ಇದೇನಾ ರಾಮರಾಜ್ಯ? ಉತ್ತರ ಕೊಡಿ ಮೋದಿಜೀ : ಪ್ರಧಾನಿಗೆ ತನುಶ್ರೀ ದತ್ತ ಪ್ರಶ್ನೆ

ಬಾಲಿವುಡ್ ನಟಿ ತನುಶ್ರೀ ದತ್ತಾ ಮತ್ತೆ ಸಿಡಿದೆದ್ದಿದ್ದಾರೆ. ನಾನಾಪಾಟೇಕರ್ ವಿರುದ್ಧ ಮೀ ಟೂ ಆರೋಪ ಮಾಡಿದ್ದ ತುನುಶ್ರೀ ದತ್ತಗೆ ಇದೊಂದು ದುರುದ್ದೇಶ ಪೂರಿತ ದೂರು, ಈ ಪ್ರಕರಣ ಸಂಬಂಧ ಯಾವುದೆ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ಹೇಳಿ ಪೊಲೀಸರು ಕೇಸ್ ಕೈಬಿಟ್ಟಿದ್ದರ ವಿರುದ್ಧ ನಟಿ ತನುಶ್ರೀ ರೊಚ್ಚಿಗೆದ್ದಿದ್ದಾರೆ.

ಬ್ರಷ್ಟಾಚಾರ ರಹಿತ ಭಾರತದಲ್ಲಿ ಏನಾಗುತ್ತಿದೆ. ಉತ್ತರಿಸಿ ಪ್ರಧಾನಿ ನರೇಂದ್ರ ಮೋದಿ ಅವರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ತುನುಶ್ರೀ ದತ್ತ, "ಆರೋಪಿಯನ್ನು ರಕ್ಷಿಸುವ ಸಲುವಾಗಿ ಪೊಲೀಸರು ನನ್ನ ಎಫ್ ಐ ಆರ್ ಅನ್ನು ತಿರುಚಿದ್ದಾರೆ. ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಫ್ ಐ ಆರ್ ನಲ್ಲಿ ಉಲ್ಲೇಖ ಮಾಡಿದ್ದೆ. ಅಲ್ಲದೆ ನಾನು 2008ರಲ್ಲಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘಕ್ಕೂ ದೂರು ನೀಡಿದ್ದೆ. ಆ ಸಂಘ ಕ್ಷಮೆ ಕೂಡ ಕೇಳಿತ್ತು. ಆದ್ರೀಗ ಪೊಲೀಸರು ಆರೋಪಿಯನ್ನು ರಕ್ಷಿಸುವ ಸಲುವಾಗಿ ಎಫ್ ಐ ಆರ್ ಅನ್ನೇ ತಿರುಚಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕ್ಷ್ಯಾದಾರ ಕೊರತೆಯ ಕಾರಣದಿಂದ ಪ್ರಕರಣ ಕೈ ಬಿಟ್ಟಿರುವ ವಿರುದ್ಧ ರೊಚ್ಚಿಗೆದ್ದ ತನುಶ್ರೀ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. "ಮೋದಿಜೀ ಏನಾಗುತ್ತಿದೆ ಈ ಬ್ರಷ್ಟಾಚಾರ ರಹಿತ ಭಾರತದಲ್ಲಿ? ದೇಶದ ಹೆಣ್ಣುಮಗಳೊಬ್ಬಳಿಗೆ ಸರಣಿ ಅಪರಾಧಿಯಿಂದ ದೌರ್ಜನ್ಯ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಯತ್ನ ಆಗಿದೆ. ಆದ್ರೆ ಪೊಲೀಸರು ಮಾತ್ರ ಸಾಕ್ಷ್ಯಾಧಾರದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಇದೇನಾ ರಾಮ ರಾಜ್ಯ? ಈ ದೇಶದಲ್ಲಿ ಯಾಕೆ ಪದೇ ಪದೇ ಅಸತ್ಯ ಮತ್ತು ಅಧರ್ಮವೇ ಗೆಲ್ಲುತ್ತದೆ? ಉತ್ತರ ಕೊಡಿ ಮೋದಿಜೀ" ಎಂದು ಪ್ರಧಾನ ಮಂತ್ರಿಯನ್ನೆ ಪ್ರಶ್ನಿಸಿದ್ದಾರೆ.

Tanushree dutta questioned to PM Narendra modi for help Nana Patekar case

ನಟಿ ತನುಶ್ರೀ ದತ್ತಾ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. 'ಹಾರ್ನ್ ಓಕೆ ಪ್ಲೀಸ್' ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ತನುಶ್ರೀ ದತ್ತಾ, ನಾನಾ ವಿರುದ್ದ ಆರೋಪಿಸಿದ್ದರು. ಆದ್ರೀಗ ಸಾಕ್ಷ್ಯಾಧಾರದ ಕೊರತೆಯಿಂದ ಮುಂಬೈ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ.

More from Filmibeat

English summary
Bollywood actress Tanushree dutta questioned to PM Narendra modi for help Nana Patekar case. Mumbai police gave Nana Patekar a clean chit in the Tanushree Dutta sexual harassment case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X