ಅಕ್ಷಯ್ ಕುಮಾರ್‌ಗೆ WWE ಅಂಡರ್ ಟೇಕರ್ ಓಪನ್ ಚಾಲೆಂಜ್; 'ಖಿಲಾಡಿ' ಪ್ರತಿಕ್ರಿಯೆ ಹೀಗಿದೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ 'ಖಿಲಾಡಿಯೋಂಕ ಕಾ ಖಿಲಾಡಿ' ಚಿತ್ರದ 25 ವರ್ಷದ ಸಂಭ್ರಮವನ್ನು ಆಚರಿಸಿದ್ದರು. ಅಕ್ಷಯ್ ಕುಮಾರ್ ಸಿನಿ ಜೀವನಕ್ಕೆ ಒಳ್ಳೆಯ ಮೈಲೇಜ್ ತಂದುಕೊಟ್ಟ ಸಿನಿಮಾ ಇದು. 25ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ WWE ಅಂಡರ್ ಟೇಕರ್ ಮತ್ತು ಅಕ್ಷಯ್ ಕುಮಾರ ಫೈಟ್ ಬಗ್ಗೆ ಮೀಮ್ ಗಳು ವೈರಲ್ ಆಗಿದ್ದವು. WWE ಅಂಡರ್ ಟೇಕರ್ ರನ್ನು ಸೋಲಿಸಿದ ಕೆಲವೇ ಕೆಲವು ಮಂದಿಯಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು ಎನ್ನುವ ಮೀಮ್ ಎಲ್ಲರ ಗಮನ ಸೆಳೆದಿತ್ತು.
Recommended Video
ಈ ಮೀಮ್ ಅನ್ನು ಶೇರ್ ಮಾಡಿ ಅಕ್ಷಯ್ ಕುಮಾರ್, "ನಿಜಕ್ಕೂ ನಾನು ಅಂಟರ್ ಟೇಕರ್ ಜೊತೆ ಸೆಣೆಸಿಲ್ಲ. ವ್ರೆಸ್ಲರ್ ಬ್ರಿಯಾನ್ ಲೀ ಅವರು ಅಂಡರ್ ಟೇಕರ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು" ಎಂದು ಹೇಳಿದ್ದರು. ಈ ಪೋಸ್ಟ್ WWE ಅಂಡರ್ ಟೇಕರ್ ಗಮನ ಸೆಳೆದಿದೆ.
ಅಕ್ಷಯ್ ಕುಮಾರ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಅಂಡರ್ ಟೇಕರ್, "ಹಾ! ನೀವು ರಿಯಲ್ ಪಂದ್ಯಕ್ಕೆ ಸಿದ್ಧರಾದಾಗ ಹೇಳಿ" ಎಂದು ಕಾಮೆಂಟ್ ಮಾಡಿದ್ದಾರೆ. ಅಂಡರ್ ಟೇಕರ್ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿದ ಅಕ್ಷಯ್, "ಮೊದಲು ನನ್ನ ವಿಮೆಯನ್ನು ಪರಿಶೀಲಿಸುತ್ತೇನೆ ಬಳಿಕ ಹಿಂತಿರುಗೋಣ, ಬ್ರೋ" ಎಂದು ತಮಾಶೆಯ ಉತ್ತರ ನೀಡಿದ್ದಾರೆ.

ಇಬ್ಬರ ಮಾತುಕತೆಯ ಸ್ಕ್ರೀನ್ ಶಾಟ್ ತೆಗೆದು WWE ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, "ರಿಯಲ್ ಅಂಡರ್ ಟೇಕರ್ ಮತ್ತು ಅಕ್ಷಯ್ ಕುಮಾರ್ ನಡುವೆ ರಿಯಲ್ ಪಂದ್ಯ ನಡೀಲಿ" ಎಂದು ಬರೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅಂಡರ್ ಟೇಕರ್ ಮಾತುಕತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂಡರ್ ಟೇಕರ್ ನಿಜವಾದ ಹೆಸರು ಮಾರ್ಕ್ ಕ್ಯಾಲವೆ. WWE ಸೂಪರ್ ಸ್ಟಾರ್ ಗಳಲ್ಲಿ ಅಂಡರ್ ಟೇಕರ್ ಕೂಡ ಒಬ್ಬರು. 1990ರಲ್ಲಿ WWEಗೆ ಪದಾರ್ಪಣೆ ಮಾಡಿದ ಅಂಡರ್ ಟೇಕರ್ 30 ವರ್ಷಗಳ ಸುದೀರ್ಘ ಕಾಲ ಕುಸ್ತಿಪಟುವಾಗಿ ಸೆಣಸಾಡಿದ್ದಾರೆ. ಅಪಾರ ಅಭಿಮಾನಿ ಬಳಗಹೊಂದಿರುವ ಅಂಡರ್ ಟೇಕರ್ 2020ರಲ್ಲಿ ವೃತ್ತಪರ ಕುಸ್ತಿಯಿಂದ ನಿವೃತ್ತಿ ಹೊಂದಿದರು. ಇವರ ನಿವೃತ್ತಿ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು.


Click it and Unblock the Notifications











