For Quick Alerts
  ALLOW NOTIFICATIONS  
  For Daily Alerts

  ಮೊದಲ ನೋಟದಲ್ಲೇ ಸೋತ 'ತಲೈವಿ': ಕಂಗನಾ ಕಾಲೆಳೆದ ನೆಟ್ಟಿಗರು

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟಿ ಜಯಯಲಿತಾ ಅವರ ಬಯೋಪಿಕ್ ಸಿನಿಮಾ ಬರ್ತಿದೆ ಎಂದಾಗ ಅಭಿಮಾನಿಗಳಲ್ಲಿ, ಚಿತ್ರರಸಿಕರಲ್ಲಿ, ರಾಜಕೀಯ ವಲಯದಲ್ಲಿ ಇದ್ದ ಕುತೂಹಲ ಅಷ್ಟಿಷ್ಟಲ್ಲ.

  ಅದರಲ್ಲೂ ಕಂಗನಾ ರಣಾವತ್ ತಮಿಳುನಾಡಿನ 'ಅಮ್ಮ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದಾಗ ಆ ಥ್ರಿಲ್ ಮತ್ತಷ್ಟು ಹೆಚ್ಚಾಗಿತ್ತು. ಒಳ್ಳೆಯ ನಟಿ, ಈ ಬಯೋಪಿಕ್ ದೊಡ್ಡ ಯಶಸ್ಸು ಕಾಣಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು.

  ಜಯಲಲಿತಾ ಬಯೋಪಿಕ್ನಲ್ಲಿ ನಟಿಸುವಂತೆ ಸ್ಟಾರ್ ನಟನಿಗೆ ಆಫರ್!ಜಯಲಲಿತಾ ಬಯೋಪಿಕ್ನಲ್ಲಿ ನಟಿಸುವಂತೆ ಸ್ಟಾರ್ ನಟನಿಗೆ ಆಫರ್!

  ಆದ್ರೀಗ, ತಲೈವಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ಟೀಸರ್ ನೋಡಿದ್ಮೇಲೆ ಈ ಸಿನಿಮಾ ಬಗ್ಗೆ ಇದ್ದ ಕುತೂಹಲ ಎಲ್ಲವೂ ಒಂದೇ ಸಲ ಹುಸಿಯಾಯಿತು. ಇದೊಂದು ಕೆಟ್ಟ ಸಿನಿಮಾ ಆಗಬಹುದು ಎಂಬ ಅಭಿಪ್ರಾಯ ಹುಟ್ಟಿಕೊಂಡಿದೆ. ಅಷ್ಟಕ್ಕೂ, ಏನಾಯಿತು? ಮುಂದೆ ಓದಿ...

  ಕಂಗನಾ ಲುಕ್ ಚೆನ್ನಾಗಿಲ್ಲ

  ಕಂಗನಾ ಲುಕ್ ಚೆನ್ನಾಗಿಲ್ಲ

  ತಲೈವಿ ಫಸ್ಟ್ ಲುಕ್ ಟೀಸರ್ ನಲ್ಲಿ ಎರಡು ಭಾಗ ನೋಡಬಹುದು. ಮೊದಲನೇಯದು ಜಯಲಲಿತಾ ಅವರ ಆರಂಭದ ದಿನಗಳು. ಇದರಲ್ಲಿ ಕಂಗನಾ ಅವರು ಇಷ್ಟ ಆಗ್ತಾರೆ. ರೆಟ್ರೋ ಸ್ಟೈಲ್ ನಲ್ಲಿ ಗಮನ ಸೆಳೆದಿದ್ದಾರೆ. ಆದರೆ, ಎರಡನೇ ಭಾಗದಲ್ಲಿ ಕಂಗನಾ ಅವರ ಲುಕ್ ಭಾರಿ ನಿರಾಸೆ ಮೂಡಿಸಿದೆ. ಯಾವುದೇ ಕೋನದಲ್ಲೂ ನೋಡಿದ್ರೂ ಜಯಲಲಿತಾ ಅವರನ್ನ ಹೋಲುತ್ತಿಲ್ಲ. ಒಳ್ಳೆಯ ಕಾರ್ಟೂನ್ ನೋಡಿದಂತಿದೆ.

  ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಟನೆ!ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಟನೆ!

  ಕಂಗನಾ ಬದಲು ಕಮಲ್ ಮಾಡಬಹುದಿತ್ತು

  ಕಂಗನಾ ಬದಲು ಕಮಲ್ ಮಾಡಬಹುದಿತ್ತು

  ಕಂಗನಾ ಅವರ ಜಯಲಲಿತಾ ಅವರ ಲುಕ್ ನೋಡಿದ ನೆಟ್ಟಿಗರು, ಈ ಪಾತ್ರವನ್ನ ಕಮಲ್ ಹಾಸನ್ ಅವರಿಗೆ ಕೊಟ್ಟಿದ್ದರೇ ಅವರೇ ಸಖತ್ ಆಗಿ ಮಾಡ್ತಿದ್ದರು ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಾರಣ, ಜಯಲಲಿತಾ ಪಾತ್ರಕ್ಕಾಗಿ ಕಂಗನಾ ಅವರಿಗೆ ಮಾಡಲಾಗಿರುವ ಮೇಕಪ್. ಮೇಕಪ್ ಬಹಳ ಕಳಪೆಯಾಗಿದ್ದು, ಕಂಗನಾ ಅವರು ರೋಬೋ ಇದ್ದಂತೆ ಕಾಣುತ್ತಿದ್ದಾರೆ.

  ಭರವಸೆ ಕಳೆದುಕೊಂಡ ಫ್ಯಾನ್ಸ್

  ಭರವಸೆ ಕಳೆದುಕೊಂಡ ಫ್ಯಾನ್ಸ್

  ತಲೈವಿ ಚಿತ್ರದ ಫಸ್ಟ್ ಲುಕ್ ನೋಡಿದ ಬಳಿಕ, ಈ ಸಿನಿಮಾ ಮೇಲೆ ಪ್ರೇಕ್ಷಕರಿಗಿದ್ದ ಭರವಸೆ ಕಳೆದುಕೊಂಡಿದ್ದಾರೆ. ಕಂಗನಾ ಅಂತಹ ನಟಿಯೊಬ್ಬರನ್ನು ಆಯ್ಕೆ ಮಾಡಿಕೊಂಡು, ಇಷ್ಟು ಕಳಪೆ ಮಟ್ಟದ ಮೇಕಿಂಗ್ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

  ಜಯಲಲಿತಾ ಪಾತ್ರದಲ್ಲಿ ಕಂಗನಾ, ಎಂಜಿಆರ್ ಯಾರು ಗೊತ್ತಾ?ಜಯಲಲಿತಾ ಪಾತ್ರದಲ್ಲಿ ಕಂಗನಾ, ಎಂಜಿಆರ್ ಯಾರು ಗೊತ್ತಾ?

  ಆನಿಮೇಷನ್ ಮಾಡಬಹುದಿತ್ತು

  ಆನಿಮೇಷನ್ ಮಾಡಬಹುದಿತ್ತು

  ಹಾಲಿವುಡ್ ತಂತ್ರಜ್ಞರು ಕಂಗನಾ ಅವರಿಗೆ ಮೇಕಪ್ ಮಾಡಿದ್ದಾರೆ ಎನ್ನಲಾಗಿದೆ. ಕಂಗನಾ ಅವರನ್ನ ಕರೆದುಕೊಂಡು ಬಂದು ಅಷ್ಟರ ಮಟ್ಟಿಗೆ ಮೇಕಪ್ ಮಾಡುವ ಬದಲು, ಗ್ರಾಫಿಕ್ಸ್ ಅಥವಾ ಆನಿಮೇಷನ್ ಮೂಲಕ ಈ ಪಾತ್ರವನ್ನ ಮಾಡಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಜನರ ಪ್ರತಿಕ್ರಿಯೆ ಹೇಗೆ ಸ್ವೀಕರಿಸ್ತಾರೆ?

  ಜನರ ಪ್ರತಿಕ್ರಿಯೆ ಹೇಗೆ ಸ್ವೀಕರಿಸ್ತಾರೆ?

  ತಲೈವಿ ಚಿತ್ರದ ಫಸ್ಟ್ ಲುಕ್ ಗೆ ನೆಗಿಟೀವ್ ಪ್ರತಿಕ್ರಿಯೆ ಹೆಚ್ಚು ವ್ಯಕ್ತವಾಗಿದ್ದು, ಇದನ್ನ ಚಿತ್ರತಂಡ ಆಗಲಿ ಅಥವಾ ಕಂಗನಾ ಆಗಲಿ ಯಾವ ರೀತಿ ಚಾಲೆಂಜ್ ಆಗಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಇನ್ನೊಂದೆಡೆ ತಲೈವಿ ಮೊದಲ ಹೆಜ್ಜೆಯಲ್ಲಿ ಸೋತಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿತ್ಯಾ ಮೆನನ್ ಮಾಡುತ್ತಿರುವ ಜಯಲಲಿತಾ ಬಯೋಪಿಕ್ ಚಿತ್ರಕ್ಕೆ ಪ್ಲಸ್ ಆಗಬಹುದು ಎನ್ನಲಾಗಿದೆ.

  English summary
  Bollywood actress Kangna Ranaut starrer Thalaivi movie first look released. teaser getting very bad comment from netizens.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X