ನಾನಾ ಪಾಟೇಕರ್ ಒಬ್ಬ ಹುಟ್ಟಾ ಸುಳ್ಳುಗಾರ, ಅವನಿಗೆ ನಡುಕ ಶುರುವಾಗಿದೆ- ತನುಶ್ರೀ ದತ್ತಾ...!

ಮೊನ್ನೆಯಷ್ಟೇ ತನುಶ್ರೀ ದತ್ತಾಗೆ ನಾನೇನು ಮಾಡಿಲ್ಲ ಎಂದು ಬಾಲಿವುಡ್‌ನ ಹಿರಿಯ ನಾಯಕ ನಾನಾ ಪಾಟೇಕರ್ ಹೇಳಿದ್ದರು. ನಾನು ತಪ್ಪು ಮಾಡಿಲ್ಲ ಎಂದಾಗ ಕೋಪ ಯಾಕೆ ಮಾಡಿಕೊಳ್ಳಬೇಕು ಮಾಡಿಕೊಂಡು ಪ್ರಯೋಜನವಾದರೂ ಏನು ಎಂಬ ಪ್ರಶ್ನೆಯನ್ನು ಕೇಳಿದ್ದರು. ಆ ಪ್ರಶ್ನೆಗೆ ಈಗ ತನುಶ್ರೀ ದತ್ತಾ ಉತ್ತರ ಕೊಟ್ಟಿದ್ದಾರೆ. ಹುಟ್ಟಾ ಸುಳ್ಳುಗಾರ ಯಾರಾದರೂ ಇದ್ದರೆ ಅದು ನಾನಾ ಪಾಟೇಕರ್ ಮಾತ್ರ ಎಂದು ಹೇಳಿದ್ದಾರೆ.

ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತನುಶ್ರೀ ದತ್ತಾ, ನಾನಾ ಪಾಟೇಕರ್‌ಗೆ ಈಗ ಭಯ ಶುರುವಾಗಿದೆ. ಯಾಕೆಂದರೆ.. ಅವನ ಬೆಂಬಲಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೂ ನಾನಾ ಪಾಟೇಕರ್‌ನ ಹಿಂದೆ ಯಾರೆಲ್ಲ ಬೆಂಬಲಿಸಿದ್ದರು ಅವರಲ್ಲಿ ಬಹುತೇಕರು ಆರ್ಥಿಕ ಸಮಸ್ಯೆಯನ್ನ ಎದುರಿಸಿ ದಿವಾಳಿಯಾಗಿದ್ದರೆ, ಇನ್ನೂ ಉಳಿದವರು ತಮ್ಮಿಂದ ನಾನಾ ಪಾಟೇಕರ್‌ನ ದೂರ ಇಟ್ಟಿದ್ದಾರೆ ಎಂದು ತನುಶ್ರೀ ದತ್ತಾ ಹೇಳಿದ್ದಾರೆ.

tanushree-dutta-responds-to-nana-patekars-remarks-on-metoo-allegations-he-appears-fearful

ಪ್ರಕರಣದ ಹಿನ್ನೆಲೆ..?

2008ರಲ್ಲಿ ನಾನಾ ಪಾಟೇಕರ್ ಅಭಿನಯದ ಹಾರ್ನ್ ಓಕೆ ಪ್ಲೀಸ್ ಚಿತ್ರದಲ್ಲಿ ತನುಶ್ರೀ ದತ್ತಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಾನಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ತಾ 2018 ಮೀಟೂ ಆರೋಪ ಮಾಡಿದ್ದರು. ಯುವತಿಯರು ಹಾಗೂ ನಟಿಯರ ಜೊತೆ ಅವರು ಯಾವ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಬಾಲಿವುಡ್ ಗೆ ಚೆನ್ನಾಗಿ ಗೊತ್ತು. ಆದರೆ ಈವರೆಗೂ ಯಾರು ಹೇಳಿಲ್ಲ. ಅದಕ್ಕೆ ಗುಂಡಿಗೆ ಬೇಕು ಎಂದು ತನುಶ್ರೀ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು ತನುಶ್ರೀ ದತ್ತಾ.

ತನುಶ್ರೀ ದತ್ತಾ ಮಾಡಿದ್ದ ಈ ಆರೋಪದಿಂದ ನಾನಾ ಪಾಟೇಕರ್ ಅವರನ್ನ ಅನೇಕ ಚಿತ್ರಗಳಿಂದ ಕೈ ಬಿಡಲಾಯಿತು ಕೂಡ. ಇಷ್ಟೆಲ್ಲ ಆದರೂ ತನುಶ್ರೀ ದತ್ತಾ ಮಾಡಿದ್ದ ಆರೋಪಗಳಿಗೆ ನಾನಾ ಪಾಟೇಕರ್ ಉತ್ತರವನ್ನ ನೀಡಿರಲಿಲ್ಲ. ಆದಾಗ್ಯೂ, ತನುಶ್ರೀ ಅವರ ಹೇಳಿಕೆಯನ್ನು ಬೆಂಬಲಿಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಪ್ರಕರಣವನ್ನು ಒಂದು ವರ್ಷದೊಳಗೆ ಮುಚ್ಚಲಾಯಿತು.

tanushree-dutta-responds-to-nana-patekars-remarks-on-metoo-allegations-he-appears-fearful

ನಾನಾ ಪಾಟೇಕರ್ ಹೇಳಿದ್ದೇನು..?

ತನುಶ್ರೀ ದತ್ತಾ ಮಾಡಿದ್ದ ಆರೋಪಗಳಿಗೆ ಆರು ವರ್ಷ ಉತ್ತರ ನೀಡದ ನಾನಾ ಪಾಟೇಕರ್, ಇತ್ತೀಚೆಗಷ್ಟೇ ಮೌನ ಮುರಿದು ಮಾತನಾಡಿದ್ದರು. ನಾನು ನನ್ನ ವಿರುದ್ಧ ಆರೋಪ ಮಾಡಲಾದ ಆ ಆರೋಪ ಮತ್ತು ಆ ಘಟನೆಯನ್ನ ಮನಸಿನಲ್ಲಿ ಇಟ್ಟುಕೊಂಡಿಲ್ಲ. ಯಾಕೆಂದರೆ ಅದೊಂದು ದೊಡ್ಡ ಸುಳ್ಳು. ಸುಳ್ಳು ಎಂದು ನನಗೆ ಅರಿವಿರುವಾಗ ನಾನೇಕೆ ಆ ಬಗ್ಗೆ ಕೋಪ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಯನ್ನ ಮಾಡಿದ್ದರು ನಾನಾ ಪಾಟೇಕರ್. ಮುಂದುವರೆದು ಮಾತನಾಡಿದ್ದ ನಾನಾ ಪಾಟೇಕರ್ ನಾನು ಬೇರೆ ಅವರ ಬಾಯಿಯನ್ನು ಯಾಕೆ ಮುಚ್ಚಲಿ ? ಯಾರಾದರೂ ತಪ್ಪು ಮಾಡಿದರೆ ನಾನು ಅವರನ್ನು ನ್ಯಾಯಾಲಯಕ್ಕೆ ಕರೆ ತರುತ್ತೇನೆ. ಆದರೆ ಅದಕ್ಕೂ ನನಗೆ ಸಮಯವಿಲ್ಲ. ನಾವು ಎಷ್ಟು ಸರಿ ಅಥವಾ ತಪ್ಪು ಎಂದು ನಮಗೆ ತಿಳಿದಿರಬೇಕು. ಅದು ಮಾತ್ರ ಪ್ರಮುಖ ವಿಷಯ ಅಂದಿದ್ದರು.

ನಾನಾ ಪಾಟೇಕರ್ ಮಾತನಾಡಿದ್ದ ಈ ಮಾತುಗಳಿಂದ ಕೆರಳಿರುವ ತನುಶ್ರೀ ದತ್ತಾ ಈಗ ಮತ್ತೊಮ್ಮೆ ನಾನಾ ಮೇಲೆ ಕೆಂಡ ಕಾರಿದ್ದಾರೆ. ತನುಶ್ರೀ ದತ್ತಾ ಅವರ ಈ ಮಾತುಗಳಿಗೆ ಮತ್ತೆ ಉತ್ತರ ಕೊಡಲು ಮುಂದಾಗುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X