For Quick Alerts
  ALLOW NOTIFICATIONS  
  For Daily Alerts

  ಅರ್ಧರಾತ್ರಿ, ನಟಿಯೊಂದಿಗೆ ಅಸಭ್ಯ ವರ್ತನೆ: ಟ್ಯಾಕ್ಸಿ ಚಾಲಕ ಬಂಧನ

  |

  ಪಶ್ಚಿಮ ಬಂಗಾಳದ ನಟಿ, ಸಂಸದೆ ಮಿಮಿ ಚಕ್ರವರ್ತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಟ್ಯಾಕ್ಸಿ ಡ್ರೈವರ್ ಒಬ್ಬನನ್ನು ಕೊಲ್ಕತ್ತ ಪೊಲೀಸರು ಬಂಧಿಸಿದ್ದಾರೆ.

  ಟಿಎಂಸಿ ಸಂಸದೆಯೂ ಆಗಿರುವ ನಟಿ ಮಿಮಿ ಚಕ್ರವರ್ತಿ ನಿನ್ನೆ (ಮಂಗಳವಾರ) ತಡರಾತ್ರಿ ಜಿಮ್‌ ನಿಂದ ತಮ್ಮ ಕಾರಿನಲ್ಲಿ ಮನೆಗೆ ಮರಳುವ ವೇಳೆ ಟ್ಯಾಕ್ಸಿ ಡ್ರೈವರ್ ಒಬ್ಬ ಮಿಮಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ.

  ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿರುವ ಮಿಮಿ, ಟ್ಯಾಕ್ಸಿ ಡ್ರೈವರ್ ಒಬ್ಬ ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ, ಬೈದಿದ್ದಾನೆ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಟ್ಯಾಕ್ಸಿ ಯ ನಂಬರ್ ಸಹ ನೀಡಿದ್ದರು.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada

  ಕೊಲ್ಕತ್ತ ಪೊಲೀಸರು ಡ್ರೈವರ್ ಅನ್ನು ಬಂಧಿಸಿದ್ದು, ಆತನ ಹೆಸರು ಲಕ್ಷ್ಮಣ್ ಯಾದವ್ ಎಂದಾಗಿದ್ದು, ಮುಕುಂದಪುರ ವಾಸಿಯಾಗಿದ್ದಾನೆ. ಲಕ್ಷ್ಮಣ್ ಯಾದವ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಾಗಿದೆ.

  English summary
  A Taxi driver arrested for misbehaving with actress and TMC MP Mimi Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X