ಒಂದೇ ಚಿತ್ರದಲ್ಲಿ ಜೈಲರ್- ಟೈಗರ್? ನಿರ್ದೇಶಕರು, ನಿರ್ಮಾಪಕರು ಯಾರು?

ಪ್ಯಾನ್ ಇಂಡಿಯಾ ಜಮಾನದಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಸೌತ್ ಸ್ಟಾರ್ಸ್ ಬಾಲಿವುಡ್‌ ಸಿನಿಮಾಗಳಲ್ಲಿ ಅದೇ ರೀತಿ ಬಿಟೌನ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಲ್ಮಾನ್ ಖಾನ್, ರಜನಿಕಾಂತ್ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಈಗಾಗಲೇ ರಜನಿಕಾಂತ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೊಂದು ಕಡೆ ಸಲ್ಮಾನ್ ಖಾನ್ ಕೂಡ ಸೌತ್ ಚಿತ್ರಗಳಲ್ಲಿ ಅಬ್ಬರಿಸಿದ್ದಾರೆ. ಇದೀಗ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಾರೆ ಎನ್ನುವ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಕೂಡ ಇಂತಾದೊಂದು ಸುದ್ದಿ ಬಹಳ ಸದ್ದು ಮಾಡ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ.

Tamil director in talks with Rajinikanth and Salman Khan for his next film

ಸೂಪರ್ ಸ್ಟಾರ್ ರಜನಿಕಾಂತ್. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್. ಇಬ್ಬರಿಗೂ ಭಾರೀ ಕ್ರೇಜ್ ಇದೆ. ಇಬ್ಬರೂ ಅದ್ಭುತ ನಟರಲ್ಲದಿದ್ದರೂ ತಮ್ಮ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ. ಸಲ್ಲು ಬಾಲಿವುಡ್ ರಜನಿಕಾಂತ್ ಎಂದರೂ ತಪ್ಪಾಗಲ್ಲ. ಇತ್ತೀಚೆಗೆ ಹಿಂದಿ ಸಿನಿಮಾಗಳನ್ನು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ತರುತ್ತಿದ್ದಾರೆ. ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಲು ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಸಿದ್ಧವಾಗಿವೆ.

ಕಳೆದ ವರ್ಷ ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾ ಬಾಲಿವುಡ್‌ನಲ್ಲಿ ಹಿಟ್ ಆಗಿತ್ತು. ಶಾರುಖ್ ಖಾನ್ ಸಿನಿಮಾ ನಿರ್ಮಿಸಿ, ನಟಿಸಿ ಗೆದ್ದಿದ್ದರು. ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಬಳಿಕ ಅಲ್ಲು ಅರ್ಜುನ್ ನಟನೆಯ ಚಿತ್ರಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳಬೇಕಿತ್ತು. ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಇದೀಗ ಅಟ್ಲಿ ನಿರ್ದೇಶನದಲ್ಲಿ ರಜನಿಕಾಂತ್, ಸಲ್ಮಾನ್ ಖಾನ್ ನಟಿಸುತ್ತಾರೆ ಎಂದು ಗುಲ್ಲಾಗಿದೆ.

Tamil director in talks with Rajinikanth and Salman Khan for his next film

ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣವಾಗುತ್ತದೆ. ಸಲ್ಲು- ರಜನಿ ಜೊತೆ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರಕ್ಕೆ ಸನ್ ಪಿಕ್ಚರ್ಸ್ ಸಂಸ್ಥೆ ಬಂಡವಾಳ ಹೂಡಿತ್ತು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಿಂದ ಬಂದ ಲಾಭದಲ್ಲಿ ರಜನಿಕಾಂತ್, ನೆಲ್ಸನ್, ಅನಿರುದ್ಧ್‌ಗೆ ಕಾರ್‌ ಗಿಫ್ಟ್ ಕೊಟ್ಟಿದ್ದರು. ಲಾಭದಲ್ಲೂ ಪಾಲು ಕೊಟ್ಟಿದ್ದರು.

ಸದ್ಯ ರಜನಿಕಾಂತ್ ಹಾಗೂ ಲೋಕೇಸ್ ಕನಕರಾಜ್ ಕಾಂಬಿನೇಷನ್‌ 'ಕೂಲಿ' ಚಿತ್ರಕ್ಕೆ ಸನ್ ಪಿಕ್ಚರ್ಸ್ ಹಣ ಹೂಡುತ್ತಿದೆ. ಇದರ ಬೆನ್ನಲ್ಲೇ ಸಲ್ಲು-ತಲೈವಾ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರೂ ಸೂಪರ್ ಸ್ಟಾರ್‌ಗಳನ್ನು ಒಟ್ಟಿಗೆ ಸೇರಿಸುವುದು ಅಷ್ಟು ಸುಲಭವಲ್ಲ. ಇಬ್ಬರೂ ಒಪ್ಪುವುದು ಕಷ್ಟ ಎನ್ನುವ ಮಾತುಗಳು ಕೇಳಿಬರ್ತಿದೆ.

ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯ ಎ. ಆರ್ ಮುರುಗದಾಸ್ ನಿರ್ದೇಶನದ 'ಸಿಕಂದರ್' ಚಿತ್ರದಲ್ಲಿ ಸಲ್ಲು ಬಣ್ಣ ಹಚ್ಚಿದ್ದಾರೆ. ಭರದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ ಎನ್ನಲಾಗ್ತಿದೆ. ಮತ್ತೊಂದು ಕಡೆ ರಜನಿಕಾಂತ್ 'ಕೂಲಿ' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ 'ವೆಟ್ಟೆಯಾನ್' ಶೂಟಿಂಗ್ ಮುಗಿಸಿದ್ದಾರೆ. ಅಕ್ಟೋಬರ್ 10ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Rajinikanth and Salman Khan are reportedly in talks to work together for new film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X