For Quick Alerts
  ALLOW NOTIFICATIONS  
  For Daily Alerts

  ನಾನಾ ಪಾಟೇಕರ್ ವಿರುದ್ಧ FIR ದಾಖಲು

  |

  ಮುಂಬೈ, ಅಕ್ಟೋಬರ್ 11: ನಟ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ. ನಟಿ ತನುಶ್ರೀ ದತ್ತಾ ಅವರು ಇವರಿಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರೆಸಿ, ದೂರು ನೀಡಿದ್ದರು.

  ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

  2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಚಿತ್ರದ ನೃತ್ಯ ಸನ್ನಿವೇಶ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್​ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪವನ್ನು ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್ ಅವರು ನಿರಾಕರಿಸಿದ್ದಾರೆ.

  ರೇಪ್ ಆರೋಪ: ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಹತ್ತು ದಿನದ ಗಡುವು

  ಓಶಿವಾರ ಠಾಣೆ ಪೊಲೀಸರು, ನಾನಾ ಪಾಟೇಕರ್ ಹಾಗೂ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 509ಅನ್ವಯ ಬುಧವಾರ ರಾತ್ರಿ ಎಫ್ಐಆರ್ ಹಾಕಿದ್ದಾರೆ. ಸದ್ಯಕ್ಕೆ ತನಿಖೆ ಜಾರಿಯಲ್ಲಿದ್ದು, ಯಾರನ್ನು ಬಂಧಿಸಿಲ್ಲ, ಈ ಬಗ್ಗೆ ತನಿಖಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪಶ್ಚಿಮ ವಲಯ ಎಸಿಪಿ ಮನೋಜ್ ಕುಮಾರ್ ಶರ್ಮ ಹೇಳಿದ್ದಾರೆ.

  ನಾನಾ ಪಾಟೇಕರ್ ಅವರ ವಕೀಲರು ಈಗಾಗಲೇ ತನುಶ್ರೀ ದತ್ತಾಗೆ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ತನುಶ್ರೀಗಾಗಿ ಮರಾಠಿಯಲ್ಲಿದ್ದ ದೂರು, ನೋಟಿಸ್ ಗಳನ್ನು ಇಂಗ್ಲೀಷ್ ಗೆ ಅನುವಾದಿಸಿ ನೀಡಲಾಗಿದೆ. ಹೀಗಾಗಿ, ಎಫ್ಐಆರ್ ಹಾಕಲು ತಡವಾಗಿದೆ. ತನುಶ್ರೀ ಪರ ವಕೀಲರು 40 ಪುಟಗಳ ದೂರನ್ನು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೂ ಸಲ್ಲಿಸಿದ್ದಾರೆ.

  ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

  English summary
  An FIR has been registered against several crew members of 2008 film Horn OK Please, including veteran actor Nana Patekar, director Rakesh Sarang, producer Samee Siddiqui and choreographer Ganesh Acharya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X