ಈ ಖ್ಯಾತ ನಟನ ಮನೆಯ ಸೊಸೆಯಾಗುತ್ತಾರಾ ಪೂಜಾ ಹೆಗ್ಡೆ? ಕರಾವಳಿ ಬೆಡಗಿಯ ಹೃದಯ ಗೆದ್ದ ಹುಡುಗ ಯಾರು?

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ಒಂದು ಕಾಲದಲ್ಲಿ ಒಂದಾದ ಮೇಲೊಂದು ಗೆಲುವನ್ನು ಕಂಡು ಮೆರೆದವರು ಆ ನಂತರ ಇಲ್ಲಿ ಹೇಳ ಹೆಸರಿಲ್ಲದಂತೆ ಕಾಣೆಯಾಗಿದ್ದಾರೆ. ನಾಯಕ ಇರಲಿ- ನಾಯಕಿ ಇರಲಿ.. ಅಪ್ಪಿ ತಪ್ಪಿ, ಆಯಾ ತಪ್ಪಿ.. ಇಲ್ಲಿ ಒಮ್ಮೆ ಸೋಲಿನ ಯಾರಾದರೂ ಸೋಲಿನ ಕಮರಿಗೆ ಬಿದ್ದರೆ ಚಿತ್ರರಂಗದಲ್ಲಿ ನೋಡುವ ದೃಷ್ಟಿಕೋನವೇ ಬದಲಾಗುತ್ತೆ.

ಇನ್ನೂ ಸೋಲು ಬೆನ್ನೇರಿದಾಗ ಹಲವರಿಗೆ ತಮ್ಮ ಮುಂಬರುವ ಜೀವನದ ಚಿಂತೆ ಕೂಡ ಶುರುವಾಗುತ್ತೆ. ಅಭದ್ರತೆ ಕಾಡುತ್ತೆ. ಅದರಲ್ಲಿಯೂ ನಾಯಕಿಯಯರ ಮನದಲ್ಲಿ ದುಗುಡ-ದುಮ್ಮಾನ ತುಸು ಹೆಚ್ಚೇ ಮನೆ ಮಾಡಿರುತ್ತೆ. ಹೀಗಾಗಿಯೇ ನೇಪಥ್ಯಕ್ಕೆ ಸರಿಯುವ ಮುನ್ನ ಹಲವರು ಇಲ್ಲಿ ಗ್ರಹಸ್ಥಾಶ್ರಮಕ್ಕೆ ಕಾಲಿಡಲು ಮುಂದಾಗುತ್ತಾರೆ. ಈ ಸಾಲಿನಲ್ಲಿ ಪೂಜಾ ಹೆಗ್ಡೆ ಸದ್ಯ ಇದ್ದಾರೆ ಅನ್ನೋದೇ ಈ ಕ್ಷಣದ ಶಾಕಿಂಗ್ ನ್ಯೂಸ್.

The 2020 Denial Ends Pooja Hegde and Rohan Mehra Go Public as Newest Pair

ಹೌದು, ಪೂಜಾ ಹೆಗ್ಡೆ.. ಹೆಚ್ಚೇನ್ ಇಲ್ಲ ಹನ್ನೆರಡು- ಹದಿಮೂರು ವರ್ಷದ ಹಿಂದೆ ಚಿನ್ನದಂತಹ ಬೇಡಿಕೆಯನ್ನ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು. ನಿಜಾ.. ಪೂಜಾ ಅಭಿನಯದ ''ಹೌಸ್ ಫುಲ್ 4''.. ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಸಿನಿಮಾನೇ.

ಆದರೆ .. ಗೆಲುವಲ್ಲಿ ಪೂಜಾಗೆ ಕ್ರೆಡಿಟ್ ಸಿಗಲಿಲ್ಲ. ಉತ್ತರದ ಸಿನಿರಸಿಕರು ಇವರನ್ನ ಹೃದಯದಲ್ಲಿಟ್ಟು ಪೂಜೆ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಂತರ ಪೂಜಾ ಅಭಿನಯದ ''ಸರ್ಕಸ್'' ಮತ್ತು ''ಕಿಸಿ ಕಾ ಭಾಯಿ ಕಿಸಿ ಕಾ ಜಾನ್'' ಸಿನಿಮಾ ಮಕಾಡೆ ಮಲಗಿಕೊಂಡವು.

ಇನ್ನೂ .. ''ರಾಧೆ ಶ್ಯಾಮ್'' .. ''ಬೀಸ್ಟ್'' ಮತ್ತು ''ಆಚಾರ್ಯ'' .. ಪೂಜಾ ಅವರ ಖಾತೆಗೆ ಮತ್ತು ಖ್ಯಾತಿಗೆ ಎರಡಕ್ಕೂ ಕತ್ತರಿಯನ್ನ ಹಾಕಿದವು. ಇದಕ್ಕೆ ಸಾಕ್ಷಿ ಅನ್ನುವಂತೆ.. ಒಂದ್ಕಾಲದಲ್ಲಿ ಇವರದ್ದು ಗೋಲ್ಡನ್ ಲೆಗ್ ಅನ್ನುತ್ತಿದ್ದ ಜನ ಐರನ್ ಲೆಗ್ ಅನ್ನಲು ಶುರು ಮಾಡಿದರು. ನಾಲ್ಕು ಕೋಟಿಯನ್ನ ಕೊಟ್ಟು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು, ಒಂದು ಕೋಟಿ ಕೊಡಲು ಕೂಡ ಯೋಚನೆ ಮಾಡಲು ಆರಂಭ ಮಾಡಿದರು. ಇದರ ನಡುವೆ ಪೂಜಾ ಹೆಗ್ಡೆ ಸ್ಥಾನವನ್ನ ಬೇರೆ ನಾಯಕಿಯರು ಆಕ್ರಮಿಸಿಕೊಂಡರು. ಪೂಜಾ ಹೆಗ್ಡೆ ಐಟಂ ಹಾಡುಗಳಿಗಷ್ಟೇ ಸೀಮಿತರಾದರು. ಉದಾಹರಣೆಗೆ ''ಕೂಲಿ''ಯ ಮೋನಿಕಾ.

ಸದ್ಯ ಪೂಜಾ ಹೆಗ್ಡೆ ಅಭಿನಯದ ಹಿಂದಿ ಚಿತ್ರ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಬಿಡುಗಡೆಯಾಗಬೇಕಿದೆ. ಆದರೆ ಈ ಚಿತ್ರದ ಮೇಲೆ ಕೂಡ ಹೇಳಿಕೊಳ್ಳುವಂತಹ ನಿರೀಕ್ಷೆಗಳಿಲ್ಲ. ಈ ಎಲ್ಲ ಕಾರಣದಿಂದ ಪೂಜಾ ಹೆಗ್ಡೆ ಕೆರಿಯರ್ ಖತಂ ಎಂದೇ ಹಲವರು ಅಂದುಕೊಂಡಿದ್ದಾರೆ. ಹೀಗಿರುವಾಗ ಇದೀಗ ಪೂಜಾ ಹೆಗ್ಡೆ ಮದುವೆ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.

The 2020 Denial Ends Pooja Hegde and Rohan Mehra Go Public as Newest Pair

ವಿಶೇ‍ಷ ಅಂದರೆ ಆರು ವರ್ಷಗಳ ಹಿಂದೆ ನೀವು ಮದುವೆಯಾಗುತ್ತಿರುವ ಹುಡುಗ ಇವರೇನಾ..? ಎಂದು ಕೇಳಲಾದ ಪ್ರಶ್ನೆಗೆ ಪೂಜಾ ಕೆರಳಿದ್ದರು. ನಾವು ಕೇವಲ ಸ್ನೇಹಿತರು ಮಾತ್ರ ಎಂದಿದ್ದರು. ಈಗ ನೋಡಿದರೆ ಆರು ವರ್ಷದ ಹಿಂದಿನ ಆ ಮಾತೇ ನಿಜವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

ಅಂದ್ಹಾಗೇ ಪೂಜಾ ಹೆಗ್ಡೆ ಜೊತೆ ತಳುಕು ಹಾಕಿಕೊಂಡಿರುವ ವ್ಯಕ್ತಿಯ ಹೆಸರು ರೋಹನ್ ಮೆಹ್ರಾ. ಈ ರೋಹನ್ ಮೆಹ್ರಾ ಬೇರೆ ಯಾರು ಅಲ್ಲ ಬದಲಿಗೆ ಒಂದ್ಕಾಲದ ಬಾಲಿವುಡ್‌ನ ಸುರಸುಂದರ ವಿನೋದ್ ಮೆಹ್ರಾ ಅವರ ಮಗ. ಬದುಕಿದ್ದು 45 ವರ್ಷವಾದರೂ 100ಕ್ಕೂ ಅಧಿಕ ಚಿತ್ರಗಳನ್ನು ಮಾಡಿದ್ದರು ವಿನೋದ್ ಮೆಹ್ರಾ.

1991ರಲ್ಲಿ ಕೀನ್ಯಾದಲ್ಲಿ ಹುಟ್ಟಿದ ವಿನೋದ್ ಮೆಹ್ರಾ ಬೆಳೆದಿದ್ದು ಎಲ್ಲವೂ ಅಲ್ಲಿಯೇ. ಆ ನಂತರ 2018ರಲ್ಲಿ ತಂದೆಯ ಜಾಡು ಹಿಡಿದು ಮುಂಬೈಗೆ ಬಂದ ರೋಹನ್ ಮೆಹ್ರಾ ಆ ನಂತರ ಸೈಫ್ ಅಲಿ ಖಾನ್ ಜೊತೆ ''ಬಾಜಾರ್''.. ''420 IPC''.. ''ಕಾಲಾ''.. ''ಫೋರ್ ಮೋರ್ ಶಾಟ್ಸ್ ಪ್ಲೀಸ್''.. ಸೇರಿ ಕೆಲ ಸಿನಿಮಾ ಮತ್ತು ವೆಬ್ ಸರಣಿ ಮಾಡಿದರು. ಆದರೆ.. ಗೆಲುವು ಸಿಗಲಿಲ್ಲ.

ಇಂಥಾ ರೋಹನ್ ಮೆಹ್ರಾ ಮತ್ತು ಪೂಜಾ ಹೆಗ್ಡೆ 2020ರಲ್ಲಿ ಹರ್ಷವರ್ಧನ್ ಕಪೂರ್ ಅವರ ಮನೆ ಪಾರ್ಟಿಯಲ್ಲಿ ಎದುರು ಬದುರಾಗಿದ್ದರು. ಆ ನಂತರ ಹಲವು ಬಾರಿ ಕ್ಯಾಮರಾದಲ್ಲಿ ಸೆರೆಯಾದರು. ಇಬ್ಬರ ಸಂಬಂಧದ ಮೇಲೆ ಹಲವರಿಗೆ ಅನುಮಾನ ಬಂದಿದ್ದು ಆಗಲೇ. ಆದರೆ. ಅಂದು ಹಬ್ಬಿದ್ದ ಈ ಸುದ್ದಿಯನ್ನು ತಳ್ಳಿಹಾಕಿದ್ದ ಪೂಜಾ ಹೆಗ್ಡೆ ಈಗ ನಿಜಕ್ಕೂ ರೋಹನ್ ಮೆಹ್ರಾಗೆ ಮನ ಸೋತಿದ್ಧಾರೆ ಎಂದು ಫಿಲ್ಮ್‌ ಫೇರ್ ವರದಿ ಮಾಡಿದೆ. ಇಬ್ಬರು ಜೊತೆಯಲ್ಲಿ ಹೆಚ್ಚೆಚ್ಚು ಸಮಯ ಕಳೆಯುತ್ತಿದ್ದಾರೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ, ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ ಎಂದು ''ಫಿಲ್ಮ್ ಫೇರ್ '' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ನಿಜಕ್ಕೂ ಪೂಜಾ ಹೆಗ್ಡೆ ಮತ್ತು ರೋಹನ್ ಮೆಹ್ರಾ ಮದುವೆಯಾಗುತ್ತಾರಾ ..? ಅಧಿಕೃತ ಉತ್ತರ ಶೀಘ್ರದಲ್ಲಿ ಸಿಗುವ ನಿರೀಕ್ಷೆ ಇದೆ.

English summary
Who is Rohan Mehra? Get the full scoop on Pooja Hegde’s confirmed status with the Baazaar actor and son of legend Vinod Mehra. Career, age, and family details inside.
Read more about: pooja hegde rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X