twitter
    For Quick Alerts
    ALLOW NOTIFICATIONS  
    For Daily Alerts

    ಮನಮೋಹನ್ ಸಿಂಗ್ ಕುರಿತು ಸಿನಿಮಾ, ಸೋನಿಯಾ ಪಾತ್ರದಲ್ಲಿ ಯಾರು?

    By Bharath Kumar
    |

    ರಾಜಕೀಯ ವ್ಯಕ್ತಿಗಳ ಕುರಿತು ಸಿನಿಮಾ ಮಾಡುವುದರ ಬಗ್ಗೆ ಬಣ್ಣದ ಲೋಕ ಹೆಚ್ಚು ಆಸಕ್ತಿ ಹೊಂದುತ್ತಿದೆ. ಕನ್ನಡದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ 'ಭೂಮಿಪುತ್ರ' ಎಂಬ ಸಿನಿಮಾ ಮಾಡಲಾಗುತ್ತಿದೆ. ಇದರ ಬೆನ್ನಲ್ಲೆ ಮತ್ತೊಬ್ಬ ಮಾಜಿ ಸಿಎಂ ಯುಡಿಯೂರಪ್ಪ ಅವರ ಬಗ್ಗೆನೂ ಸಿನಿಮಾ ಬರುತ್ತೆ ಎನ್ನಲಾಗಿದೆ. ಹೀಗಿರುವಾಗ, ಬಾಲಿವುಡ್ ನಲ್ಲಿ ಸದ್ದಿಲ್ಲದೇ ಮಾಜಿ ಪ್ರಧಾನಿ ಬಗ್ಗೆ ಈಗಾಗಲೇ ಸಿನಿಮಾ ಶುರುವಾಗಿಬಿಟ್ಟಿದೆ.['ಭೂಮಿಪುತ್ರ' ಸಿನಿಮಾ ಹಿಂದಿದ್ಯಾ ಎಚ್.ಡಿ.ಕೆ ಚುನಾವಣಾ ರಣತಂತ್ರ.?]

    ಹೌದು, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಜೀವನ ಕುರಿತ ಸಿನಿಮಾ ಈಗ ಬೆಳ್ಳಿತೆರೆ ಮೇಲೆ ಅನಾವರಣವಾಗಲಿದೆ. ಈ ಚಿತ್ರಕ್ಕೆ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎಂಬ ಶೀರ್ಷಿಕೆ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.

    ಹಾಗಾದ್ರೆ, ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಸೋನಿಯಾ ಗಾಂಧಿ ಪಾತ್ರದಲ್ಲಿ ಯಾರು ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾಹಿತಿ ಮುಂದೆ ಓದಿ.....

    ಚಿತ್ರದ ಫಸ್ಟ್ ಲುಕ್ ನೋಡಿ

    ಚಿತ್ರದ ಫಸ್ಟ್ ಲುಕ್ ನೋಡಿ

    ಇದು 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದ ಫಸ್ಟ್ ಲುಕ್. ಈ ಪೋಸ್ಟರ್ ನಲ್ಲಿ ನೀವು ಸರಿಯಾಗಿ ಗಮನಿಸಿದ್ರೆ, ಮನಮೋಹನ್ ಸಿಂಗ್ ಅವರ ಭಾವ ಚಿತ್ರ ಮತ್ತು ಜೊತೆಗೆ ಓರ್ವ ಮಹಿಳೆ ನಿಂತಿರುವ ನೆರಳಿನ ಚಿತ್ರ ಕೂಡ ಕಾಣುತ್ತಿದೆ. ಇವರಿಬ್ಬರ ಜೊತೆ ದೆಹಲಿಯ ಪಾರ್ಲಿಮೆಂಟ್ ಕೂಡ ಈ ಪೋಸ್ಟರ್ ನಲ್ಲಿದೆ.[ಯಡಿಯೂರಪ್ಪ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ?]

    ಕಾದಂಬರಿ ಆಧಾರಿತ ಚಿತ್ರ

    ಕಾದಂಬರಿ ಆಧಾರಿತ ಚಿತ್ರ

    ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008 ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕ ಈಗ ಸಿನಿಮಾ ರೂಪ ಪಡೆಯುತ್ತಿದೆ. ಈ ಪುಸ್ತಕ ಬಿಡುಗಡೆಯಾದಾಗ ಬಾರಿ ವಿರೋಧ ವ್ಯಕ್ತವಾಗಿತ್ತು. ರಾಷ್ಟ್ರ ಮಟ್ಟದಲ್ಲಿ ವಿವಾದ ಹುಟ್ಟುಹಾಕಿತ್ತು. ಈ ವಿವಾದಾತ್ಮಕ ಪುಸ್ತಕದ ಪ್ರತಿರೂಪವೇ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ.

    ಚಿತ್ರದಲ್ಲಿ ಏನೆಲ್ಲಾ ಇರಲಿದೆ?

    ಚಿತ್ರದಲ್ಲಿ ಏನೆಲ್ಲಾ ಇರಲಿದೆ?

    ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂಬುದು ಅವರಿಗೆ ಹಿಂದಿನ ದಿನದವರೆಗೂ ತಿಳಿದಿರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆದ ನಂತರ ಅವರ ಕಾರ್ಯ ವೈಖರಿ ಹೇಗಿತ್ತು? ಮನಮೋಹನ್ ಸಿಂಗ್ ಅವರು ಯಾಕೆ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು? ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನಡೆಸಲಿಲ್ಲ ಏಕೆ? ಎಂಬ ವಿಷಯಗಳು ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಗಳು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.

    ಮನಮೋಹನ್ ಸಿಂಗ್ ಪಾತ್ರದಲ್ಲಿ ಯಾರು?

    ಮನಮೋಹನ್ ಸಿಂಗ್ ಪಾತ್ರದಲ್ಲಿ ಯಾರು?

    ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಪಾತ್ರದಲ್ಲಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕಾಣಿಸಿಕೊಳ್ಳುತ್ತಿದ್ದಾರೆ.['ಆಕಸ್ಮಿಕ ಪಿಎಂ' ಎಂಎಂ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್]

    ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾರು?

    ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾರು?

    ಇನ್ನು ಮನಮೋಹನ್ ಸಿಂಗ್ ಸಿನಿಮಾ ಅಂದ್ಮೇಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಾತ್ರ ಪ್ರಮುಖವಾದದು. ಹೀಗಾಗಿ, ಈ ಇಬ್ಬರ ಪಾತ್ರಗಳನ್ನ ಯಾರು ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

    ಯಾವಾಗ ಬಿಡುಗಡೆ ?

    ಯಾವಾಗ ಬಿಡುಗಡೆ ?

    12ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆಯುತ್ತಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುಂಚೆ ಈ ಚಿತ್ರವನ್ನ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ.

    English summary
    Actor Anupam Kher will be Playing Former Prime Minister Manmohan Singh in a film Titled, ‘The Accidental Prime Minister’, Based on Sanjaya Baru’s book of the same name.
    Wednesday, June 7, 2017, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X