ರಶ್ಮಿಕಾ ಬಿಟ್ಟು 'ಕಬೀರ್ ಸಿಂಗ್' ನಾಯಕಿ ಜೊತೆ ಬಾಲಿವುಡ್ ಗೆ ಹೊರಟ ವಿಜಯ್ ದೇವರಕೊಂಡ

Recommended Video

Vijay Devarakonda and Kiara Advani Visuals at Filmalaya | FILMIBEAT KANNADA

ನಟ ವಿಜಯ್ ದೇವರಕೊಂಡ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಜೋಡಿ. ಸೌತ್ ನಲ್ಲಿ ಮಾತ್ರವಲ್ಲದೆ ಈ ಜೋಡಿ ಬಾಲಿವುಡ್ ಗೂ ಎಂಟ್ರಿ ಕೊಡ್ತಿದೆ ಎನ್ನುವ ಮಾತುಗಳು ಸಾಕಷ್ಟು ಬಾರಿ ಕೇಳಿ ಬರುತ್ತಿತ್ತು.

ಆದ್ರೀಗ ವಿಜಯ್ ದೇವರಕೊಂಡ ಬಾಲಿವುಡ್ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಆದ್ರೆ ರಶ್ಮಿಕಾ ಮಂದಣ್ಣ ಜೊತೆ ಅಲ್ಲ. ಇತ್ತೀಚಿಗೆ ಮುಂಬೈನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ವಿಜಯ್ ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೊತೆ ಕಾಣಿಸಿಕೊಂಡಿದ್ದಾರೆ.

ವಿಶೇಷ ಅಂದ್ರೆ ಕರಣ್ ಜೋಹರ್ ಬಾಲಿವುಡ್ ನಟಿ ಕಿಯಾರ ಅಡ್ವಾನಿ ಅವರನ್ನು ಭೇಟಿ ಮಾಡಿಸಿದ್ದಾರೆ. ವಿಜಯ್ ಮತ್ತು ಕಿಯಾರ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾಗಿ ಕರಣ್ ಸಿನಿಮಾದಲ್ಲಿ ವಿಜಯ್ ಮತ್ತು ಕಿಯಾರ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Telugu Actor Vijay Devarakonda Bollywood Debut With Actress Kiara Advani

'ಡಿಯರ್ ಕಾಮ್ರೇಡ್' ಸಿನಿಮಾ ಸೌತ್ ಇಂಡಿಯಾದ ಭಾಷೆಗಳಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದ್ರೆ ಹಿಂದಿಯಲ್ಲಿ ತೆರೆಗೆ ಬಂದಿರಲಿಲ್ಲ. ಹಾಗಾಗಿ ಮುಂಬೈನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋನಲ್ಲಿ ವಿಜಯ್ ಮತ್ತು ರಶ್ಮಿಕಾ ಇಬ್ಬರು ಭಾಗಿಯಾಗಿದ್ದರು. ಆ ಸಮಯದಲ್ಲು ಕಿಯಾರ ಜೊತೆ ಕಾಣಿಸಿಕೊಂಡಿದ್ದರು ವಿಜಯ್. ನಂತರ ಮನೀಶ್ ಮಲ್ಹೋತ್ರ ನಿವಾಸದಲ್ಲೂ ಕರಣ್ ಜೋಹರ್ ಜೊತೆ ಇಬ್ಬರು ಕಾಣಿಸಿಕೊಂಡಿದ್ದರು.

ವಿಜಯ್ ದೇವರಕೊಂಡ ಅವರನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡಬೇಕು ಎನ್ನುವುದು ಕರಣ್ ಆಸೆ. ಈಗಾಗಲೆ ಸಾಕಷ್ಟು ಆಫರ್ಸ್ ಬಂದರು ವಿಜಯ್ ಗ್ರೀನ್ ಸಿಗ್ನಲ್ ನೀಡಲಿಲ್ಲ. ಆದ್ರೀಗ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ವಿಜಯ್ ಆಗಲಿ ಅಥವಾ ಕರಣ್ ಜೋಹರ್ ಆಗಲಿ ತುಟಿ ಬಿಚ್ಚುತ್ತಿಲ್ಲ. ಆದ್ರೆ ಅರ್ಜುನ್ ರೆಡ್ಡಿ ನಟ ಬಾಲಿವುಡ್ ಸಿನಿಮಾ ಮಾಡುವುದಂತು ಪಕ್ಕ. ಯಾವಾಗ ಎನ್ನುವುದು ಸಧ್ಯದಲ್ಲೇ ಬಹಿರಂಗವಾಗಲಿದೆ.

More from Filmibeat

English summary
Telugu actor Vijay devarakonda bollywood debut with actress Kiara Advani. Karan Johar may launch Vijay Devarakonda in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X