ಕಿಡ್ನಿ ವೈಫಲ್ಯದಿಂದ ಕಿರುತೆರೆ ಖ್ಯಾತ ನಟಿ ಲೀನಾ ಆಚಾರ್ಯ ನಿಧನ
ಹಿಂದಿ ಚಿತ್ರರಂಗದ ಕಿರುತೆರೆ ನಟಿ ಲೀನಾ ಆಚಾರ್ಯ ಶನಿವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟಿ ಕೊನೆಯುಸಿರೆಳೆದರು ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.
ಲೀನಾ ಆಚಾರ್ಯ ಅವರು 'ಕ್ಲಾಸ್ ಆಫ್ 2020'' ವೆಬ್ ಸಿರೀಸ್ ಹಾಗೂ 'ಸೇಥ್ ಜಿ', 'ಆಪ್ ಕೆ ಆ ಜೇನ್ ಸೆ' ಮತ್ತು 'ಮೇರಿ ಹನಿಕಾರಕ್ ಬಿವಿ' ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಲೀನಾ ಆಚಾರ್ಯ ಅವರ ನಿಧನಕ್ಕೆ ಕಿರುತೆರೆ ಲೋಕ ಕಂಬನಿ ಮಿಡಿದಿದೆ.
ಚಿತ್ರಕಥೆಗಾರ ಮತ್ತು ನಟ ಅಭಿಷೇಕ್ ಗೌತಮ್ ಅವರು ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದು, ''ನನ್ನ ಉತ್ತಮ ಸ್ನೇಹಿತ ಮತ್ತು ಯಾವಾಗಲೂ ಇತರರ ಪರವಾಗಿ ನಿಲ್ಲುತ್ತಿದ್ದ ಶ್ರೇಷ್ಠ ಕಲಾವಿದ ಲೀನಾ ಆಚಾರ್ಯ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಉತ್ತಮ ಸ್ನೇಹಿತೆಯನ್ನು ಕಳೆದುಕೊಂಡೆ. ನಿಮ್ಮನ್ನು ಸದಾ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಲೀನಾ ಆಚಾರ್ಯ ನಟಿಸಿದ್ದ 'ಕ್ಲಾಸ್ ಆಫ್ 2020' ವೆಬ್ ಸಿರಸ್‌ನ ಸಹನಟ ರೋಹನ್ ಮೆಹ್ರಾ ಸಹ ಬೇಸರ ವ್ಯಕ್ತಪಡಿಸಿದ್ದು, ''ಲೀನಾ ಆಚಾರ್ಯ ಆತ್ಮಕ್ಕೆ ಶಾಂತಿ ಸಿಗಲಿ. ಕಳೆದ ವರ್ಷ ಈ ಸಮಯಕ್ಕೆ ನಾವು 'ಕ್ಲಾಸ್ ಆಫ್ 2020' ಚಿತ್ರೀಕರಣದಲ್ಲಿದ್ದೇವೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ'' ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷದಿಂದ ನಟಿ ಲೀನಾ ಆಚಾರ್ಯ ಕಿಡ್ನಿ ವೈಫಲ್ಯ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.


Click it and Unblock the Notifications











