ಬಾಲಿವುಡ್ ನ 'ನಾನಾ' ರೂಪ ; ಮೀಟೂ ಬಾಂಬ್ ಸಿಡಿಸಿದ್ದ ತನುಶ್ರೀ ಯುಟ್ಯೂಬರ್ ಜೊತೆ ಮಾಡಿದ್ದೇನು..?
ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು.
ಆ ನಿರ್ಮಾಪಕ ನೈಟ್ ಔಟಿಗೆ ಕರೆದರೂ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಕೆಲ ಪ್ರಕರಣದಲ್ಲಿ ಮೀಟೂ ಅಭಿಯಾನವನ್ನೇ ಬಂಡವಾಳ ಮಾಡಿಕೊಂಡು, ಕೆಲವರು
ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಹುತೇಕರನ್ನೂ ಕಾಡುತ್ತಿತ್ತು. ಆ ಪೈಕಿ ತನುಶ್ರೀ ದತ್ತಾ ಪ್ರಕರಣವೂ ಒಂದು. ಆ ಅನುಮಾನ ಈಗ ನಿಜವಾಗುವ ಲಕ್ಷಣ ಕಂಡು ಬರುತ್ತಿದೆ. ಇದಕ್ಕೆ ಕಾರಣ ತನುಶ್ರೀ ದತ್ತಾ ಅವರ ಅಸಭ್ಯ ವರ್ತನೆ

ಹೌದು. ನಿಮಗೆ ನೆನಪಿದ್ದರೆ, 'ಆಶಿಕ್ ಬನಾಯಾ ಆಪ್ನೇ' ಚಿತ್ರದ ಮೂಲಕ ಬಣ್ಣದ ಬದುಕು ಆರಂಭ ಮಾಡಿದ್ದ ತನುಶ್ರೀ 2018ರ ಆಚೀಚೆ ಮೀಟೂ ಆರೋಪ ಮಾಡಿದ್ದರು. ಹಾಡೊಂದರ ಚಿತ್ರೀಕರಣ ಸಮಯದಲ್ಲಿ 'ನಾನಾ ಪಾಟೇಕರ್' ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು. ತನುಶ್ರೀಯ ಈ ಹೇಳಿಕೆಯಿಂದ ನಾನಾ ಪಾಟೇಕರ್ ಅವರನ್ನ ಅನೇಕ ಚಿತ್ರಗಳಿಂದ ಕೈ ಬಿಡಲಾಯಿತು ಕೂಡ. ಆದರೆ ಈಗ ಅವತ್ತು ನಾನಾ ಪಾಟೇಕರ್ ವಿರುದ್ಧ ಮೀಟಿದ್ದ ತನುಶ್ರೀ, ಅದ್ಯಾವನೋ ಯುಟ್ಯೂಬರ್ ಜೊತೆ ತನ್ನದೇ 'ಆಪ್ ಕೀ ಕಶಿಶ್' ಎಂಬ ಹಾಡಿಗೆ ತೀರಾ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ತನುಶ್ರೀ ಈ ವಿಡಿಯೋ ನೋಡಿ ಅನೇಕರು ಈಗ ಗಾಬರಿ ಬಿದ್ದಿದ್ದಾರೆ.
ಹೆಚ್ಚು ಕಡಿಮೆ 1.7ಮಿಲಿಯನ್ ಫಾಲೋವರ್ ಹೊಂದಿರುವ, ತಿಗಣೆ ಮುಖದ ಈ ಯೂಟ್ಯೂಬರ್ ಜೊತೆ ತನುಶ್ರೀ ನಿರಾಂತಕವಾಗಿ, ನಿರ್ಭಿತಿಯಾಗಿ ಕುಣಿಯುವುದನ್ನ ಕಂಡ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು, ಸದ್ಯಕ್ಕೆ ತನುಶ್ರೀಯ ಆತ್ಮಸಾಕ್ಷಿಯನ್ನೂ ಪ್ರಶ್ನೆ ಮಾಡುತ್ತಿದ್ದಾರೆ. ಛೀಮಾರಿಯನ್ನೂ ಹಾಕುತ್ತಿದ್ದಾರೆ.

ಇದಕ್ಕೆ ಪೂರಕವಾಗಿ 'ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ' ಎಂದು ಕೆಲವರು ಹೇಳಿದ್ದರೆ, 'ಪಾಪ, ಬಡ ಹುಡುಗಿಯ ಅವಶ್ಯಕತೆ ಏನಿತ್ತೋ ಏನೋ' ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಉಳಿದವರು ನಿಮ್ಮ ಈ ನಡತೆಯಿಂದ ನಾನಾ ಪಾಟೇಕರ್ 'ನಿರಪರಾಧಿ' ಎಂದು ಸಾಬೀತು ಮಾಡಿದ್ದೀರಾ ಅದಕ್ಕೆ ಧನ್ಯವಾದ ಅಂದಿದ್ದರೆ, ಮಿಕ್ಕವರು ಇಂತಹ 'ಚೀಪ್ ವ್ಯಕ್ತಿ'ಯ ಸೊಂಟ ಬಳುಕಿಸುವ ಅವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆ ಮಾಡಿದ್ದಾರೆ.
ತನುಶ್ರೀ ಮಾಡಿದ್ದ ಆರೋಪ ಏನು..?
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ಸೆಟ್ ನಲ್ಲಿ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಯುವತಿಯರು ಹಾಗೂ ನಟಿಯರ ಜೊತೆ ಅವರು ಯಾವ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಬಾಲಿವುಡ್ ಗೆ ಚೆನ್ನಾಗಿ ಗೊತ್ತು. ಆದರೆ ಈವರೆಗೂ ಯಾರು ಹೇಳಿಲ್ಲ. ಅದಕ್ಕೆ ಗುಂಡಿಗೆ ಬೇಕು ಎಂದು ತನುಶ್ರೀ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು ತನುಶ್ರೀ ದತ್ತಾ.

ಒಟ್ಟಿನಲ್ಲಿ ಚಿತ್ರರಂಗದಲ್ಲಿ ಘನತೆ ಗೌರವ ಹೊಂದಿರೋ ವ್ಯಕ್ತಿ ಎಂದು ಕರೆಯಲ್ಪಡುವ ನಾನಾ ಪಾಟೇಕರ್ ಮೇಲೆ ಇಂಥಾದ್ದೊಂದು ಆರೋಪವನ್ನ ತನುಶ್ರೀ ದತ್ತಾ ಮಾಡಿದ್ದಾಗ್ಲೇ, ಸಾಮಾಜಿಕ ಜಾಲತಾಣಗಳ ತುಂಬಾ ಆಕ್ರೋಶ ವ್ಯಕ್ತವಾಗಿತ್ತು. ಅವತ್ತು ಹೊತ್ತಿಕೊಂಡ ಕಿಡಿ ಇವತ್ತು ತನುಶ್ರೀ ದತ್ತಾ ಸುತ್ತ ಮುತ್ತ ಸ್ಪೋಟಗೊಳ್ಳುತ್ತಿದೆ. ಈ ವಿಡಿಯೋ ಮುಂದಿಟ್ಟುಕೊಂಡು ತನುಶ್ರೀ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದಕ್ಕೂ ತನುಶ್ರೀ ಉತ್ತರ ಕೊಡುವರೇ..? ಲೆಟ್ಸ್ ಸೀ


Click it and Unblock the Notifications











