತಹ ಯುವತಿಗೆ ತಾನು ಯಾರು ಎಂದು ತೋರಿಸುವುದಕ್ಕೆ ಶಿವುಡು ಬರ್ತಾನೆ" ಎಂದು ಮೌಳಿ ಹೇಳಿದ್ದಾಗಿ ತಮನ್ನಾ ನೆನಪಿಸಿಕೊಂಡಿದ್ದಾರೆ.

"ನಾವು ಯಾವುದೇ ವಿಚಾರವನ್ನು ಎಷ್ಟೇ ಸ್ವಚ್ಛವಾಗಿ ತೋರಿಸಿದರೂ ನೋಡುವವರ ನೋಟ ಕೆಟ್ಟದಾಗಿದ್ದರೆ ಅದು ಅದೇ ತರ ಕಾಣುತ್ತದೆ. ಅದು ಅವರ ಮೈಂಡ್‌ಸೆಟ್ ಆಧರಿಸಿರುತ್ತದೆ. ಆವಂತಿಕಾ ಮೇಲೆ ಅಲ್ಲಿ ಯಾವುದೇ ಅತ್ಯಾಚಾರ ನಡೆಯಲಿಲ್ಲ, ಒಬ್ಬ ವ್ಯಕ್ತಿಯಿಂದ ಆಕೆ ತಾನು ಯಾಕೆ ಎಂದು ತಿಳಿದುಕೊಳ್ಳುತ್ತಾಳೆ ಅಷ್ಟೇ" ಎಂದು ತಮನ್ನಾ ಹೇಳಿದ್ದಾರೆ.

ಬಹುಭಾಷಾ ನಟಿ ತಮನ್ನಾ ಪಡ್ಡೆ ಹುಡುಗರ ಹಾಟ್ ಫೇವರಿಟ್. ಇತ್ತೀಚಿಗೆ ಆಕೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಸ್ಪೆಷಲ್ ಸಾಂಗ್‌ಗಳಲ್ಲಿ ಹೆಚ್ಚು ಕುಣಿಯುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಹೆಜ್ಜೆ ಹಾಕಿದ್ದರು. ಇನ್ನು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಒಟ್ಟಿಗೆ ಮಾಡಿ ರೀ-ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಅಕ್ಟೋಬರ್ 31ಕ್ಕೆ 5 ಗಂಟೆಯ ಒಂದೇ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Actress Tamannaah Bhatia speaks out on her controversial role as Avantika in Baahubali, addressing feminist criticism and revealing how director Rajamouli shaped the character;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X