For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಸಿನಿಮಾ ಸೆಟ್‌ನಲ್ಲಿ ವಿಜಯ್! ಚಿತ್ರ ವೈರಲ್

  |

  ಒಂದೇ ಒಂದು ಹಿಟ್ ಸಿನಿಮಾ ನೀಡಲು ಬಾಲಿವುಡ್ ಪರದಾಡುತ್ತಿದೆ. ಬಾಲಿವುಡ್‌ ಬಲಾಡ್ಯವಾಗಿದ್ದ ಹಿಂದಿ ಭಾಷಿಕ ಪ್ರದೇಶದಲ್ಲಿ ಸಹ ದಕ್ಷಿಣ ಭಾರತ ಸಿನಿಮಾಗಳು ಕಮಾಲ್ ಮಾಡುತ್ತಿವೆ.

  ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಗಳು ಸಹ ಈಗ ದಕ್ಷಿಣ ಭಾರತ ಚಿತ್ರರಂಗದತ್ತ ವಾಲಿಬಿಟ್ಟಿವೆ. ಖ್ಯಾತ ನಿರ್ಮಾಪಕರಾದ ಬೋನಿ ಕಪೂರ್, ಕರಣ್ ಜೋಹರ್ ಅಂಥಹವರೇ ದಕ್ಷಿಣ ಭಾರತ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿದ್ದಾರೆ.

  ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!

  ಕೊನೆಗೆ ಬಾಲಿವುಡ್ಡಿಗರು ತಮ್ಮ ಸಿನಿಮಾವನ್ನು ಗೆಲ್ಲಿಸಿಕೊಳ್ಳಲು ದಕ್ಷಿಣ ಭಾರತದ ತಂತ್ರಜ್ಞರ, ನಟರ ಮೊರೆ ಹೋಗುತ್ತಿದ್ದಾರೆ. ಬಿಡುಗಡೆ ಆಗಲಿರುವ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಚಾರಕ್ಕಾಗಿ ರಾಜಮೌಳಿಯ ಸಹಾಯ ಕೇಳಿತ್ತು. ಆಮಿರ್ ಖಾನ್ ನಟ ಚಿರಂಜೀವಿಯ ಬೆಂಬಲ ಪಡೆದುಕೊಂಡರು. ಇದೀಗ ಶಾರುಖ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

  ನಟ ಶಾರುಖ್ ಖಾನ್ ತಮ್ಮ ಸಿನಿಮಾ ಗೆಲ್ಲಿಸಿಕೊಳ್ಳಲು ದಕ್ಷಿಣ ಭಾರತದ ನಿರ್ದೇಶಕನನ್ನೇ ಕರೆತಂದಿದ್ದಾರೆ. ಅದು ಮಾತ್ರವೇ ಅಲ್ಲದೆ ತಮ್ಮ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ಅನ್ನು ಅತಿಥಿ ಪಾತ್ರಕ್ಕಾಗಿ ಕರೆತಂದಿದ್ದಾರೆ. ವಿಜಯ್, ಶಾರುಖ್ ಖಾನ್‌ರ ಹೊಸ ಸಿನಿಮಾದ ಸೆಟ್‌ನಲ್ಲಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಶಾರುಖ್ ಖಾನ್ ಹೊಸ ಸಿನಿಮಾ 'ಜವಾನ್'

  ಶಾರುಖ್ ಖಾನ್ ಹೊಸ ಸಿನಿಮಾ 'ಜವಾನ್'

  ಶಾರುಖ್ ಖಾನ್ 'ಜವಾನ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿದ್ದಾರೆ. ಆಕ್ಷನ್ ಭರಿತ ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ತಮಿಳಿನ ಯೋಗಿಬಾಬು ಸೇರಿದಂತೆ ಇತರ ಕೆಲವು ನಟರು ಸಹ ಇದ್ದಾರೆ. ಆದರೆ ಇದೀಗ ಅಟ್ಲಿ ತಮ್ಮ ಜವಾನ್ ಸಿನಿಮಾಕ್ಕೆ ತಮಿಳಿನ ಮಾತ್ರವೇ ಅಲ್ಲದೆ ಭಾರತದ ಅತ್ಯಂತ ಜನಪ್ರಿಯ ನಟನನ್ನು ಕರೆತಂದಿದ್ದಾರೆ.

  'ಜವಾನ್' ಸಿನಿಮಾದಲ್ಲಿ ಅತಿಥಿ ಪಾತ್ರ

  'ಜವಾನ್' ಸಿನಿಮಾದಲ್ಲಿ ಅತಿಥಿ ಪಾತ್ರ

  ನಟ ವಿಜಯ್ ಅವರು ಶಾರುಖ್ ಖಾನ್‌ರ 'ಜವಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದ್ದು. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ಹರಿದಾಡುತ್ತಿದ್ದು, ಶಾರುಖ್ ಖಾನ್ ಜೊತೆ ವಿಜಯ್ ಸಿನಿಮಾ ಚಿತ್ರೀಕರಣದಲ್ಲಿ ಕುಳಿತಿರುವ ಚಿತ್ರ ವೈರಲ್ ಆಗಿದೆ. ಆ ಮೂಲಕ ವಿಜಯ್, ಶಾರುಖ್ ಖಾನ್‌ರ ಸಿನಿಮಾದಲ್ಲಿ ನಟಿಸುತ್ತಿರುವುದು ಖಾತ್ರಿಯಾಗಿದೆ.

  ಅಕ್ಷಯ್ ಸಿನಿಮಾದಲ್ಲಿ ಸ್ಟೆಪ್ ಹಾಕಿರುವ ವಿಜಯ್

  ಅಕ್ಷಯ್ ಸಿನಿಮಾದಲ್ಲಿ ಸ್ಟೆಪ್ ಹಾಕಿರುವ ವಿಜಯ್

  ವಿಜಯ್‌ ಈ ಹಿಂದೆಯೂ ಬಾಲಿವುಡ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಅದು ಬಹಳ ಕಡಿಮೆ ಅವಧಿಗೆ. ಅಕ್ಷಯ್ ಕುಮಾರ್ ನಟನೆಯ 'ರೌಡಿ ರಾಥೋಡ್' ಸಿನಿಮಾದ ಹಾಡೊಂದರಲ್ಲಿ ಮಧ್ಯದಲ್ಲಿ ಬಂದು ಒಂದೆರಡು ಸ್ಟೆಪ್ ಹಾಕಿ ಹೋಗುತ್ತಾರೆ ಅಷ್ಟೆ. ಅದಾದ ಬಳಿಕ ಇದು ಎರಡನೇ ಬಾರಿ ವಿಜಯ್ ಅವರು ಹಿಂದಿ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಶಾರುಖ್ ಸಿನಿಮಾದಲ್ಲಿ ನಟಿಸಿದ್ದ ರಜನೀಕಾಂತ್

  ಶಾರುಖ್ ಸಿನಿಮಾದಲ್ಲಿ ನಟಿಸಿದ್ದ ರಜನೀಕಾಂತ್

  ಇನ್ನು ನಟ ಶಾರುಖ್ ಖಾನ್ ತಮ್ಮ ಸಿನಿಮಾಗಳಲ್ಲಿ ದಕ್ಷಿಣದ ಸ್ಟಾರ್ ನಟರನ್ನು ಅತಿಥಿ ಪಾತ್ರಕ್ಕೆ ಕರೆತರುತ್ತಿರುವುದು ಸಹ ಇದು ಮೊದಲೇನೂ ಅಲ್ಲ. ಈ ಹಿಂದೆ ಶಾರುಖ್ ಅವರೇ ನಿರ್ಮಾಣ ಮಾಡಿದ್ದ ಭಾರಿ ಬಜೆಟ್‌ನ ಸಿನಿಮಾ 'ರಾ ಒನ್' ಸಿನಿಮಾದಲ್ಲಿ ರಜನೀಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆ ಸಿನಿಮಾದಲ್ಲಿ ಹಾಲಿವುಡ್‌ನ ಎಕೋನ್ ಅವರನ್ನು ಕರೆತಂಡು ಹಾಡು ಹಾಡಿಸಿದ್ದರು ಶಾರುಖ್ ಖಾನ್. ಇದು ಮಾತ್ರವೇ ಅಲ್ಲದೆ, ಶಾರುಖ್ ಖಾನ್ ಅವರು ಕಮಲ್ ಹಾಸನ್‌ರ 'ಹೇ ರಾಮ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  English summary
  Tamil star actor Vijay appearing in a cameo role in Shah Rukh Khan's Jawan movie. A pic of Shah Rukh Khan and Vijay sitting together went viral on social media.
  Thursday, August 25, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X