For Quick Alerts
  ALLOW NOTIFICATIONS  
  For Daily Alerts

  'ತಾಕತ್ತಿದ್ದರೆ ತಡೆಯಿರಿ': ಸಲ್ಮಾನ್ ಖಾನ್ ಮನೆಗೆ ಬಾಂಬ್ ಬ್ಲಾಸ್ಟ್ ಬೆದರಿಕೆ.!

  |

  ''ಇನ್ನೆರಡು ಗಂಟೆಯೊಳಗೆ ಸಲ್ಮಾನ್ ಖಾನ್ ನೆಲೆಸಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ತಾಕತ್ತಿದ್ದರೆ ತಡೆಯಿರಿ'' - ಹೀಗೊಂದು ಇ-ಮೇಲ್ ಮುಂಬೈ ಪೊಲೀಸರಿಗೆ ಬಂದಿತ್ತು. ಕೂಡಲೆ ಅಲರ್ಟ್ ಆದ ಮುಂಬೈ ಪೊಲೀಸರು ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿ ಬಾಂಬ್ ಗಾಗಿ ಶೋಧ ನಡೆಸಿದರು. ಆದಾದಮೇಲೆಯೇ ಇದೊಂದು ಹುಸಿ ಬಾಂಬ್ ಬೆದರಿಕೆ ಅಂತ ಪೊಲೀಸರಿಗೆ ಖಾತರಿ ಆಗಿದ್ದು.!

  ಅಸಲಿಗೆ, ''ಸಲ್ಮಾನ್ ಖಾನ್ ಮನೆಗೆ ಬಾಂಬ್ ಇಡಲಾಗಿದೆ'' ಎನ್ನುವ ಇ-ಮೇಲ್ ಮುಂಬೈ ಪೊಲೀಸರಿಗೆ ತಲುಪಿದ್ದು ಡಿಸೆಂಬರ್ 4 ರಂದು. ಉತ್ತರಪ್ರದೇಶದ ಗಾಜಿಯಾಬಾದ್ ನ 16 ವರ್ಷದ ಯುವಕನೊಬ್ಬ ಈ ಇ-ಮೇಲ್ ಕಳುಹಿಸಿದ್ದ. ಈ ಘಟನೆ ನಡೆದು ಹತ್ತು ದಿನಗಳಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುಂದೆ ಓದಿರಿ...

  ಏನಿದು ಘಟನೆ.?

  ಏನಿದು ಘಟನೆ.?

  ''ಬಾಂದ್ರಾದಲ್ಲಿ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್ ಖಾನ್ ಮನೆಯಲ್ಲಿ ಇನ್ನೆರಡು ಗಂಟೆಯೊಳಗೆ ಬಾಂಬ್ ಬ್ಲಾಸ್ಟ್ ಆಗುತ್ತೆ. ತಾಕತ್ತಿದ್ದರೆ ತಡೆಯಿರಿ'' ಎಂದು ಮುಂಬೈ ಪೊಲೀಸರಿಗೆ ಡಿಸೆಂಬರ್ 4 ರಂದು ಇ-ಮೇಲ್ ಬಂದಿತ್ತು. ಕೂಡಲೆ ಹೈ ಅಲರ್ಟ್ ಆದ ಮುಂಬೈ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಶೋಧ ಕಾರ್ಯ ನಡೆಸಿದರು.

  ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ

  ಮನೆಯಲ್ಲಿ ಸಲ್ಮಾನ್ ಖಾನ್ ಇರಲಿಲ್ಲ.!

  ಮನೆಯಲ್ಲಿ ಸಲ್ಮಾನ್ ಖಾನ್ ಇರಲಿಲ್ಲ.!

  ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುವಾಗ ಸಲ್ಮಾನ್ ಖಾನ್ ಮನೆಯಲ್ಲಿ ಇರಲಿಲ್ಲ. 'ದಬಾಂಗ್-3' ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದರು. ಮನೆಯಲ್ಲಿದ್ದ ತಂದೆ ಸಲೀಂ ಖಾನ್, ಸಲ್ಮಾ ಖಾನ್, ಸಹೋದರಿ ಅರ್ಪಿತಾ ರನ್ನ ಸುರಕ್ಷಿತ ಜಾಗಕ್ಕೆ ಶಿಫ್ಟ್ ಮಾಡಿ ಪೊಲೀಸರು ಬಾಂಬ್ ಗಾಗಿ ಹುಡುಕಾಟ ನಡೆಸಿದರು.

  ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ

  ಹುಸಿ ಬಾಂಬ್ ಇ-ಮೇಲ್.!

  ಹುಸಿ ಬಾಂಬ್ ಇ-ಮೇಲ್.!

  ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಸತತ ನಾಲ್ಕು ತಾಸು ಶೋಧ ನಡೆಸಲಾಯಿತು. ಆದ್ರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆ ಆಗಲಿಲ್ಲ. ಬಳಿಕ ಹುಸಿ ಬಾಂಬ್ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನ ಪೊಲೀಸರು ಟ್ರ್ಯಾಕ್ ಮಾಡಿದರು.

  ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ

  16 ವರ್ಷದ ಯುವಕ

  16 ವರ್ಷದ ಯುವಕ

  ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದು ಉತ್ತರ ಪ್ರದೇಶದ ಗಾಜಿಯಾಬಾದ್ ನ 16 ವರ್ಷದ ಯುವಕ ಎಂದು ತನಿಖೆಯಲ್ಲಿ ತಿಳಿದು ಬಂತು. ಆತನ ವಿರುದ್ಧ ಚಾರ್ಜ್ ಶೀಟ್ ಫೈಲ್ ಮಾಡಿ, ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ.

  English summary
  Teen Threatens Salman Khan with bomb blast at Galaxy Apartments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X