For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ ತೆಲುಗು ನಟ ನಾಗಾರ್ಜುನ

  |

  ಸೌತ್ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಮಂಗಳವಾರ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮುಂಬೈನಲ್ಲಿ ಅಂತಿಮ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ನಾಗಾರ್ಜುನ ತನ್ನ ಭಾಗದ ದೃಶ್ಯಗಳ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ.

  ಬ್ರಹ್ಮಾಸ್ತ್ರ ಶೂಟಿಂಗ್ ಮುಗಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಾಗಾರ್ಜುನ ''ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅವರ ಜೊತೆ ಶೂಟಿಂಗ್ ಮಾಡಿದ್ದು ಅದ್ಭುತ ಅನುಭವ. ಅನಯ್ ಮುಖರ್ಜಿ ರಚಿಸಿರುವ ಅದ್ಭುತ ಜಗತ್ತು ನೋಡಲು ಕಾಯುತ್ತಿದ್ದೇನೆ'' ಎಂದು ಖುಷಿಯಾಗಿದ್ದಾರೆ.

  ಬ್ರಹ್ಮಾಸ್ತ್ರ ಸಿನಿಮಾದ ಬಜೆಟ್ 150 ಕೋಟಿಯಲ್ಲ, ಅದಕ್ಕಿಂತ ಹೆಚ್ಚುಬ್ರಹ್ಮಾಸ್ತ್ರ ಸಿನಿಮಾದ ಬಜೆಟ್ 150 ಕೋಟಿಯಲ್ಲ, ಅದಕ್ಕಿಂತ ಹೆಚ್ಚು

  ರಣ್ಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಅಮಿತಾಭ್ ಬಚ್ಚನ್, ಮೌನಿ ರಾಯ್ ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿದೆ. ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ಧರ್ಮ ಪ್ರೊಡಕ್ಷನ್ ಮತ್ತು ಫಾಕ್ಸ್ ಸ್ಟಾರ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದಾರೆ.

  ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗುತ್ತಿದೆ. ಬಜೆಟ್ ವಿಚಾರದಲ್ಲಿ ಬ್ರಹ್ಮಾಸ್ತ್ರ ಭಾರಿ ಚರ್ಚೆಯಲ್ಲಿದೆ. 150-300 ಕೋಟಿವರೆಗೂ ಬಂಡವಾಳ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

  ಇನ್ನು 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ 2020ರಲ್ಲಿ ತೆರೆಗೆ ಬರುವುದಾಗಿ ಘೋಷಿಸಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಮತ್ತಷ್ಟು ವಿಳಂಬವಾಗಿದೆ. ಕೊನೆಯ ಹಂತದ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ಬ್ರಹ್ಮಾಸ್ತ್ರ ಈ ವರ್ಷದ ಅಂತ್ಯಕ್ಕೆ ಚಿತ್ರಮಂದಿರದಲ್ಲಿ ದರ್ಶನ ಕೊಡಬಹುದು.

  ಟಗರು ಕಣ್ಣಿಗೆ ಬೀಳಲಿಲ್ಲವೇ ಪೊಗರು ಅಸಹ್ಯಗಳು | Filmibeat Kannada
  English summary
  Telugu actor Nagarjuna finished hindi movie brahmastra shooting on tuesday in mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X