ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾ

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಬಾಂಬ್ ಸಿಡಿಸಿದ್ಮೇಲೆ, ನಟಿ ತನುಶ್ರೀ ದತ್ತಾ ಇಡೀ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. 'ಹಾರ್ನ್ ಓಕೆ ಪ್ಲೀಸ್' ಸಿನಿಮಾ ಸೆಟ್ ನಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ಮೇಲೆ, ಪ್ರಿಯಾಂಕಾ ಛೋಪ್ರಾ, ಸೋನಂ ಕಪೂರ್, ಫರ್ಹಾನ್ ಅಖ್ತರ್ ಸೇರಿದಂತೆ ಅನೇಕ ತಾರೆಯರು ತನುಶ್ರೀ ದತ್ತಾ ಸಪೋರ್ಟ್ ಗೆ ನಿಂತಿದ್ದಾರೆ.

ಕಾಸ್ಟಿಂಗ್ ಕೌಚ್ ಹಾಗೂ ಲೈಂಗಿಕ ದೌರ್ಜನ್ಯದ ವಿರುದ್ಧ ನಟಿಯರು ಇದೀಗ ಬೌಲ್ಡ್ ಆಗಿ ಮಾತನಾಡುತ್ತಿದ್ದರೂ, ಚಿತ್ರರಂಗದ ಹಿರಿ ತಲೆಗಳು ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಇದನ್ನ ಗಮನಿಸಿದ ತನುಶ್ರೀ ದತ್ತಾ ಬೇಸರಗೊಂಡಿದ್ದಾರೆ. ಮುಂದೆ ಓದಿರಿ...

ಅಮಿತಾಬ್ ಬಚ್ಚನ್ ಕೊಟ್ಟ ಪ್ರತಿಕ್ರಿಯೆ ಏನು.?

ಅಮಿತಾಬ್ ಬಚ್ಚನ್ ಕೊಟ್ಟ ಪ್ರತಿಕ್ರಿಯೆ ಏನು.?

ನಾನಾ ಪಾಟೇಕರ್ ಬಗ್ಗೆ ಕೇಳಿಬಂದ ಆರೋಪದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ''ನನ್ನ ಹೆಸರು ತನುಶ್ರೀ ಅಲ್ಲ, ನಾನಾ ಪಾಟೇಕರ್ ಕೂಡ ಅಲ್ಲ. ಈ ಬಗ್ಗೆ ನಾನು ಹೇಗೆ ಉತ್ತರಿಸಲಿ'' ಎಂದು ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿದ್ದರು.

ಬೇಸರಗೊಂಡ ತನುಶ್ರೀ ದತ್ತಾ

ಬೇಸರಗೊಂಡ ತನುಶ್ರೀ ದತ್ತಾ

''ನನಗೆ ಬೇಸರ ಆಗಿದೆ. ಇವರೆಲ್ಲ ಸಾಮಾಜಿಕ ಕಳಕಳಿ ಹೊಂದಿರುವ ಸಿನಿಮಾ ಮಾಡುತ್ತಾರೆ. ಆದ್ರೆ, ತಮ್ಮ ಎದುರಿಗೆ ಏನಾದರೂ ಆಗುತ್ತಿದ್ದರೂ, ಆ ಬಗ್ಗೆ ದನಿ ಎತ್ತುವುದಿಲ್ಲ'' ಎಂದಿದ್ದಾರೆ ನಟಿ ತನುಶ್ರೀ ದತ್ತಾ.

ತನುಶ್ರೀ ದತ್ತಾ ಮಾಡಿದ ಆರೋಪ ಏನು.?

ತನುಶ್ರೀ ದತ್ತಾ ಮಾಡಿದ ಆರೋಪ ಏನು.?

''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು.

ನಾನಾ ಪಾಟೇಕರ್ ಏನಂತಾರೆ.?

ನಾನಾ ಪಾಟೇಕರ್ ಏನಂತಾರೆ.?

''ಆಕೆಯ ಪ್ರಕಾರ ಲೈಂಗಿಕ ಕಿರುಕುಳ ಅಂದ್ರೆ ಏನು.? 200 ಜನರಿದ್ದ ಸೆಟ್ ನಲ್ಲಿ ನಾವು ಇದ್ವಿ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೋ, ಅದನ್ನ ಮಾಡುವೆ. ಯಾರು ಏನ್ನನ್ನ ಬೇಕಾದರೂ ಹೇಳಲಿ. ನಾನು ಮಾತ್ರ ನನ್ನ ಕೆಲಸ ಮಾಡುವೆ'' ಎಂದಿದ್ದಾರೆ ನಟ ನಾನಾ ಪಾಟೇಕರ್.

More from Filmibeat

English summary
Bollywood Actress Tanushree Dutta reacts to Amitabh Bachchan's comment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X