Teacher's Day 2023: ಸಿನಿಮಾಗೆ ಬರುವ ಮೊದಲು ಶಿಕ್ಷಕರಾಗಿದ್ದ ಬಾಲಿವುಡ್ ಸೆಲೆಬ್ರಿಟಿಗಳು

ಸೆಪ್ಟೆಂಬರ್ 5 ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸವಿ ನೆನಪಿನಲ್ಲಿ ಈ ದಿನವನ್ನು ದೇಶದ ಶಿಕ್ಷಕರಿಗಾಗಿ ಸಮರ್ಪಿಸಲಾಗಿದೆ. ಹಾಗೆಯೇ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಮತ್ತು ನಿವೃತ್ತರಾಗಿರುವವರ ಜೊತೆ ಜೊತೆಗೆ ಜೀವನ ಪಾಠ ಕಲಿಸಿದ ವ್ಯಕ್ತಿಗಳಿಗೂ ಇಂದು ಗೌರವ ಸಲ್ಲಿಸಲಾಗುತ್ತದೆ.

ಸಿನಿಮಾಗಳು ಕೂಡ ಶಿಕ್ಷಣದ ಒಂದು ಪ್ರಕಾರವೇ. ಸಿನಿಮಾಗಳನ್ನೇ ಪಾಠಗಳನ್ನಾಗಿಸಿಕೊಂಡವರು ಕೋಟ್ಯಾಂತರ ಮಂದಿಯಿದ್ದಾರೆ. ಹಾಗೆಯೇ ಹಲವು ಸಿನಿಮಾ ನಟರು ಕೂಡ ಈ ಕ್ಷೇತ್ರಕ್ಕೆ ಬರುವ ಮುನ್ನ ಶೈಕ್ಷಣಿಕ ರಂಗದಲ್ಲಿದ್ದವರು. ಶಿಕ್ಷಕರ ದಿನದ ಈ ಹೊತ್ತಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಕೆಲವು ಹಿಂದಿ ಸಿನಿಮಾ ರಂಗದ ಸೆಲೆಬ್ರಿಟಿಗಳನ್ನು ನೆನಪಿಸಿಕೊಳ್ಳೋಣ.

Teachers Day 2023: Celebrities who were in teaching before entering in film industry

ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ಮಾರ್ಷಲ್ ಆರ್ಟ್ ಟೀಚರ್ ಆಗಿದ್ದವರು. ಚಿತ್ರಂಗದಲ್ಲಿ ನಟರಾಗಿ ಆಲ್ಲದೆ ಫಿಟ್‌ನೆಸ್ ಫ್ರೀಕ್ ಮತ್ತು ಕ್ರೀಡೆಗಳಲ್ಲಿ ಉತ್ಸಾಹ ಇರುವವರು ಎಂದು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ವಿಭಿನ್ನ ಪ್ರಕಾರದ ಸಿನಿಮಾಗಳಿಂ ಖ್ಯಾತರಾಗಿರುವ ಅವರು ಚಿತ್ರರಂಗಕ್ಕೆ ಬರುವ ಮೊದಲು ಮಾರ್ಷಲ್ ಆರ್ಟ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.

ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ತಕ್ಷಣವೇ ಅವರು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಮಾರ್ಷಲ್ ಆರ್ಟ್ ಕಲಿಯಲು ತೆರಳಿದ್ದರು. ಅಲ್ಲಿ ಐದು ವರ್ಷಗಳ ಕಾಲ ಥಾಯ್ ಬಾಕ್ಸಿಂಗ್ ಕಲಿತಿದ್ದಾರೆ. ಟೇಕ್ವಾಂಡೋದಲ್ಲಿನ ಕಪ್ಪು ಬೆಲ್ಟ್ ಪಡೆದ ಬಳಿಕ ದೇಶದ ಅನೇಕ ಕಡೆ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.

ಕಿಯಾರಾ ಅಡ್ವಾಣಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಲಸ್ಟ್ ಸ್ಟೋರೀಸ್ ಸಿನಿಮಾದಲ್ಲಿ ಶಾಲಾ ಶಿಕ್ಷಕಿಯ ಪಾತ್ರ ಮಾಡಿದ್ದ ಇವರು ನಿಜವಾಗಿಯೂ ನಟಿಯಾಗುವ ಮೊದಲು ಪ್ಲೇಸ್ಕೂಲ್ ಶಿಕ್ಷಕರಾಗಿದ್ದರು. ಮುಂಬೈನ ಬರ್ಡ್ಸ್ ಪ್ಲೇ ಪ್ಲೇಸ್ಕೂಲ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಶಾಲೆಯಲ್ಲಿ ಅವರ ತಾಯಿ ಮುಖ್ಯೋಪಾಧ್ಯಾಯಿನಿಯಾಗಿದ್ದರು.

ಸಾನ್ಯಾ ಮಲ್ಹೋತ್ರಾ

ಜವಾನ್, ದಂಗಲ್ ನಟಿ ಸಾನ್ಯಾ ಮಲ್ಹೋತ್ರಾ ಒಳ್ಳೆಯನಟಿ ಹಾಗೂ ನೃತ್ಯಪಟು. ಸಿನಿಮಾ ರಂಗಕ್ಕೆ ಬರುವ ಮೊದಲು ದೆಹಲಿಯ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕಂಟೆಂಪರರಿ ಮತ್ತು ಬ್ಯಾಲೆ ನೃತ್ಯಗಾರ್ತಿಯಾಗಿ 2009 ರಲ್ಲಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನಲ್ಲಿ ಭಾಗವಹಿಸಿದ್ದರು. ಇದಲ್ಲದೆ 2017 ರಲ್ಲಿ ಬಿಡುಗಡೆಯಾದ ಸೀಕ್ರೆಟ್ ಸೂಪರ್‌ಸ್ಟಾರ್‌ನಲ್ಲಿ ಒಂದು ಹಾಡಿಗೆ ಕೊರಿಯೋಗ್ರಫರ್ ಆಗಿದ್ದರು.

ನಂದಿತಾ ದಾಸ್

40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ನಂದಿತಾ ದಾಸ್ ಅವರು ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ರಂಗಭೂಮಿ ಕಲಾವಿದೆಯಾಗಿ ಕಷ್ಟಪಡುತ್ತಿದ್ದ ಆಕೆಯ ಆರಂಭಿಕ ದಿನಗಳಲ್ಲಿ, ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಿಂದ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ನಂತರ ರಿಷಿ ವ್ಯಾಲಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಚಂದ್ರಚೂರ್ ಸಿಂಗ್

ಹಿರಿಯ ನಟ ಚಂದ್ರಚೂರ್ ಸಿಂಗ್ ನವ ದೆಹಲಿಯ ವಸಂತ ವ್ಯಾಲಿ ಶಾಲೆಯಲ್ಲಿ ಸಂಗೀತ ಕಲಿಸುತ್ತಿದ್ದರು. ಅವರು ಉತ್ತಮ ತರಬೇತಿ ಪಡೆದ ಶಾಸ್ತ್ರೀಯ ಗಾಯಕ ಕೂಡ ಹೌದು. ಡೆಹ್ರಾಡೂನ್‌ನ ದಿ ಡೂನ್ ಶಾಲೆಯಲ್ಲಿ ಇತಿಹಾಸ ಪಾಠ ಮಾಡುತ್ತಿದ್ದರು ಎಂದು ವರದಿಯಾಗಿದೆ.

More from Filmibeat

English summary
Teacher's Day 2023: Bollywood celebrities who were in teaching before entering in film industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X