ಬಾಲಿವುಡ್ ನ ಐತಿಹಾಸಿಕ ಚಿತ್ರ ರಿಜೆಕ್ಟ್ ಮಾಡಿದ್ದ ಪ್ರಭಾಸ್.! ಆ ಚಿತ್ರ ಈಗ ಸೂಪರ್ ಹಿಟ್

By Bharath Kumar

ಎಷ್ಟೇ ದೊಡ್ಡ ಸ್ಟಾರ್ ನಟ ಆದ್ರು, ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡ್ಬೇಕು ಎಂಬ ಆಸೆ ಇದ್ದೇ ಇರುತ್ತೆ. 'ಬಾಹುಬಲಿ' ಚಿತ್ರದ ಮೂಲಕ ಜಗತ್ಪ್ರಸಿದ್ದವಾದ ತೆಲುಗು ನಟ ಪ್ರಭಾಸ್ ಗೆ ಈಗ ಆಫರ್ ಮೇಲೆ ಆಫರ್ ಬರ್ತಿದೆ. ಕಾರಣ 'ಬಾಹುಬಲಿ' ತಂದುಕೊಟ್ಟ ನೇಮು ಫೇಮು.

'ಬಾಹುಬಲಿ' ಸಿನಿಮಾ ನೋಡಿದ ಅದೆಷ್ಟೋ ನಟರು ಎಸ್ ಎಸ್ ರಾಜಮೌಳಿ ಜೊತೆ ಕೆಲಸ ಮಾಡ್ಬೇಕು ಎಂದುಕೊಂಡಿದ್ದರು ಅಂದ್ರೆ ಅಚ್ಚರಿಯಿಲ್ಲ. ಅದೇ ರೀತಿ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಕೂಡ ತಮ್ಮದೇ ಸ್ಟೈಲ್ ಆಫ್ ಮೇಕಿಂಗ್ ಮೂಲಕ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಿರ್ದೇಶಕ. ಈ ಡೈರೆಕ್ಟರ್ ಜೊತೆಯಲ್ಲೂ ಕೆಲಸ ಮಾಡಬೇಕು ಎಂಬುದು ಬಹುತೇಕ ನಟರು ಕನಸು ಅಂದ್ರು ನಂಬಲೇಬೇಕು.

ಇಂತಹ ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನ 'ಬಾಹುಬಲಿ' ನಟ ಪ್ರಭಾಸ್ ತಿರಸ್ಕರಿಸಿದ್ದರು ಎಂಬ ಇಂಟ್ರೆಸ್ಟಿಂಗ್ ವಿಷ್ಯ ಈಗ ಚರ್ಚೆಯಾಗ್ತಿದೆ. ಬಹುದೊಡ್ಡ ಪ್ರಾಜೆಕ್ಟ್ ಸಿನಿಮಾ ಇದಾಗಿತ್ತು. ಆದ್ರೆ, ಇಂತಹ ಚಿತ್ರವನ್ನ ಯಾಕೆ ರಿಜೆಕ್ಟ್ ಮಾಡಿದ್ರು. ಈಗ ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಯಾವುದು ಆ ಸಿನಿಮಾ.? ಮುಂದೆ ಓದಿ....

'ಪದ್ಮಾವತ್' ಚಿತ್ರಕ್ಕೆ ಆಫರ್ ಮಾಡಲಾಗಿತ್ತು

'ಪದ್ಮಾವತ್' ಚಿತ್ರಕ್ಕೆ ಆಫರ್ ಮಾಡಲಾಗಿತ್ತು

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ತಯಾರಾಗಿದ್ದ ಐತಿಹಾಸಿಕ ಸಿನಿಮಾ 'ಪದ್ಮಾವತ್' ಚಿತ್ರದಲ್ಲಿ ನಟಿಸುವಂತೆ ಪ್ರಭಾಸ್ ಗೆ ಆಫರ್ ಮಾಡಲಾಗಿತ್ತಂತೆ. ಆಗ 'ಬಾಹುಬಲಿ-2' ಚಿತ್ರದ ಮೇಕಿಂಗ್ ನಲ್ಲಿ ಬ್ಯುಸಿಯಿದ್ದರಂತೆ ಪ್ರಭಾಸ್. ಬಟ್, ತನ್ನ ಪಾತ್ರಕ್ಕೆ ಹೆಚ್ಚಿನ ಬೆಲೆ ಇಲ್ಲ ಎಂಬ ಕಾರಣಕ್ಕೆ ಪದ್ಮಾವತ್ ಚಿತ್ರವನ್ನ ರಿಜೆಕ್ಟ್ ಮಾಡಿದ್ದರಂತೆ ಎಂಬ ವಿಷ್ಯ ಬಹಿರಂಗವಾಗಿದೆ.

'ಪದ್ಮಾವತಿ'ಯ ಪತಿಯಾಗಬೇಕಿತ್ತು ಪ್ರಭಾಸ್

'ಪದ್ಮಾವತಿ'ಯ ಪತಿಯಾಗಬೇಕಿತ್ತು ಪ್ರಭಾಸ್

ಈ ಮೊದಲೇ ಆಫರ್ ಮಾಡಿದಂತೆ ನಟ ಪ್ರಭಾಸ್ ರಾಣಿ ಪದ್ಮಾವತಿಯ ಪತಿ ಮಹಾರವಲ್ ರತನ್ ಸಿಂಗ್ ಪಾತ್ರ ನಿರ್ವಹಿಸಬೇಕಿತ್ತು. ಬಟ್, ಅಂತಿಮವಾಗಿ ಈ ಪಾತ್ರದಲ್ಲಿ ಬಿ-ಟೌನ್ ಸ್ಟಾರ್ ಶಾಹೀದ್ ಕಪೂರ್ ಕಾಣಿಸಿಕೊಂಡ್ರು.

ದೀಪಿಕಾ ಜೋಡಿಯಾಗಲಿಲ್ಲ ಪ್ರಭಾಸ್

ದೀಪಿಕಾ ಜೋಡಿಯಾಗಲಿಲ್ಲ ಪ್ರಭಾಸ್

'ಪದ್ಮಾವತ್' ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರವನ್ನ ನಿಭಾಯಿಸಿದ್ದರು. ಪ್ರಭಾಸ್ ಈಕೆಯೆ ಪತಿಯಾಗಬೇಕಿತ್ತು. ಒಂದು ವೇಳೆ ಪ್ರಭಾಸ್ ಈ ಚಿತ್ರವನ್ನ ಒಪ್ಪಿಕೊಂಡಿದ್ದರೇ ದೀಪಿಕಾ ಜೋಡಿಯಾಗಿ ಪ್ರಭಾಸ್ ಅಭಿನಯಿಸುತ್ತಿದ್ದರು. ಆದ್ರೆ, ಈ ಅವಕಾಶ ಮಿಸ್ ಆಯ್ತು.

ದೀಪಿಕಾಗೂ ಮೊದಲು ಐಶ್ ಮಾಡಬೇಕಿತ್ತು

ದೀಪಿಕಾಗೂ ಮೊದಲು ಐಶ್ ಮಾಡಬೇಕಿತ್ತು

ದೀಪಿಕಾ ಪಡುಕೋಣೆಗೆ ಮೊದಲು ನಟಿ ಐಶ್ವರ್ಯ ರೈ ರಾಣಿ ಪದ್ಮಾವತಿ ಪಾತ್ರ ಮಾಡಬೇಕಿತ್ತಂತೆ. ಇದು ಬನ್ಸಾಲಿ ಅವರ ಮೊದಲ ಆಯ್ಕೆಯೂ ಆಗಿತ್ತು. ಆದ್ರೆ, ಐಶ್ವರ್ಯ ಜೊತೆ ಯಾವ ನಟರನ್ನ ಕರೆತರುವುದು ಎಂಬ ಯೋಚನೆ ನಿರ್ದೇಶಕರಿಗೆ ಕಾಡಿತ್ತು. ಹೀಗಾಗಿ, ಐಶ್ ಕೂಡ ಪ್ರಾಜೆಕ್ಟ್ ನಿಂದ ಹಿಂದೆ ಸರಿಯಲು ನಿರ್ಧರಿಸಿದರು. ಆಗ ಐಶ್ ಬದಲು ದೀಪಿಕಾ ಜೊತೆ ಸಿನಿಮಾ ಮಾಡಿದ್ರಂತೆ ಬನ್ಸಾಲಿ.

ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ

ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ

ವಿವಾದಗಳ ನಡುವೆಯೇ ಬಿಡುಗಡೆಯಾದ 'ಪದ್ಮಾವತ್' ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಪ್ರತಿಕ್ರಿಯೆ ಸಿಕ್ಕಿತ್ತು. ದೀಪಿಕಾ ಪಡುಕೋಣೆ, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಹಾಗೂ ಮಹಾರವಲ್ ರತನ್ ಸಿಂಗ್ ಆಗಿ ಶಾಹೀದ್ ಕಪೂರ್ ಅಭಿನಯಿಸಿದ್ರು.

More from Filmibeat

English summary
Telugu superstar Prabhas, better known by his onscreen name 'Baahubali', was offered the role of Maharawal Ratan Singh. but, he felt that Ratan Singh's role in the film was not as strong for him and hence he declined the offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X