'ಮದಾರಿ'-'ಕಬಾಲಿ' ಪೋಸ್ಟರ್ ಸೇಮ್: ಕಳ್ಳರು ಯಾರು?
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ವಿವಾದವನ್ನು ಕೂಡ ಮೈಮೇಲೆ ಎಳೆದುಕೊಂಡಿದೆ. ಇತ್ತೀಚೆಗೆ ಆಡಿಯೋ ಲಾಂಚ್ ಗೆ ಮುನ್ನವೇ ಹಾಡುಗಳು ಲೀಕ್ ಆಗಿ ಸುದ್ದಿಯಾದ ಮೇಲೆ ಇದೀಗ ಪೋಸ್ಟರ್ ಮೂಲಕ 'ಕಬಾಲಿ' ಸದ್ದು ಮಾಡುತ್ತಿದೆ.
ಅಂದಹಾಗೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಪೋಸ್ಟರ್ ಮತ್ತು ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಮದಾರಿ' ಚಿತ್ರದ ಪೋಸ್ಟರ್ ಎರಡೂ ಒಂದೇ ರೀತಿ ಇದ್ದು, ಕಾಪಿ ಮಾಡಿರುವಂತಿದೆ.['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

ಮುಂಬೈನ ಮಾಲ್ ಒಂದರಲ್ಲಿ 'ಮದಾರಿ' ಚಿತ್ರದ ಪ್ರೊಮೋಷನ್ ನಲ್ಲಿ ಭಾಗವಹಿಸಿದ್ದ ನಟ ಇರ್ಫಾನ್ ಖಾನ್ ಅವರು "ಈ ಪೋಸ್ಟರ್ ಗಳ ಬಗ್ಗೆ ನನಗೇನೂ ಗೊತ್ತಿಲ್ಲ, ನಾವು ಸಣ್ಣ ಚಿತ್ರಗಳ ತಯಾರಕರು, 'ಕಬಾಲಿ' ಚಿತ್ರತಂಡದವರು ನನ್ನ ಚಿತ್ರದ ಪೋಸ್ಟರ್ ಕದ್ದಿರಲೂಬಹುದು".
"ಆದರೂ ಪರವಾಗಿಲ್ಲ, ಸಮಸ್ಯೆ ಏನೂ ಇಲ್ಲ, ಎರಡೂ ಸಿನಿಮಾಗಳನ್ನು ನೋಡಿ ಚಿತ್ರತಂಡದವರನ್ನು ಬೆಂಬಲಿಸಿ ಎಂದು ಪ್ರೇಕ್ಷಕರಿಗೆ ನಟ ಇರ್ಫಾನ್ ಖಾನ್ ಅವರು ಕರೆ ನೀಡಿದ್ದಾರೆ.[ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

ನಟ ಇರ್ಫಾನ್ ಖಾನ್ ಅವರು ಹೇಳುವಂತೆ 'ಮದಾರಿ' ಮತ್ತು 'ಕಬಾಲಿ'ಯ ಪೋಸ್ಟರ್ ಗಳಿಗೆ ತುಂಬಾ ಹೋಲಿಕೆ ಇದೆ. ಎರಡೂ ಪೋಸ್ಟರ್ ನಲ್ಲಿ ಚಿತ್ರದ ನಾಯಕರ ಮುಖಗಳನ್ನು ಬೃಹತ್ ಕಟ್ಟಡಗಳ ನಡುವೆ ಬಿಂಬಿಸಲಾಗಿದೆ. ಇದು ನಿಜವಾಗಿ ಕದ್ದಿದ್ದೋ ಅಥವಾ ಅಭಿಮಾನಿಗಳು ಕೈ ಚಳಕ ತೋರಿದ್ದೋ ಅನ್ನೋದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ವಿಶೇಷ ಅಂದ್ರೆ 'ಕಬಾಲಿ' ಚಿತ್ರತಂಡದವರು ಹೇಳುವ ಪ್ರಕಾರ ಇದು ಚಿತ್ರತಂಡ ಬಿಡುಗಡೆ ಮಾಡಿರುವ ಅಧೀಕೃತ ಪೋಸ್ಟರ್ ಅಲ್ಲ ಎನ್ನುತ್ತಿದೆ. ಯಾರೋ ರಜನಿ ಅಭಿಮಾನಿಗಳು ಇಂಟರ್ ನೆಟ್ ನಲ್ಲಿದ್ದ 'ಮದಾರಿ' ಪೋಸ್ಟರ್ ಕದ್ದು, ಅದಕ್ಕೆ ರಜನಿಕಾಂತ್ ಅವರ ಮುಖ ಅಂಟಿಸಿದ್ದಾರೆ' ಎಂದು ಸ್ಪಷ್ಟನೆ ನೀಡಿದೆ.

ಒಟ್ನಲ್ಲಿ ಯಾವುದು ಸುಳ್ಳು, ಯಾವುದು ಸತ್ಯ, ಯಾರು ಕದ್ರು ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಬೇಕಿದೆ. ಜುಲೈ 15 ಕ್ಕೆ 'ಮದಾರಿ' ತೆರೆ ಕಾಣುತ್ತಿದ್ದು, 'ಕಬಾಲಿ' ಕೂಡ ಅಂದೇ ತೆರೆ ಕಾಣಬೇಕಿತ್ತು. ಆದರೆ ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕೊಂಚ ಬಾಕಿ ಇರೋದ್ರಿಂದ 'ಕಬಾಲಿ' ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications











