ನೋರಾ ಫತೇಹಿ ಮೇಲೆ ಹುಚ್ಚು ಅಭಿಮಾನ, ಪತ್ನಿಗೆ ದಿನನಿತ್ಯ ನರಕ ದರ್ಶನ

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ. ಅವರ ನಡೆ ನುಡಿಯನ್ನೆಲ್ಲ ಅನುಸರಿಸುತ್ತಾರೆ. ಇನ್ನೂ ಕೆಲ ಒಮ್ಮೆ ತಮ್ಮನ್ನು ಮದುವೆಯಾಗುವ ಹುಡುಗ ಅಥವಾ ಹುಡುಗಿ..

ತಮ್ಮ ಇಷ್ಟದ ನಾಯಕ-ನಾಯಕಿಯಂತೆ ಇರಬೇಕೆಂದು ಬಯಸುತ್ತಾರೆ. ಅಭಿಮಾನದ ಹುಚ್ಚಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ. ವಿಕೃತಿ ಮೆರೆಯುತ್ತಾರೆ. ಇದಕ್ಕೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದ ಪ್ರಕರಣ ಸದ್ಯದ ಉದಾಹರಣೆ.

The Dark Side of Celebrity Obsession Man Forces Wife to Look Like Nora Fatehi Booked for Foeticide

ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ-ಮಾವಂದಿರು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುವಂತೆ ಬಲವಂತಪಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಒಂದು ವೇಳೆ ವ್ಯಾಯಾಮ ಮಾಡದಿದ್ದರೆ ಆಹಾರ ನಿರಾಕರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ. ಪತಿ ಮತ್ತು ಅತ್ತೆ-ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ನೋರಾ ಫತೇಹಿ ಅವರ ಹುಚ್ಚು ಅಭಿಮಾನಿಯಾಗಿರುವ ಗಂಡ ನೋರಾ ಫತೇಹಿ ರೀತಿ ಕಾಣುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದು, ನೋರಾ ಫತೇಹಿ ಅವರಂತೆ ನಾನು ಕಾಣಬೇಕೆಂದು ಪ್ರತಿದಿನ ಮೂರು ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕೌಟ್ ಮಾಡುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದರು, ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಯಲು ಆಹಾರ ಸೇವಿಸದಂತೆ ತಡೆಯುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ ಎಂದು ''ಟೈಮ್ಸ್ ಆಫ್ ಇಂಡಿಯಾ'' ವರದಿ ಮಾಡಿದೆ.

ಮಹಿಳೆಯ ಪತಿ ಮೀರತ್‌ನ 28 ವರ್ಷದ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ತನ್ನ ದೇಹದ ಕುರಿತು ಪತಿ ಟೀಕಿಸುತ್ತಿದ್ದಲ್ಲದೇ ನಿನ್ನನ್ನು ಮದುವೆಯಾಗುವ ಬದಲು ನೋರಾ ಫತೇಹಿ ರೀತಿ ಕಾಣುವವರನ್ನು ಮದುವೆಯಾಗಿದ್ದರೆ ಉತ್ತಮವಾಗಿತ್ತು ಎಂದು ಹೇಳುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಎರಡು ತಿಂಗಳ ಹಿಂದೆ ನಾನು ಗರ್ಭಿಣಿಯಾಗಿರುವ ವಿಚಾರ ಗೊತ್ತಾಯ್ತು ಆಗ ಅತ್ತೆಯ ಬಳಿ ಈ ವಿಚಾರ ಹಂಚಿಕೊಂಡಾಗ ಅವರಿಗೆ ಖುಷಿಯೇ ಆಗಲಿಲ್ಲ ಎಂದು ಹೇಳಿರುವ ಮಹಿಳೆ ಒಂದು ದಿನ ತನ್ನ ಪತಿ ಒಂದು ಮಾತ್ರೆ ನೀಡಿದರು, ಅದು ಗರ್ಭಪಾತದ ಮಾತ್ರೆ ಎಂದು ನಂತರ ತಿಳಿದು ಬಂತು. ಇದರಿಂದ ತನ್ನ ಆರೋಗ್ಯ ಹದಗೆಟ್ಟು ಗರ್ಭಪಾತವಾಯಿತು ಎಂದು ಆರೋಪ ಮಾಡಿದ್ದಾರೆ.

The Dark Side of Celebrity Obsession Man Forces Wife to Look Like Nora Fatehi Booked for Foeticide

ಸರಾಸರಿ ಎತ್ತರ ಮತ್ತು ಬಿಳಿ ಮೈಬಣ್ಣದ ಹೊರತಾಗಿಯೂ,ನನ್ನ ದೇಹದಾಕಾರವನ್ನು ಪತಿ ನಿಂದಿಸುತ್ತಿದ್ದರು ಎಂದು ಹೇಳಿರುವ ಮಹಿಳೆ ಮಾರ್ಚ್ 6ರಂದು ನಮ್ಮ ಮದುವೆ ನಡೆದಿತ್ತು. ಅದ್ಧೂರಿಯಾಗಿ ನಮ್ಮ ತಂದೆ ತಾಯಿ ಮದುವೆ ಮಾಡಿ ಕೊಟ್ಟಿದ್ದು ಮದುವೆಗೆ ₹76 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು. ₹16 ಲಕ್ಷ ಮೌಲ್ಯದ ಆಭರಣ, ₹24 ಲಕ್ಷದ ಮಹೀಂದ್ರಾ ಸ್ಕಾರ್ಪಿಯೋ ಮತ್ತು ₹10 ಲಕ್ಷ ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು.

ಆದರೂ ಕೂಡ ತವರು ಮನೆಯಿಂದ ಹೊಸ ಬಟ್ಟೆ ಮತ್ತು ಓವನ್ ಟೋಸ್ಟರ್ ಗ್ರಿಲ್ಲರ್ (OTG) ತೆಗೆದುಕೊಂಡು ಬರುವಂತೆ ನನಗೆ ಪೀಡಿಸಲಾಗುತ್ತಿತ್ತು ಎಂದು ಕೂಡ ಮಹಿಳೆ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಹಿಂಸೆ, ವರದಕ್ಷಿಣೆ ಬೇಡಿಕೆ, ಗರ್ಭಪಾತಕ್ಕೆ ಪ್ರಚೋದನೆ, ಬ್ಲಾಕ್‌ಮೇಲ್ ಮತ್ತು ವಿಚ್ಛೇದನದ ಬೆದರಿಕೆ ಆರೋಪ ಮಾಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದು ಎಲ್ಲ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ

More from Filmibeat

English summary
A man's obsession with actress Nora Fatehi takes a dark turn, leading him to force his wife to exercise and change her looks. The shocking case ends in tragedy, resulting in foeticide and his arrest.
Read more about: fans actress nora fatehi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X