ತನುಶ್ರೀ ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವಿವೇಕ್ ಅಗ್ನಿಹೋತ್ರಿ
ಕಳೆದ ಒಂದು ವಾರದಿಂದ ಬಾಲಿವುಡ್ ನಲ್ಲಿ ನಟಿ ತನುಶ್ರೀ ದತ್ತಾ ಬಿಗ್ ಬ್ರೇಕಿಂಗ್ ನ್ಯೂಸ್ ಮಾಡುತ್ತಿದ್ದಾರೆ. ವರ್ಷಗಳ ಹಿಂದೆ ನಡೆದ ಘಟನೆಯನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕುತ್ತಾ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪವನ್ನ ಮಾಡಿದರು.
ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ತನುಶ್ರೀ ದತ್ತಾ ಬಾಂಬ್ ಸಿಡಿಸಿದರು. 'ಚಾಕಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್' ಎಂಬ ಸಿನಿಮಾದಲ್ಲಿ ತನುಶ್ರೀ ದತ್ತಾಗೆ ವಿವೇಕ್ ಅಗ್ನಿಹೋತ್ರಿ ''ಬಟ್ಟೆ ಬಿಚ್ಚಿ ಕ್ಯೂ ಕೊಡು'' ಅಂತ ಹೇಳಿದ ಸಂಗತಿಯನ್ನೂ ಬಯಲು ಮಾಡಿದರು.
ತನುಶ್ರೀ ದತ್ತಾ ಧೈರ್ಯಕ್ಕೆ ಮೆಚ್ಚಿ ಹಲವು ನಟ-ನಟಿಯರು ಆಕೆಯ ಪರ ದನಿಯೆತ್ತಿದರು. ದಿನೇ ದಿನೇ ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿಹೋತ್ರಿ ಕಾನೂನಿನ ಮೊರೆ ಹೋಗಿದ್ದಾರೆ. ಮುಂದೆ ಓದಿರಿ...

ತನುಶ್ರೀ ದತ್ತಾ ವಿರುದ್ಧ ಕೇಸ್ ಹಾಕಿದ ನಾನಾ ಪಾಟೇಕರ್
ನಟಿ ತನುಶ್ರೀ ದತ್ತಾ ವಿರುದ್ಧ ನಾನಾ ಪಾಟೇಕರ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ತನುಶ್ರೀ ದತ್ತಾಗೆ ಇಂದು ನಾನಾ ಪಾಟೇಕರ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿವೇಕ್ ಅಗ್ನಿಹೋತ್ರಿ
ನಟಿ ತನುಶ್ರೀ ದತ್ತಾ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೇ, ತನುಶ್ರೀ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ವಿವೇಕ್ ಅಗ್ನಿಹೋತ್ರಿ ಪರವಾಗಿ ವಕೀಲರು ಸ್ಪಷ್ಟ ಪಡಿಸಿದ್ದಾರೆ.

ವಿವೇಕ್ ಅಗ್ನಿಹೋತ್ರಿ ವಿರುದ್ಧ ತನುಶ್ರೀ ದತ್ತಾ ಹೇಳಿದ್ದೇನು.?
''ಇರ್ಫಾನ್ ಖಾನ್ ಗೆ ನಾನು ಕ್ಯೂ ಕೊಡಬೇಕು ಅಂತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೂಚಿಸಿದರು. ಅಷ್ಟಕ್ಕೂ, ಅದು ನನ್ನ ಶಾಟ್ ಆಗಿರಲಿಲ್ಲ. ಇರ್ಫಾನ್ ಖಾನ್ ಅವರ ಕ್ಲೋಸಪ್ ಶಾಟ್ ಆಗಿತ್ತು. ಅವರು ಏನನ್ನೋ ನೋಡಿಕೊಂಡು ಎಕ್ಸ್ ಪ್ರೆಶನ್ ಕೊಡಬೇಕಿತ್ತು. ಆಗ ನಿರ್ದೇಶಕ ನನ್ನನ್ನ ಕರೆದು - ''ಹೋಗಿ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡು, ಅವರಿಗೆ ಕ್ಯೂ ಕೊಡು'' ಅಂದ್ರು'' ಎಂದು ಸಂದರ್ಶನದಲ್ಲಿ ತನುಶ್ರೀ ದತ್ತಾ ಹೇಳಿದ್ದರು.

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿದ ಆರೋಪ ಏನು.?
''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು. ಇದೇ ಈಗ ಬಾಲಿವುಡ್ ನಲ್ಲಿ ದೊಡ್ಡ ವಿವಾದ ಆಗಿದೆ.


Click it and Unblock the Notifications











