ಶ್ರೀದೇವಿ ಮಗಳ ಹೃದಯ ನುಚ್ಚು ನೂರು ; ಕೇವಲ ಎರಡೇ ವರ್ಷಕ್ಕೆ ಅಂತ್ಯವಾಯ್ತು ಪ್ರೇಮಕಥೆ ? ಬ್ರೇಕಪ್‌ಗೆ ಕಾರಣವೇನು ?

ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ಅನೇಕರು ನರಳುತ್ತಾರೆ. ಉಸಿರುಗಟ್ಟಿದಂತೆ ಭಾಸವಾಗಿ ಸಂಬಂಧ ಕಡಿದುಕೊಂಡು ಬಿಡುತ್ತಾರೆ. ಆರಂಭದಲ್ಲಿ ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುವ ಕೆಲವರು ನೋಡ ನೋಡುತ್ತಾ ಪದೇ ಪದೇ ಮನದೊಳಗೆ ನೋವನ್ನು ಕೂಡ ಅನುಭವಿಸಲು ಶುರು ಮಾಡುತ್ತಾರೆ.

ನಿಜಾ, ಆಗಾಗ ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಎಲ್ಲ ಸಾಮಾನ್ಯ ಈಗ. ಆದರೆ ಅನುಭವಗಳ ಮೂಲಕ ಪಾಠ ಕಲಿತರೂ ಪ್ರೀತಿಯ ವಿಷಯದಲ್ಲಿ ಮಾತ್ರ ಕೆಲವರು ತುಂಬಾ ಹರ್ಟ್ ಆಗಿ ಬಿಡುತ್ತಾರೆ. ಸದ್ಯ ಈ ಸಾಲಿಗೆ ಅತಿಲೋಕ ಸುಂದರಿ ಶ್ರೀದೇವಿಯವರ ಎರಡನೇ ಮಗಳು ಖುಷಿ ಕಪೂರ್ ಕೂಡ ಸೇರಿಕೊಂಡಿದ್ದಾರಾ ಗೊತ್ತಿಲ್ಲ. ಆದರೆ ಸದ್ಯ ಖುಷಿ ಕಪೂರ್ ಅವರ ಲವ್ ಮತ್ತು ಬ್ರೇಕಪ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಬಾಯಿಗೆ ಆಹಾರವಾಗಿದೆ. ಈ ಕುರಿತು ಚರ್ಚೆ ನಡೆಯುತ್ತಿದೆ.

The Archies Romance Ends Khushi Kapoor and Vedang Raina Reportedly Call It Quits After 2 Years

ಹೌದು, ಅಸಲಿಗೆ ಎಲ್ಲ ಸ್ಟಾರ್‌ ಮಕ್ಕಳಂತೆ ಖುಷಿ ಕಪೂರ್ ಕೂಡ ತಮ್ಮ ತಾಯಿ ಶ್ರೀದೇವಿ ಮತ್ತು ತಂದೆ ಬೋನಿ ಕಪೂರ್ ಅವರ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ ''ದಿ ಆರ್ಚಿಸ್'' ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ.

ಎರಡು ವರ್ಷದ ಹಿಂದೆ ಬಂದಿದ್ದ ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಖುಷಿ ಕಪೂರ್‌ ಅವರಿಗೆ ಪರಿಚಯವಾದವರು ವೇದಾಂಗ್ ರೈನಾ. ಉದ್ಯಮಿ ರಾಜೇಶ್ ರೈನಾ ಅವರ ಮಗನಾಗಿರುವ ಈ ವೇದಾಂಗ್ ರೈನಾ ಮತ್ತು ಖುಷಿ ಕಪೂರ್ ಅವರ ನಡುವೆ ''ದಿ ಆರ್ಚಿಸ್'' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೇಮಾಂಕುರವಾಗಿತ್ತು.

The Archies Romance Ends Khushi Kapoor and Vedang Raina Reportedly Call It Quits After 2 Years

ನಿಜಾ, ಇಬ್ಬರು ಕೂಡ ತಮ್ಮ ಈ ಸಂಬಂಧವನ್ನು ಅಧಿಕೃತವಾಗಿ ಎಲ್ಲಿಯೂ ಒಪ್ಪಿಕೊಂಡಿಲ್ಲ. ಬದಲಿಗೆ ಚಿತ್ರರಂಗದಲ್ಲಿ ಎಲ್ಲರೂ ಹೇಳುವಂತೆ ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದರು. ಆದರೂ ಕೂಡ ಇವರ ಮೇಲೆ ಹಲವರಿಗೆ ಅನುಮಾನ ಇತ್ತು. ಒಂದು ವರ್ಗ ಇವರ ಮೇಲೆ ನಿಗಾ ವಹಿಸಿತ್ತು. ಇದಕ್ಕೆ ಪೂರಕವಾಗಿ ಇಬ್ಬರ ನಡುವಳಿಕೆ ಕೂಡ ಹಾಗೇ ಇತ್ತು. ಹಲವಾರು ಬಾರಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಜೊತೆಯಾಗಿ ಸೆರೆಯಾಗಿದ್ದರು.

ಆದರೆ ಈಗ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಸದ್ಯ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ''ಪತ್ರಕರ್ತ ವಿಕ್ಕಿ ಲಾಲ್ವಾನಿ'' ಇಬ್ಬರ ಸಂಬಂಧ ಮುರಿದು ಬಿದ್ದಿದೆ, ಇಬ್ಬರು ದೂರ ಆಗಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾರಣವೇನು ಎನ್ನುವುದು ಗೊತ್ತಿಲ್ಲ ಆದರೆ ಅವರ ಆಪ್ತರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಇತ್ತೀಚೆಗಷ್ಟೇ ಬ್ರೇಕಪ್ ಆಗಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆ ಸದ್ಯ ಹಲವರು ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಅವರ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಬ್ರೇಕಪ್‌ಗೆ ಕಾರಣವೇನು ಎಂದು ಚರ್ಚೆ ಮಾಡುತ್ತಿದ್ದಾರೆ. ಕಾರಣವನ್ನು ಕೂಡ ಹುಡುಕುತ್ತಿದ್ದಾರೆ.

ತಮ್ಮ ಕುರಿತು ಹರಿದಾಡುತ್ತಿರುವ ಈ ಸುದ್ದಿಗೆ ಖುಷಿ ಕಪೂರ್ ಆಗಲಿ ವೇದಾಂಗ್ ರೈನಾ ಆಗಲಿ ಇನ್ನೂ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಹಲವರು ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡಿದ್ದಾರೆ. ಮುಂಬರುವ ದಿನದಲ್ಲಿ ಇಬ್ಬರು ರಿಯ್ಯಾಕ್ಟ್ ಮಾಡ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

Vedang raina & khushi kapoor has split- media confirming this rn.. what’s the tea? kalesh? Any other boy/girl in the mix?
byu/falconwantspies inBollyBlindsNGossip

More from Filmibeat

English summary
Is it the end for Khushi and Vedang? Sources claim the 'Archies' duo has officially called it quits. Here is everything we know about their shocking 2026 split.
Read more about: breakup sridevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X