ಮದುವೆಯಾದ 12 ವರ್ಷದ ನಂತರ, ಯಶ್ 'ರಾಮಾಯಣ'ದ ಲಕ್ಷ್ಮಣನಿಗೆ ತಂದೆಯಾಗುವ ಭಾಗ್ಯ-ಪತ್ನಿ ಕೆಂಡಾಮಂಡಲ
ಚಿತ್ರರಂಗದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ. ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ.
ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಾರೆ. ಮತ್ತೂ ಕೆಲವರು ತಮ್ಮ ಕುರಿತ ಈ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕುರಿತು ಸುಳ್ಳು ಸುದ್ದಿ ಹಬ್ಬಿಸುವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಉದಾಹರಣೆಗೆ ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ಅವರನ್ನೇ ತೆಗೆದುಕೊಳ್ಳಿ.

ಹೌದು, ರವಿ ದುಬೆ ಮತ್ತು ಸರ್ಗುನ್ ಮೆಹ್ತಾ .. ಬಾಲಿವುಡ್ ಮತ್ತು ಪಾಲಿವುಡ್ (ಪಂಜಾಬ್) ನ ಖ್ಯಾತ ತಾರೆಯರು. 2009ರಲ್ಲಿ ಪ್ರಸಾರವಾದ ''12/24 ಕರೋಲ್ ಬಾಗ್'' ಧಾರಾವಾಹಿಯ ಮೂಲಕ ವೃತ್ತಿ ಬದುಕು ಶುರು ಮಾಡಿದ ಸರ್ಗುನ್ ಮೆಹ್ತಾ, ತಮ್ಮ ಮೊದಲ ಧಾರಾವಾಹಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರವಿ ದುಬೆ ಜೊತೆ ತೆರೆ ಹಂಚಿಕೊಂಡಿದ್ದರು. ರವಿ ದುಬೆಗೆ ನಾಯಕಿಯಾಗಿದ್ದರು. ಇಬ್ಬರ ಪ್ರೇಮಕಥೆ ಆರಂಭವಾಗಿದ್ದು ಇಲ್ಲಿಂದಲೇ.
ಆ ನಂತರ ಸರ್ಗುನ್ ಮೆಹ್ತಾ, ''ಫುಲ್ವಾ''.. ''ಬಾಲಿಕಾ ವಧು''.. ಧಾರಾವಾಹಿಯಲ್ಲಿ ಕಾಣಿಸಿಕೊಂಡರೆ ರವಿ ದುಬೆ ''ಸಾಸ್ ಬಿನಾ ಸಸುರಾಲ್'' ಮತ್ತು ''ಜಮಾಯಿ ರಾಜಾ'' ಧಾರಾವಾಹಿ ಮೂಲಕ ಜನ ಮನ ಗೆದ್ದರು. ಇದರ ನಡುವೆ ''ಅಂಗ್ರೇಜ್' .. ''ಕಿಸ್ಮತ್''.. ''ಲವ್ ಪಂಜಾಬ್''.. ಮತ್ತು ''ಸೌಂಕನ್ ಸೌಂಕ್ನೆ'' ಚಿತ್ರಗಳಲ್ಲಿ ನಾಯಕಿ ಪಾತ್ರವನ್ನು ಸರ್ಗುನ್ ನಿರ್ವಹಿಸಿದ್ದರೆ, ''ಮತ್ಸ್ಯ ಕಾಂಡ್'' ಎಂಬ ವೆಬ್ ಸರಣಿಯಲ್ಲಿ ರವಿ ದುಬೆ ಕಾಣಿಸಿಕೊಂಡರು. 2009ರ ಮೊದಲ ಭೇಟಿ ಮತ್ತು ಮೊದಲ ನೋಟದಲ್ಲಿಯೇ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಇಬ್ಬರು ಎರಡ್ಮೂರು ವರ್ಷ ಕದ್ದು ಮುಚ್ಚಿ ಪ್ರಣಯ ಗೀತೆ ಹಾಡಿದರು. 2013ರಲ್ಲಿ ಮದುವೆಯ ಬಂಧನಕ್ಕೊಳಗಾದರು.
ಇಂಥಾ ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ಅವರ ದಾಂಪತ್ಯಕ್ಕೆ ಈಗ ಹನ್ನೆರಡು ವರ್ಷ. ಈ ಹನ್ನೆರಡು ವರ್ಷದಲ್ಲಿ ಎದುರಾದ ಸವಾಲುಗಳನ್ನು ಜೊತೆಯಾಗಿ ಎದುರಿಸಿದ ಇಬ್ಬರು ನಿರ್ಮಾಪಕರಾಗಿ ಕೂಡ ಸದ್ಯ ಬಡ್ತಿ ಪಡೆದಿದ್ದಾರೆ. ಆದರೆ, ಪೋಷಕರಾಗಿ ಇಬ್ಬರು ಇನ್ನೂ ಬಡ್ತಿ ಪಡೆದಿಲ್ಲ. ಇದು ಇವರ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಚಿಂತೆಯ ವಿಷಯವಾಗಿದೆ. ಹೀಗಾಗಿಯೇ ರವಿ ದುಬೆ ಮತ್ತು ಸರ್ಗುಣ್ ಗುಪ್ತಾ ಹೋದಲ್ಲಿ.. ಬಂದಲ್ಲಿ.. ಹಲವರು ''ಗುಡ್ ನ್ಯೂಸ್'' ಯಾವಾಗ ಎಂಬ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತಲೇ ಇರುತ್ತಾರೆ.
ಆದರೆ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೆಲವರು ಹನ್ನೆರಡು ವರ್ಷದ ನಂತರ ರವಿ ದುಬೆ ಮತ್ತು ಸರ್ಗುಣ್ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಕುರಿತ ಹಲವು ಪೋಸ್ಟ್‌ಗಳು ಇಟ್ಟಾಡುತ್ತಿವೆ.

ಸದ್ಯ ತಮ್ಮ ಬಗ್ಗೆ ಕೇಳಿ ಬರುತ್ತಿರುವ ಈ ಸುದ್ದಿಯನ್ನು ಕೇಳಿ ಸರ್ಗುನ್ ಮೆಹ್ತಾ ಮತ್ತು ರವಿ ದುಬೆ ಕೆರಳಿ ಕೆಂಡವಾಗಿದ್ಧಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸರ್ಗುನ್ ಮೆಹ್ತಾ ನಾನು ಗರ್ಭಿಣಿಯಾದ ವಿಚಾರ ನನಗೆ ಮತ್ತು ನನ್ನ ಗಂಡ ರವಿಗೆ ಗೊತ್ತಿಲ್ಲ. ಆದರೆ, ಇವರೆಲ್ಲರಿಗೆ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾನು ಗರ್ಭಿಣಿ ಎಂಬ ಸುದ್ದಿಯನ್ನು ನನಗಿಂತ ಮೊದಲೇ ಎಲ್ಲರಿಗೂ ಹೇಳುತ್ತಾ ಬರುತ್ತಿದ್ದಾರೆ ಎಂದು ಹೇಳಿರುವ ಸರ್ಗುನ್ ಮೆಹ್ತಾ ಆಧಾರ ರಹಿತ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಸುದ್ದಿಯನ್ನು ಬರೆಯುವ ಮೊದಲು ಕೊನೆ ಪಕ್ಷ ಆ ಸುದ್ದಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಇಲ್ಲವಾದಲ್ಲಿ ನಮ್ಮನ್ನು ಸಂಪರ್ಕಿಸಿ ಅದಕ್ಕೆ ಹೆಚ್ಚಿನ ಸಮಯ ಹಿಡಿಯುವುದಿಲ್ಲ ಎಂದಿದ್ದಾರೆ.
ಇನ್ನೂ ಮಗು ವಿಚಾರಕ್ಕೆ ಸರ್ಗುನ್ ಕೆರಳಿ ಕೆಂಡ ಕಾರಿದ್ದು ಇದು ಮೊದಲೇನಲ್ಲ. ಈ ಹಿಂದೆ ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ್ದ ಸಂದರ್ಶನದಲ್ಲಿ ಕೂಡ ಈ ಕುರಿತು ಮಾತನಾಡಿದ್ದ ಸರ್ಗುನ್ ಮದುವೆಯಾದ ಜೋಡಿಗಳಿಂದ ನೀವು ಕೇವಲ ಮಗುವನ್ನು ಮಾತ್ರ ನಿರೀಕ್ಷೆ ಮಾಡುತ್ತಿರಾ ಎಂದರೆ ಮದುವೆಯಂತಹ ಪವಿತ್ರ ಬಂಧನಕ್ಕೆ ಅದು ನೀವು ಮಾಡುತ್ತಿರುವ ಅವಮಾನ ಎಂದು ಹೇಳಿದ್ದರು.
ಗರ್ಭಧಾರಣೆ ವ್ಯೆಯಕ್ತಿಕ ಆಯ್ಕೆ ಮತ್ತು ಆದ್ಯತೆ ಎಂದು ಹೇಳಿದ್ದ ಸರ್ಗುನ್ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನ ಆದ್ಯತೆ ಮತ್ತು ಗುರುಗಳಿರುತ್ತಾವೆ, ಕೆಲವರು 25ರ ಹರೆಯದಲ್ಲಿ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಹೆಜ್ಜೆ ಇಡ್ತಾರೆ, ಇನ್ನೂ ಕೆಲವರು 40ನೇ ವರ್ಷದಲ್ಲಿ ಆಲೋಚನೆ ಮಾಡುತ್ತಾರೆ ಎಂದಿದ್ದರು. ಮದುವೆಯಾಗುವುದು ಕೇವಲ ಮಗು ಮಾಡಿಕೊಳ್ಳಲು ಮಾತ್ರ ಅಲ್ಲ ಎಂದು ಹೇಳಿದ್ದರು.
ಅಂದ್ಹಾಗೇ ಯಶ್ ಸಹ ನಿರ್ಮಾಣದಲ್ಲಿ ''ರಾಮಾಯಣ'' ಚಿತ್ರ ತೆರೆಗೆ ಬರುತ್ತಿರುವ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇರಬೇಕು. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾವಣನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ಮಾಡಿರುವುದು ಬೇರೆ ಯಾರು ಅಲ್ಲ ಬದಲಿಗೆ ಇದೇ ರವಿ ದುಬೆ ಎನ್ನುವುದು ವಿಶೇಷ.



Click it and Unblock the Notifications











