Don't Miss!
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾನಾ ಪಾಟೇಕರ್ ವಿರುದ್ಧ FIR ದಾಖಲು
ಮುಂಬೈ, ಅಕ್ಟೋಬರ್ 11: ನಟ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ. ನಟಿ ತನುಶ್ರೀ ದತ್ತಾ ಅವರು ಇವರಿಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರೆಸಿ, ದೂರು ನೀಡಿದ್ದರು.
ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಚಿತ್ರದ ನೃತ್ಯ ಸನ್ನಿವೇಶ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪವನ್ನು ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್ ಅವರು ನಿರಾಕರಿಸಿದ್ದಾರೆ.
ರೇಪ್ ಆರೋಪ: ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಹತ್ತು ದಿನದ ಗಡುವು
ಓಶಿವಾರ ಠಾಣೆ ಪೊಲೀಸರು, ನಾನಾ ಪಾಟೇಕರ್ ಹಾಗೂ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 509ಅನ್ವಯ ಬುಧವಾರ ರಾತ್ರಿ ಎಫ್ಐಆರ್ ಹಾಕಿದ್ದಾರೆ. ಸದ್ಯಕ್ಕೆ ತನಿಖೆ ಜಾರಿಯಲ್ಲಿದ್ದು, ಯಾರನ್ನು ಬಂಧಿಸಿಲ್ಲ, ಈ ಬಗ್ಗೆ ತನಿಖಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪಶ್ಚಿಮ ವಲಯ ಎಸಿಪಿ ಮನೋಜ್ ಕುಮಾರ್ ಶರ್ಮ ಹೇಳಿದ್ದಾರೆ.
ನಾನಾ ಪಾಟೇಕರ್ ಅವರ ವಕೀಲರು ಈಗಾಗಲೇ ತನುಶ್ರೀ ದತ್ತಾಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ತನುಶ್ರೀಗಾಗಿ ಮರಾಠಿಯಲ್ಲಿದ್ದ ದೂರು, ನೋಟಿಸ್ ಗಳನ್ನು ಇಂಗ್ಲೀಷ್ ಗೆ ಅನುವಾದಿಸಿ ನೀಡಲಾಗಿದೆ. ಹೀಗಾಗಿ, ಎಫ್ಐಆರ್ ಹಾಕಲು ತಡವಾಗಿದೆ. ತನುಶ್ರೀ ಪರ ವಕೀಲರು 40 ಪುಟಗಳ ದೂರನ್ನು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೂ ಸಲ್ಲಿಸಿದ್ದಾರೆ.
ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?