For Quick Alerts
ALLOW NOTIFICATIONS  
For Daily Alerts

  ಬಾಲಿವುಡ್ ಶಿಕ್ಷಕಿಯರ ಹಾಟ್ ಹಾಟ್ ಡರ್ಟಿ ಪಿಕ್ಚರ್ಸ್!

  By Srinath
  |

  ಗುರುಭ್ಯೋ ನಮಃ! ಗುರುಗಳು ಅಂದರೆ ಪ್ರೇರಣೆ, ಭರವಸೆಯ ಧ್ಯೋತಕ. ಚಿಂತನೆಯ ಕೆಚ್ಚನ್ನು ಹೆಚ್ಚಿಸುವವರು. ಸದಾ ಜ್ಞಾನಾರ್ಜನೆಗೆ ಪ್ರೇರೇಪಿಸುವವರು ಎಂದರ್ಥ. ಆದರೆ ಇದರಾಚೆಗೆ ಏನಿದೆ? ವಿಸ್ತರಿಸಿ ಹೇಳಿ ನೋಡೋಣ ಎಂದು ಬಾಲಿವುಡ್ ನಟೀಮಣಿಗಳನ್ನು ಕಳಿದರೆ ಹಂಗೆಲ್ಲಾ ನಾವು ಹೇಳೋಂಗಿಲ್ಲ. ಖುದ್ದು ನೀವೇ ನೋಡಿ. ಪರಾಂಬರಿಸಿಬಿಡಿ ಎನ್ನುತ್ತಾ ಬಳಕುತ್ತಾರೆ!

  ಇಂತಹ ಬಾಲಿವುಡ್ ಶಿಕ್ಷಕಿಯರು ಯಾನೆ ನಟಿಯರು ಮತ್ತು ವಿದ್ಯಾರ್ಥಿಗಳು, ಶಿಕ್ಷಕಿ ನಟಿಯರು ಮತ್ತು ಅಧ್ಯಾಪಕರ ನಡುವಿನ ಲವ್ವಿಡವ್ವಿ ಕೆಮಿಸ್ಟ್ರಿ ನಡೆಯುವುದನ್ನು ಬೆಳ್ಳಿತೆರೆಯೆ ಮೇಲೆ ನೋಡಿ ಅನಂದಿಸುವ ಪ್ರೇಕ್ಷಕ ಮಹಾಶಯ ಇಂತಹ ನಟೀಮಣಿಗಳ ಬಗ್ಗೆ ಗುಪ್ತ್ ಗುಪ್ತ್ ಆಗಿ ತುಸು ಹೆಚ್ಚೇ ಎನಿಸುವಷ್ಟು crushಗೊಳಗಾಗುವುದು ಸಹಜಾತಿಸಹಜ. ಅಂದರೆ ತೀರಾ ಕಾಮಣ್ಣ ಅಲ್ಲಲ್ಲ ಕಾಮನ್ನಾ.

  ತಾರಾ ಶಿಕ್ಷಕಿಯರು: ಒಮ್ಮೆ ನಿಮ್ಮ ಶಾಲಾ ಕಾಲೇಜು ದಿನಗಳನ್ನು ಸ್ಮರಿಸಿಕೊಳ್ಳಿ. ಜತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಕಂಡ ಅಂತಹುದೇ ದೃಶ್ಯಗಳನ್ನು ನೆನಪಿಸಿಕೊಳ್ಳಿ. ಅವು ನಿಮ್ಮನ್ನು ಬೇರೆಯದೇ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಈ ಶಾಲಾ ಶಿಕ್ಷಕಿಯರನ್ನು ಅರ್ಥಾತ್ ತಾರಾ ಶಿಕ್ಷಕಿಯರನ್ನು ನೋಡಿ ಕಣ್ತುಂಬಿಸಿಕೊಳ್ಳಿ. ಅಂದಹಾಗೆ ಬಹುತೇಕ ಬಾಲಿವುಡ್ ಸಿನಿಮಾಗಳಲ್ಲಿ ಈ ತಾರಾ ಶಿಕ್ಷಕಿ ಪಾತ್ರ ಬರುವುದೇ ನಿಮ್ಮ ಮನಸ್ಸಿಗೆ ಮುದ ನೀಡಲು, ನಿಮ್ಮೆದುರಿಗೆ ಬಂದು ಕಚಗುಳಿಯಿಡಲು...
  ಕಪ್ಪು ಹಲಗೆಯ ಮುಂದೆ ಬಿಳಿ ಸೀಮೆಸುಣ್ಣದ ಬಳಪ ಹಿಡಿದು ಬಳಕುವ ತಾರಾ ಶಿಕ್ಷಕಿಯರು ನಿಮಗಾಗಿ ಇಲ್ಲಿ ಹಾಜರ್!

  ಸುಷ್ಮಿತಾ ಸೇನ್

  Main Hoon Na ಅಂದ ಸುಷ್ಮಿತಾಳನ್ನು ಯಾನಿ ಚಾಂದಿನಿ ಚೋಪ್ರಾಳನ್ನು ಮರೆಯಲು ಹೇಗೆ ಸಾಧ್ಯ? ಇಂದಿಗೂ hottest teachers listನಲ್ಲಿ ಸುಷ್ಮಿತಾಳ ಬಳಕುವ ಸೊಂಟವೇ ಕಣ್ಮುಂದೆ ಸುಳಿಯುವುದು.

  ನಾಯಕನ ಜತೆಗೆ ಪ್ರೇಕ್ಷಕನ ಬಿಸಿಯೇರಿಸುವ ಸುಷ್

  ಬಿಸಿಯೇರಿಸುವ ಸುಷ್. 37 ವರ್ಷದ ಮಾದಕ ಕನ್ಯೆ ಸುಷ್ಮಿತಾ ಆ ಚಿತ್ರದಲ್ಲಿ ನಾಮ್ ಕೆ ವಾಸ್ತೆ ಸೀರೆ ಸುತ್ತಿಕೊಂಡು ಸುಳಿದಾಡುತ್ತಿದ್ದರೆ ನಾಯಕ ಶಾರೂಕ್ ಖಾನ್ ಸೇರಿದಂತೆ ಪ್ರೇಕ್ಷಕರ ಸಾಲಿನಲ್ಲಿರುವ ಪಡ್ಡೆಗಳು ಸಹಾ ಹಾಯ್ ಹಾಯ್ ಅನ್ನುತ್ತಾರೆ.

  'ಗೋರಿ ಗೋರಿ' ಹಾಡಿಗೆ ಗೋರಿ ಸುಷ್ಮಾ ಮಿಂಚಿದ್ದು

  Main Hoon Na ಚಿತ್ರದಲ್ಲಿ ತನ್ನ ವಿದ್ಯಾರ್ಥಿ ಮಿತ್ರ ಅಮೃತಾ ರಾವ್ ಜತೆ 'ಗೋರಿ ಗೋರಿ' ಹಾಡಿಗೆ ಗೋರಿ ಸುಷ್ಮಾ ಮಿಂಚಿದ್ದು ಹೀಗೆ.

  ದೇಸಿ ಬಾಯ್ಸ್ ಕಿಚ್ಚೆಬ್ಬಿಸಿದ ಚಿತ್ರಾಂಗದ ಸಿಂಗ್

  2011ರ ಸಿನಿಮಾ- ದೇಸಿ ಬಾಯ್ಸ್- ಲೆಕ್ಚರರ್ ತನ್ಯಾ ಪಾತ್ರದಲ್ಲಿ ಚಿತ್ರಾಂಗದೆಯಾಗಿ ಮಿಂಚಿಂಗ್.

  ರಸವತ್ತಾಗಿ ಪಾಠ ಹೇಳಿಕೊಡುತ್ತಿರುವ ಚಿತ್ರಾಂಗದ

  ಕಪ್ಪು ಹಲಗೆಯ ಮುಂದೆ ಬಿಸಿ ಸೀಮೆಸುಣ್ಣದ ಬಳಪ ಹಿಡಿದು ಬಳಕುವ ಚಿತ್ರಾಂಗದ ಸಿಂಗ್ ಪಾಠವನ್ನು ರಸವತ್ತಾಗಿ ಹೇಳಿಕೊಡುತ್ತಿದ್ದಾರೆ.

  ಕ್ಲಾಸ್ ರೂಮಿನಲ್ಲಿ ಪದ ಹಾಡುತ್ತಿರುವ ಚಿತ್ರಾಂಗದ ಸಿಂಗ್

  ದೇಸಿ ಬಾಯ್ಸ್ ಚಿತ್ರದಲ್ಲಿ ಕ್ಲಾಸ್ ರೂಮಿನಲ್ಲಿ ಒಂದು ಹಾಡು. ಅಪ್ಪಟ 'ದೇಸಿ ಬಾಯ್' ಅಕ್ಷಯ್ ಖಾನನ ಪಡಿಪಾಟಲು ನೋಡಿ.

  ಟೀಚರ್ ರೊಮ್ಯಾನ್ಸ್

  ಶಾಲೆಯಲ್ಲಿ ಸ್ಟೂಡೆಂಟು ಮುಂದೆ ಜೀವನದಲ್ಲಿ ಬಾಯ್ ಫ್ರೆಂಡ್ ಬಾಲಿವುಡ್ ಮಸಾಲೆ ಅಂದರೆ ಇದೇನೆ!

  'ವಿದ್ಯಾ' ಬಾಲನ್

  ಹೆಸರಿನಲ್ಲಿ ವಿದ್ಯೆ ತುಂಬಿಸಿಕೊಂಡು ಎದೆಯಲ್ಲಿ ಬೆಚ್ಚನೆಯ ಕಾಮನೆಗಳನ್ನು ಕೆರಳಿಸುವ ವಿದ್ಯಾ ಬಾಲನ್ ಬಗ್ಗೆ ಏನು ಹೇಳುವುದು? ನಿಜಕ್ಕೂ ಅದು ಡರ್ಟಿ ಡರ್ಟಿ ಪಿಕ್ಚರುಗಳ ದಾಂಗುಡಿಯೇ!

  ಬಾಲಿವುಡ್ ಶಿಕ್ಷಕಿಯ ಬಿಸಿ ಬಿಸಿ ಡರ್ಟಿ ಪಿಕ್ಚರ್!

  ಕ್ಲಾಸಿನಲ್ಲಿ ಮೇಡಂ ಪಾಠ ಹೇಳುವುದನ್ನು ಬಿಟ್ಟು ಪದ ಹೇಳೋಕ್ಕೆ ಶುರು ಮಾಡಿದರೆ ಅದು ಪದಗಳಿಗೆ ನಿಲುಕದ ದೃಶ್ಯಾವಳಿಯೇ.

  ಕರೀನಾ ಕಪೂರ್

  2009ರಲ್ಲಿ ನಾಲ್ಕು ವರ್ಷಗಳ ಹಿಂದೆ ತುಂಬು ಸೌಂದರ್ಯದೊಂದಿಗೆ ಬಳಕುತ್ತಿದ್ದ ಕರೀನಾ ಖುರ್ಬಾನ್ ಚಿತ್ರದಲ್ಲಿ ಪ್ರೊಫೆಸರ್ ಅವಂತಿಕಾ ಅಹುಜಾ ಪಾತ್ರದಲ್ಲಿ ಕೇವಲ ಪಡ್ಡೆ ಪಡ್ಡೆ ವಿದ್ಯಾರ್ಥಿಗಳಿಗಾಗಿ ಹೇಗೆಲ್ಲಾ ತಮ್ಮ ಸೌಂದರ್ಯವನ್ನು ಖುರ್ಬಾನಿ ಮಾಡಿದ್ದಾಳೆ ನೀವೂ ನೋಡಿಬಿಡಿ.

  ಪ್ರೊಫೆಸರುಗಳಿಬ್ಬರೂ ಲವ್ವಲ್ಲಿ ಬಿದ್ದರೆ ಹೀಗೇನೇ ಆಗೋದು

  ಖುರ್ಬಾನ್ ಚಿತ್ರದಲ್ಲಿ ಕರೀನಾ ಕಪೂರ್ ಒಬ್ಬಳೇ ಪ್ರೊಫೆಸರ್ ಅಲ್ಲ. ಜತೆಗೆ ಎಹಸಾನ್ ಖಾನ್ ಪಾತ್ರಧಾರಿ ಸೈಫ್ ಸಹ ಪ್ರೊಫೆಸರ್. ಆದರೆ ಇಬ್ಬರೂ ಪರಸ್ಪರ ಲವ್ವಲ್ಲಿ ಬಿದ್ದು ಪ್ರೇಕ್ಷಕ ಪ್ರಭುವಿಗೆ ಭರಪೂರ್ ಮನರಂಜನೆ ನೀಡುತ್ತದೆ ನಿಜ ಜೀವನದಲ್ಲೂ ಜೋಡಿಯಾಗಿರುವ ಈ ಪ್ರೊಫೆಸರ್ ಜೋಡಿ.

  English summary
  Teachers day special- Hottest teachers in Bollywood films. Many Bollywood movies portray an everyday life in a college or school and when this is done, of course there will be teachers, principal etc. As the B-Town movies are often prone to some masala, we have a hot teacher on the screen in college life movies. 

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more