For Quick Alerts
  ALLOW NOTIFICATIONS  
  For Daily Alerts

  ಕಾನ್ ಫೆಸ್ಟಿವಲ್ ಬಗ್ಗೆ ಕಿರುತೆರೆ ನಟಿ ಶ್ವೇತಾ ಬಸು ಪ್ರಸಾದ್ ಅಸಮಾಧಾನ

  |

  ಫ್ರಾನ್ಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕಾನ್‌ ಫೆಸ್ಟಿವಲ್ ನಡೆಯುತ್ತಿದೆ. ಭಾರತದ ಹಲವು ತಾರೆಯರು ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಸದ್ಯ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ನಟಿಯರ ಗೌನ್, ಮೇಕಪ್ ಕುರಿತೇ ಹೆಚ್ಚು ಚರ್ಚೆಯಾಗ್ತಿದೆ. ಈ ಚರ್ಚೆಯ ವಿರುದ್ದ 'ಚಂದ್ರ ನಂದನಿ' ಧಾರಾವಾಹಿಯ ನಟಿ ಶ್ವೇತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರಹ ಹಂಚಿಕೊಂಡಿರುವ ನಟಿ ಶ್ವೇತಾ ಕಾನ್‌ ಚಿತ್ರೋತ್ಸವದ ಕುರಿತು ತಮ್ಮ ಅಸಮಾಧನವನ್ನು ಹೊರ ಹಾಕಿದ್ದಾರೆ. ರೆಡ್ ಕಾರ್ಪೆಟ್ ಬಗ್ಗೆ ಪ್ರತಿ ವರ್ಷ ಎಲ್ಲಾ ಮೀಡಿಯಾಗಳು ಕವರ್ ಮಾಡುತ್ತವೆ. ಯಾರು ಯಾವ ಗೌನ್ ಹಾಕಿದ್ದರು? ಯಾವ ಮೇಕಪ್ ಮಾಡಿದ್ದರು? ಯಾರು ಡಿಸೈನರ್ ಎಂದು ವರ್ಷಾನುಗಟ್ಟಲೇ ಚರ್ಚೆ ನಡೆಯುತ್ತವೆ. ಆದರೆ, ಕಾನ್‌ ಚಿತ್ರೋತ್ಸವದಲ್ಲಿ ಯಾವ ಸಿನಿಮಾ ಪ್ರದರ್ಶನವಾಯ್ತು? ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬಂತು ?ಎಂಬುದರ ಬಗ್ಗೆ ಮಾತಾನಾಡುವುದು ಇಲ್ಲ. ಸುದ್ದಿಯೂ ಮಾಡುವುದಿಲ್ಲ. ಕಲಾವಿದರಿಗೆ ಹಾಗೂ ಭಾರತೀಯ ಸಿನಿಮಾಗಳಿಗೆ ಕವರೇಜ್ ಸಿಗೋದಿಲ್ಲ. ಹೊಸ ನಿರ್ದೇಶಕರಿಗೆ, ತಂತ್ರಜ್ಞರಿಗೆ ಹೊಸ ತಂತ್ರಜ್ಞಾನಕ್ಕೆ ಯಾವುದೇ ಅವಕಾಶವಿಲ್ಲ, ಈ ಕಾನ್ ಫೆಸ್ಟಿವಲ್‌ನಿಂದ ಏನು ಪ್ರಯೋಜನವಿಲ್ಲ. ನಮ್ಮದು ಸಿನಿಮಾ ಅನಕ್ಷರಸ್ಥ ದೇಶವಾದರೂ ಆಶ್ಚರ್ಯವಿಲ್ಲ ಎಂದು ಕಾನ್ ಚಿತ್ರೋತ್ಸವದ ಬಗ್ಗೆ ನಟಿ ಶ್ವೇತಾ ಬೇಸರ ವ್ಯಕ್ತ ಪಡಿಸಿದ್ದಾರೆ.

  ಕಳೆದ ಮೂರು ದಿನಗಳಿಂದ ಕಾನ್‌ ಚಿತ್ರೋತ್ಸವ ಫ್ರಾನ್ಸ್‌ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಹೆಚ್ಚಾಗಿ ಭಾರತೀಯ ನಟ-ನಟಿಯರು ಭಾಗವಹಿಸಿದ್ದಾರೆ. ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಆರಾಧ್ಯಾ ಬಚ್ಚನ್, ತಮನ್ನಾ ಭಾಟಿಯಾ, ಊರ್ವಶಿ ರೌಟೇಲಾ, ಎ.ಆರ್‌ ರೆಹಮಾನ್, ಆರ್. ಮಾಧವನ್, ನಟಿ ಪೂಜಾ ಹೆಗಡೆ ಮುಂತಾದ ಹಲವರು ಕಾನ್‌ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

  ಈ ಬಾರಿಯ ಕಾನ್‌ ಚಿತ್ರೋತ್ಸವದಲ್ಲಿ ಆರ್. ಮಾಧವನ್ ಅವರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' , ನಿಖಿಲ್ ಮಹಾಜನ್ ಅವರ 'ಗೋಧಾವರಿ' (ಮರಾಠಿ ಸಿನಿಮಾ) ಅಚಲ್ ಮಿಶ್ರಾ ರವರ 'ಧುಯಿನ್'
  (Dhuin) ಶಂಕರ್ ಶ್ರೀ ಕುಮಾರ್ ಅವರ 'ಆಲ್ಫಾ ಬೀಟಾ ಗಾಮಾ' (Alpha Beta Gamma) ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

  Television Actress Shweta Basu Prasad Reaction on Actress Costume in Cannes Festival

  ಕಾನ್‌ ಚಿತ್ರೋತ್ಸವದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪೂಜಾ ಹೆಗಡೆ, ತಮನ್ನಾ, ವಿಭಿನ್ನ ಗೆಟಪ್‌ಗಳಲ್ಲಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನು 28 ತಾರೀಖಿನವರೆಗೂ ಚಿತ್ರೋತ್ಸವ ನಡೆಯಲಿದ್ದು, ಅನೇಕ ನಟ ನಟಿಯರು ತಮ್ಮ ವಿಭಿನ್ನ ಡ್ರೆಸ್‌ಗಳ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ.

  English summary
  Television Actress Shweta Basu Prasad Reaction on Actress Costume in Cannes Festival
  Saturday, May 21, 2022, 8:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X