For Quick Alerts
  ALLOW NOTIFICATIONS  
  For Daily Alerts

  ಮೀಟೂ ಪ್ರಕರಣದಲ್ಲಿ ನಾನಾ ಪಾಟೇಕರ್ ಗೆ ಬಿಗ್ ರಿಲೀಫ್

  |

  ಬಾಲಿವುಡ್ ಸ್ಟಾರ್ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮೀಟೂ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದರು. ಇದಾದ ಬಳಿಕ ಈ ಮೀಟೂ ಅಭಿಯಾನ ಇಡೀ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು.

  ಅಂದು ಬಿರುಗಾಳಿ ಎಬ್ಬಿಸಿದ್ದ ಮೀಟೂ ಪ್ರಕರಣದಲ್ಲಿ ಆರೋಪಿಯಾಗಿದ್ದ ನಾನಾ ಪಾಟೇಕರ್ ಅವರಿಗೆ ಇಂದು ಬಿಗ್ ರಿಲೀಫ್ ಸಿಕ್ಕಿದೆ. ತನುಶ್ರೀ ದತ್ತಾ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿ-ಆಧಾರಗಳಿಲ್ಲದ ಕಾರಣ, ಈ ಪ್ರಕರಣ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ ನಾನಾ ಪಾಟೇಕರ್ ಸೇರಿ 10 ಜನರ ವಿರುದ್ಧ ದೂರು ನೀಡಿದ ತನುಶ್ರೀ ದತ್ತಾ

  ಈಗಾಗಲೇ ಮುಂಬೈನ ಆಂಧೇರಿ ಪೊಲೀಸರು ನಾನಾ ಪಾಟೇಕರ್ ಪ್ರಕರಣದಲ್ಲಿ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರಂತೆ. ಪ್ರಕರಣದಲ್ಲಿ ಸಾಕ್ಷ್ಯಗಳಿಲ್ಲದ ವೇಳೆ ಬಿ ರಿಪೋರ್ಟ್ ಸಲ್ಲಿಸಿ ಕೇಸ್ ಕ್ಲೋಸ್ ಮಾಡಲಾಗುವುದು.

  ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡದ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡದ ನಾನಾ ಪಾಟೇಕರ್

  ತನುಶ್ರೀ ದತ್ತಾ ಅವರು 2018ರ ಅಕ್ಟೋಬರ್ ನಲ್ಲಿ ನಾನಾ ಪಾಟೇಕರ್ ವಿರುದ್ಧ ಪೊಲೀಸ್ ದೂರು ನೀಡಿದ್ದರು. 2008ರಲ್ಲಿ ಸಿನಿಮಾ ಶೂಟಿಂಗ್ ವೇಳೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು, ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ದೂರಿದ್ದರು. 10 ವರ್ಷದ ಬಳಿಕ ಬಂದ ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಹಲವರನ್ನ ವಿಚಾರಣೆ ನಡೆಸಿದ್ದರು. ಆದರೆ, ಯಾವುದೇ ಅಪರಾಧ ಸಾಬೀತಾಗುವಂತೆ ಸಾಕ್ಷಿಗಳು ಸಿಕ್ಕಿಲ್ಲ.

  English summary
  MeToo movement: Police gives Nana Patekar a clean chit in sexual harassment case filed by Tanushree Dutta. she has filed MeToo case agianst Nana Patekar in 2018 october.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X