For Quick Alerts
  ALLOW NOTIFICATIONS  
  For Daily Alerts

  ಫಿಲಂ ಫೇರ್ ಪ್ರಶಸ್ತಿ: 17 ವಿಭಾಗದಲ್ಲಿ ನಾಮಿನೇಟ್ ಆಗಿರುವ ತಾಪ್ಸಿ ಸಿನಿಮಾ

  |

  ಬಾಲಿವುಡ್ ನಟಿ ತಾಪ್ಸಿ ಪನ್ನು ನಟನೆಯಲ್ಲಿ ಮೂಡಿ ಬಂದಿದ್ದ ತಪ್ಪಡ್ ಸಿನಿಮಾ ಕಳೆದ ವರ್ಷ ಇಂಡಸ್ಟ್ರಿಯ ಟಾಕ್ ಆಫ್ ದಿ ಟೌನ್ ಆಗಿತ್ತು. ಅನುಭವ್ ಸಿನ್ಹಾ ಈ ಚಿತ್ರ ನಿರ್ದೇಶಿಸಿದ್ದರು. ವಿಮರ್ಶಾತ್ಮಕವಾಗಿ ತಪ್ಪಡ್ ಚಿತ್ರ ದೊಡ್ಡ ಗೆಲುವು ಕಂಡಿತ್ತು.

  2020ರ ಫೆಬ್ರವರಿ ತಿಂಗಳಲ್ಲಿ ತೆರೆಕಂಡಿದ್ದ ತಪ್ಪಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಬಿಸಿನೆಸ್ ಮಾಡಿತ್ತು. ಲಾಕ್‌ಡೌನ್‌ ಘೋಷಣೆಗೂ ಮುನ್ನ ಚಿತ್ರಮಂದಿರಕ್ಕೆ ಬಂದಿದ್ದ ಈ ಚಿತ್ರ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿತ್ತು.

  ಕೋವಿಡ್-19 ಲಸಿಕೆ ಪಡೆದ ಬೆನ್ನಲ್ಲೇ ನಟ ಪರೇಶ್ ರಾವಲ್ ಗೆ ಕೊರೊನಾ ಪಾಸಿಟಿವ್ಕೋವಿಡ್-19 ಲಸಿಕೆ ಪಡೆದ ಬೆನ್ನಲ್ಲೇ ನಟ ಪರೇಶ್ ರಾವಲ್ ಗೆ ಕೊರೊನಾ ಪಾಸಿಟಿವ್

  ಇದೀಗ, ಭಾರತದ ಅತ್ಯುನ್ನತ ಅವಾರ್ಡ್‌ಗಳಲ್ಲಿ ಒಂದಾಗಿರುವ ಫಿಲಂ ಫೇರ್ ಪ್ರಶಸ್ತಿಯ 17 ವಿಭಾಗದಲ್ಲಿ ತಪ್ಪಡ್ ಸಿನಿಮಾ ನಾಮನಿರ್ದೇಶನವಾಗಿದೆ. ಒಂದು ಪ್ರಶಸ್ತಿ ಸಮಾರಂಭದಲ್ಲಿ 17 ವಿಭಾಗದಲ್ಲಿ ನಾಮಿನೇಟ್ ಆಗಿರುವುದು ಬಹಳ ವಿಶೇಷ ಮತ್ತು ತಪ್ಪಡ್ ಚಿತ್ರದ ಮತ್ತೊಂದು ಸಕ್ಸಸ್ ಆಗಿದೆ.

  - ಅತ್ಯುತ್ತಮ ಚಿತ್ರ

  - ಅತ್ಯುತ್ತಮ ನಿರ್ದೇಶಕ -ಅನುಭವ್ ಸಿನ್ಹಾ

  - ಅತ್ಯುತ್ತಮ ನಟಿ - ತಾಪ್ಸಿ ಪನ್ನು

  - ಅತ್ಯುತ್ತಮ ಪೋಷಕ ನಟ - ಕುಮುದ್ ಮಿಶ್ರ

  - ಅತ್ಯುತ್ತಮ ಪೋಷಕ ನಟಿ - ತನ್ವಿ ಅಜ್ಮಿ

  - ಅತ್ಯುತ್ತಮ ಸಾಹಿತ್ಯ - ಶಕೀಲ್ ಅಜ್ಮಿ - ಏಕ್ ತುಕ್ಡಾ ಧೂಪ್,

  - ಅತ್ಯುತ್ತಮ ಹಿನ್ನೆಲೆ ಗಾಯಕ - ರಾಘವ್ ಚೈತನ್ಯ

  - ವಿಮರ್ಶಾತ್ಮಕವಾಗಿ ಅತ್ಯುತ್ತಮ ಸಿನಿಮಾ

  - ವಿಮರ್ಶಾತ್ಮಕವಾಗಿ ಅತ್ಯುತ್ತಮ ನಟಿ - ತಾಪ್ಸಿ ಪನ್ನು

  - ಅತ್ಯುತ್ತಮ ಸಂಕಲನ - ಯಶಾ ಪುಷ್ಪಾ ರಾಮ್‌ಚಂದಾನಿ

  - ಅತ್ಯುತ್ತಮ ಧ್ವನಿ ವಿನ್ಯಾಸ - ಕಾಮೋಡ್ ಖರಡೆ

  - ಅತ್ಯುತ್ತಮ ಛಾಯಾಗ್ರಹಣ - ಸೌಮಿಕ್ ಸರ್ಮಿಲಾ ಮುಖರ್ಜಿ

  - ಅತ್ಯುತ್ತಮ ಹಿನ್ನೆಲೆ ಸಂಗೀತ - ಮಂಗೇಶ್ ಉರ್ಮಿಳಾ ಧಕ್ಡೆ

  - ಅತ್ಯುತ್ತಮ ಕಥೆ - ಅನುಭವ್ ಸಿನ್ಹಾ ಮತ್ತು ಮೃನ್ಮಮೈ ಲಗೂ ವೈಕುಲ್

  - ಅತ್ಯುತ್ತಮ ಚಿತ್ರಕಥೆ - ಅನುಭವ್ ಸಿನ್ಹಾ ಮತ್ತು ಮೃನ್ಮಮೈ ಲಗೂ ವೈಕುಲ್

  Kangana Ranaut ಗೂ ಮುಂಚೆ ಹೆಚ್ಚು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯರು ಯಾರ್ಯಾರು? | Filmibeat Kannada

  ಅನುಭವ್ ಸಿನ್ಹಾ ನಿರ್ದೇಶಿಸಿದ್ದ ತಪ್ಪಡ್ ಸಿನಿಮಾ ಫೆಬ್ರವರಿ 28, 2020 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. 24 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ 45 ಕೋಟಿ ಬಿಸಿನೆಸ್ ಮಾಡಿತ್ತು.

  English summary
  Taapse Pannu starrer Thappad Movie Bags 17 Major Nominations at Filmfare Awards 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X