For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ರಿಲೀಸ್ ದಿನಾಂಕ ಘೋಷಿಸಿದ ಕಂಗನಾ ರಣಾವತ್ 'ತಲೈವಿ'

  |

  ಕಳೆದ ಎರಡು ವರ್ಷದಿಂದ ಭಾರತೀಯ ಸಿನಿ ಪ್ರಪಂಚದಲ್ಲಿ ಭಾರಿ ಕುತೂಹಲ ಮೂಡಿಸಿರುವ ತಲೈವಿ ಸಿನಿಮಾ ಕೊನೆಗೂ ಬಿಡುಗಡೆ ದಿನಾಂಕ ಘೋಷಿಸಿದೆ. ಕಂಗನಾ ರಣಾವತ್ ಅಭಿನಯದ ಈ ಚಿತ್ರ ಎಲ್ಲ ಅಂದುಕೊಂಡಂತೆ ಆಗಿದ್ದರೆ 2020ರ ಜೂನ್ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಅನಿರೀಕ್ಷಿತವಾಗಿ ಎದುರಾದ ಕೊರೊನಾ ವೈರಸ್ ಸಮಸ್ಯೆಯಿಂದ ಎಲ್ಲ ಯೋಜನೆಯೂ ತಲೆಕೆಳಗಾದವು.

  ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿರುವ ತಲೈವಿ ಈಗ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹುಟ್ಟುಹಬ್ಬದ ವಿಶೇಷವಾಗಿ ತಲೈವಿ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದೆ. ಅಷ್ಟಕ್ಕೂ, ತಲೈವಿ ಎಂಟ್ರಿ ಯಾವಾಗ? ಮುಂದೆ ಓದಿ...

  ಏಪ್ರಿಲ್ 23ಕ್ಕೆ ತಲೈವಿ ಎಂಟ್ರಿ

  ಏಪ್ರಿಲ್ 23ಕ್ಕೆ ತಲೈವಿ ಎಂಟ್ರಿ

  ಜಯಲಲಿತಾ ಅವರ ಹುಟ್ಟುಹಬ್ಬದ ವಿಶೇಷವಾಗಿ ತಲೈವಿ ರಿಲೀಸ್ ದಿನಾಂಕ ಪ್ರಕಟಿಸಿದ್ದು, ಏಪ್ರಿಲ್ 23, 2021ಕ್ಕೆ ವರ್ಲ್ಡ್ ವೈಡ್ ಸಿನಿಮಾ ಬಿಡುಗಡೆಯಾಗಲಿದೆ. ಖುದ್ದು ಈ ವಿಚಾರವನ್ನು ನಟಿ ಕಂಗನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಫೆಬ್ರವರಿ 24 ರಂದು ಒಬ್ಬರ ಹುಟ್ಟುಹಬ್ಬ, ಇನ್ನೊಬ್ಬರ ಪುಣ್ಯ ಸ್ಮರಣೆಫೆಬ್ರವರಿ 24 ರಂದು ಒಬ್ಬರ ಹುಟ್ಟುಹಬ್ಬ, ಇನ್ನೊಬ್ಬರ ಪುಣ್ಯ ಸ್ಮರಣೆ

  ಜಯಲಲಿತಾ ಬಯೋಪಿಕ್

  ಜಯಲಲಿತಾ ಬಯೋಪಿಕ್

  ದೇಶಕಂಡ ದಿಟ್ಟ ಮಹಿಳಾ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಬಯೋಪಿಕ್ ಇದಾಗಿದೆ. ಜಯಲಲಿತಾ ಅವರ ಬಾಲ್ಯ, ಸಿನಿಮಾರಂಗ ಹಾಗೂ ರಾಜಕೀಯ ಹೆಜ್ಜೆಗುರುತುಗಳನ್ನು ತಲೈವಿ ಸಿನಿಮಾ ಪ್ರತಿನಿಧಿಸಿದೆ. ಜಯಲಲಿತಾ ಅವರ ಬದುಕಿನ ಪಯಣವನ್ನು ತೆರೆಮೇಲೆ ತರಲಾಗಿದ್ದು, ಕಂಗನಾ ರೂಪದಲ್ಲಿ ತಮಿಳುನಾಡು ಅಮ್ಮನ ಕಥೆ ನೋಡುವ ಅವಕಾಶ ಸಿಕ್ಕಿದೆ.

  ತಮಿಳುನಾಡು ಭವಿಷ್ಯ ಬದಲಿಸಿದ ತಲೈವಿ

  ತಮಿಳುನಾಡು ಭವಿಷ್ಯ ಬದಲಿಸಿದ ತಲೈವಿ

  ''ಚಿತ್ರರಂಗ ಪ್ರವೇಶಿಸಿ ಭಾರತೀಯ ಸಿನಿಮಾದ ರೂಪ ಬದಲಾಯಿಸಿದರು. ರಾಜಕೀಯ ಪ್ರವೇಶಿಸಿ ತಮಿಳುನಾಡಿನ ಭವಿಷ್ಯವನ್ನು ಬದಲಾಯಿಸಿದರು. ನಂತರ ತನ್ನದೇ ಆದ ಹಣೆಬರಹವನ್ನು ಬರೆದು ಇತಿಹಾಸವನ್ನು ಸೃಷ್ಟಿಸಿದರು. ಲಕ್ಷಾಂತರ ಜನರ ಭವಿಷ್ಯವನ್ನು ಬದಲಾಯಿಸುವ ಮೂಲಕ ಅವರು ‘ತಲೈವಿ' ಆದರು'' ಎಂದು ಮೋಷನ್ ಪೋಸ್ಟರ್‌ನಲ್ಲಿ ಬಿಂಬಿಸಲಾಗಿದೆ.

  ಎಂಜಿಆರ್ ಪುಣ್ಯ ಸ್ಮರಣೆ: ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆಎಂಜಿಆರ್ ಪುಣ್ಯ ಸ್ಮರಣೆ: ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆ

  ಬಹುಭಾಷೆಯಲ್ಲಿ ತಲೈವಿ ರಿಲೀಸ್

  ಬಹುಭಾಷೆಯಲ್ಲಿ ತಲೈವಿ ರಿಲೀಸ್

  ವಿಷ್ಣು ವರ್ಧನ್ ನಿರ್ಮಾಣದ ತಲೈವಿ ಸಿನಿಮಾ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕೆವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸಿದ್ದಾರೆ. ಎಎಲ್ ವಿಜಯ್ ಈ ಚಿತ್ರ ನಿರ್ದೇಶಿಸಿದ್ದಾರೆ. ಕಂಗನಾ ಜೊತೆಗೆ ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ, ಎಂ ಕರುಣನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್ ಬಣ್ಣ ಹಚ್ಚಿದ್ದಾರೆ. ಶೋಭನ್ ಬಾಬು ಪಾತ್ರದಲ್ಲಿ ಜಿಷ್ಣು ಸೇನಾಗುಪ್ತಾ ಕಾಣಿಸಿಕೊಂಡಿದ್ದಾರೆ.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada
  English summary
  On Jayalalitha Birthday, Kangana ranaut starrer Thalaivi movie release date announced. In Cinemas on 23rd April 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X