For Quick Alerts
  ALLOW NOTIFICATIONS  
  For Daily Alerts

  'ಬಾಲಾಕೋಟ್ ಏರ್ ಸ್ಟ್ರೈಕ್' ಸಿನಿಮಾ: ಅಭಿನಂದನ್ ಪಾತ್ರದಲ್ಲಿ ದಕ್ಷಿಣದ ಸ್ಟಾರ್ ನಟ

  |

  ಯುದ್ಧ ಸನ್ನಿವೇಶಗಳನ್ನು ಆಧರಿಸಿ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. 'ಉರಿ' ಸಿನಿಮಾದ ಸಕ್ಸಸ್ ನ ಬಳಿಕ ಇದೀಗ 'ಬಾಲಾಕೋಟ್ ಏರ್ ಸ್ಟ್ರೈಕ್' ಸಿನಿಮಾ ಸೆಟ್ಟೇರುತ್ತಿದೆ. 40ಕ್ಕು ಅಧಿಕ ಭಾರತೀಯ ವೀರ ಯೋಧರ ಪ್ರಾಣ ತೆಗೆದ ದುರಂತ ಪುಲ್ವಾಮಾ ದಾಳಿಯ ಪ್ರತಿಕಾರವಾಗಿ, ಭಾರತೀಯ ಸೇನೆ ಬಾಲಾಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿ ಉಗ್ರರ ಹುಟ್ಟಡಗಿಸಿತ್ತು.

  ಸಿನಿಪ್ರಿಯರಿಗೆ ದಕ್ಷಿಣದಿಂದ ಬಂತು ಸಿಹಿ ಸುದ್ದಿ | Filmibeat Kannada

  ಬಾಲಾಕೋಟ್ ಏರ್ ಸ್ಟ್ರೈಕ್ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ವಿಶೇಷ ಅಂದರೆ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಭೂಷನ್ ಕುಮಾರ್ ಅವರೊಂದಿಗೆ ಸೇರಿ ಅಭಿಷೇಕ್ ಕಪೂರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆಯೇ ಅಂದರೆ 2019ರಲ್ಲೇ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. ಇದೀಗ ಮತ್ತೆ ಬಾಲಾಕೋಟ್ ಏರ್ ಸ್ಟ್ರೈಕ್ ಸಿನಿಮಾ ಸದ್ದು ಮಾಡುತ್ತಿದೆ. ಕಾರಣ ಸಿನಿಮಾಗೆ ಪ್ರಮುಖ ನಾಯಕ ಫಿಕ್ಸ್ ಆಗಿದ್ದಾರೆ. ಮುಂದೆ ಓದಿ...

  ವಿಜಯ್ ದೇವರಕೊಂಡ ಹೆಸರಿನಲ್ಲಿ ಯುವ ನಟಿಯರಿಗೆ ಮೋಸ: ಎಚ್ಚರಿಕೆ ನೀಡಿದ ನಟ

  ಅಭಿನಂದನ್ ಪಾತ್ರದಲ್ಲಿ ವಿಜಯ್ ದೇವರಕೊಂಡ

  ಅಭಿನಂದನ್ ಪಾತ್ರದಲ್ಲಿ ವಿಜಯ್ ದೇವರಕೊಂಡ

  ಚಿತ್ರದ ಪ್ರಮುಖ ಪಾತ್ರದಲ್ಲಿ ಅಂದರೆ ಭಾರತದ ರಿಯಲ್ ಹೀರೋ ಅಭಿನಂದನ್ ವರ್ಧಮಾನ್ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ವಿಜಿಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಬಗ್ಗೆ ವಿಜಯ್ ದೇವರಕೊಂಡ ಜೊತೆ ಮಾತುಕತೆ ನಡೆಸಿದ್ದಾರಂತೆ. ಈ ಸಿನಿಮಾ ಮಾಡಲು ವಿಜಯ್ ಸಹ ಆಸಕ್ತರಾಗಿದ್ದಾರಂತೆ.

  ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ

  ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ

  ಈ ವರ್ಷದ ಪ್ರಾರಂಭದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಅಷ್ಟರಲ್ಲೇ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ವಿಳಂಬವಾಗಿದೆಯಂತೆ. ಇದೀಗ ನಿರ್ದೇಶಕರು ಮತ್ತೆ ಸಿನಿಮಾ ಕೆಲಸ ಪ್ರಾರಂಭ ಮಾಡುತ್ತಿದ್ದಾರೆ. ಆದರೆ ನಿರ್ದೇಶಕ ಅಭಿಷೇಕ್ ಈಗಾಗಲೇ ಬೇರೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ 'ಬಾಲಾಕೋಟ್' ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

  ವಿಜಯ್ ದೇವರಕೊಂಡಗೆ ಟ್ರೋಲ್ ಮಾಡಿದ ಮಹೇಶ್ ಬಾಬು ಫ್ಯಾನ್ಸ್

  ಸಿನಿಮಾದಲ್ಲಿ ಯಾವೆಲ್ಲ ಘಟನೆಗಳನ್ನು ತೋರಿಸಲಾಗುತ್ತೆ

  ಸಿನಿಮಾದಲ್ಲಿ ಯಾವೆಲ್ಲ ಘಟನೆಗಳನ್ನು ತೋರಿಸಲಾಗುತ್ತೆ

  ಅಂದ್ಹಾಗೆ ಈ ಸಿನಿಮಾದಲ್ಲಿ ಬಾಲಕೋಟ್ ದಾಳಿ, ವಿಂಗ್ ಕಮಾಂಡರ್ ಅಭಿನಂದನ್ ಸೆರೆಯಾದ ಬಗ್ಗೆ, ಪಾಕಿಸ್ತಾನದ ಸೆರೆಯಲ್ಲಿದ್ದ ಸಮಯ ಮತ್ತು ಅಭಿನಂದನ್ ಭಾರತಕ್ಕೆ ವಾಪಸ್ ಆಗುವವರೆಗೂ ಈ ಸಿನಿಮಾದಲ್ಲಿ ಇರಲಿದೆಯಂತೆ.

  'ಫೈಟರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ

  'ಫೈಟರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ

  ವಿಜಯ್ ದೇವರಕೊಂಡ ಸದ್ಯ 'ಫೈಟರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಇರುವ ಸಿನಿಮಾ ಇದಾಗಿದ್ದು, ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಅನೇಕ ಸಿನಿಮಾಗಳು ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೆ ಬಾಲಾಕೋಟ್ ಸಿನಿಮಾ ಮೂಲಕ ವಿಜಯ್ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Tollywood Actor Vijay Devarakonda to play wing Commander Abhinandan Varthaman role in Abhishek Kapoor's next Balakot Air Strike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X