ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೊಡ್ಡ ಸಂಚಲನ ಸೃಷ್ಟಿಸಿರುವ ನಟಿ ತನುಶ್ರೀ ದತ್ತಾ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶನಿವಾರ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ನಟ ನಾನಾ ಪಟೇರ್, ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ಧಿಕಿ, ನಿರ್ದೇಶಕ ರಾಕೇಶ್ ಸೇರಿದಂತೆ ಪಟ್ಟು 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ತನುಶ್ರೀ ದತ್ತಾ ಅವರ ದೂರು ಸ್ವೀಕರಿಸಿರುವ ಪೊಲೀಸರು ಇನ್ನೂ ಎಫ್ಐಆರ್ ಹಾಕಿಲ್ಲ ಎಂದು ಮುಂಬೈ ಪಶ್ಚಿಮ ವಲಯದ ಎಸಿಪಿ ಮನೋಜ್ ಕುಮಾರ್ ಶರ್ಮ ಹೇಳಿದ್ದಾರೆ. ಭಾನುವಾರ ಅವರ ತನುಶ್ರೀ ದತ್ತಾ ಮತ್ತು ನಾನಾ ಪಟೇಕರ್ ಅವರ ಹೇಳಿಕೆ ಪಡೆಯುವ ಸಾಧ್ಯತೆ ಇದೆ.

Tanushree Dutta files complaint against Nana Patekar and 10 others

2008ರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್​ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪ ಮಾಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು.

''ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ದೌರ್ಜನ್ಯ ಎಸಗಿದ್ದಾರೆ. ನನಗೂ ಕಿರುಕುಳ ನೀಡಿದ್ದಾರೆ. ನಾನಾ ಪಾಟೇಕರ್ ರನ್ನ ಎ-ಲಿಸ್ಟ್ ತಾರೆಯರು ಬ್ಯಾನ್ ಮಾಡಬೇಕು'' ಎಂದು ತನುಶ್ರೀ ದತ್ತಾ ಹೇಳಿದ್ದರು.

ಆರೋಪ ನಿರಾಕರಿಸಿದ್ದ ಪಾಟೇಕರ್

''ಆಕೆಯ ಪ್ರಕಾರ ಲೈಂಗಿಕ ಕಿರುಕುಳ ಅಂದ್ರೆ ಏನು.? 200 ಜನರಿದ್ದ ಸೆಟ್ ನಲ್ಲಿ ನಾವು ಇದ್ವಿ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೋ, ಅದನ್ನ ಮಾಡುವೆ. ಯಾರು ಏನ್ನನ್ನ ಬೇಕಾದರೂ ಹೇಳಲಿ. ನಾನು ಮಾತ್ರ ನನ್ನ ಕೆಲಸ ಮಾಡುವೆ'' ಎಂದಿದ್ದಾರೆ ನಾನಾ ಪಾಟೇಕರ್.

More from Filmibeat

English summary
Actor Tanushree Dutta on Saturday filed a police complaint against senior actor Nana Patekar, who allegedly sexually harassed her on the sets of a film in 2008.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X