ಗಂಡ ಗೆದ್ದರೂ ಹೆಂಡತಿಗಿಲ್ಲ ಖುಷಿ ? ‘ಧುರಂಧರ್’ಗೆ ಜೈಕಾರ ಹಾಕಲಿಲ್ಲ ದೀಪಿಕಾ ಪಡುಕೋಣೆ

ಸುಖ ದುಃಖದಲ್ಲಿ ಜೊತೆಯಾಗುವ ಗಂಡ-ಹೆಂಡ್ತಿ ಎಂತಹದ್ದೇ ಕಷ್ಟ ಬಂದರೂ ಜೊತೆಯಾಗಿರುತ್ತಾರೆ. ಮದುವೆ ನಂತರ ಸೋಲು ಕೂಡ ಒಬ್ಬರದ್ದಲ್ಲ. ಗೆಲುವು ಕೂಡ ಒಬ್ಬರದ್ದಲ್ಲ. ಗೆಲುವು-ಸೋಲು ಏನೇ ಇರಲಿ ಅದು ಇಬ್ಬರದ್ದು ಹೌದು. ಗಂಡನ ಸಂಭ್ರಮದಲ್ಲಿ ಹೆಂಡತಿ ಮತ್ತು ಪತ್ನಿಯ ಸಂಭ್ರಮದಲ್ಲಿ ಪತಿ ಜೊತೆಯಾಗಿ ನಿಲ್ಲುವುದೇ ಸಂಸಾರದ ಸುಂದರ ನಿಯಮ. ಹಿಂದೆಯೆಲ್ಲ ಈ ನಿಯಮವನ್ನು ನಾಲ್ಕು ಗೋಡೆಯ ನಡುವೆ ಪಾಲಿಸಲಾಗುತ್ತಿತ್ತು.

ಆದರೆ .. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಂಸಾರದ ಸುಂದರ ನಿಯಮ ಸಾಮಾಜಿಕ ಜಾಲತಾಣಕ್ಕೆ ಹಬ್ಬಿದೆ. ಮನದ ಭಾವನೆ ಸೋಶಿಯಲ್ ಮೀಡಿಯಾ ಮೂಲಕ ಹೊರ ಬಂದಾಗಲೇ ಜನ ಹೌದೌದು ಎನ್ನುತ್ತಾರೆ. ಮುದ್ದಾದ ಜೋಡಿ ಎಂದೆಲ್ಲಾ ಕೊಂಡಾಡುತ್ತಾರೆ. ಆದರೆ, ಅದೇ ಸಂಭ್ರಮ ಪಡಬೇಕಾದ ವಿಷಯವನ್ನು ಎಲ್ಲರೆದುರು ಸಂಭ್ರಮಿಸದೇ ಇದ್ದಾಗ ಅನುಮಾನ ಪಡುತ್ತಾರೆ. ಅವಮಾನ ಮಾಡಲು ಶುರು ಮಾಡುತ್ತಾರೆ. ಉದಾಹರಣೆಗೆ ದೀಪಿಕಾ ಪಡುಕೋಣೆ.

The Dhurandhar Silence Why Deepika Padukone Muted While South Superstars Hail Ranveer Singh

ಹೌದು. ಎಲ್ಲರಿಗೆ ಗೊತ್ತಿರುವಂತೆ ಮತ್ತೊಮ್ಮೆ ಭಾರತದಲ್ಲಿ ''ಧುರಂಧರ್'' ಅಲೆ ಎದ್ದಿದೆ. ''ಧುರಂಧರ್ 2'' ಚಿತ್ರ ಕಣ್ತುಂಬಿಕೊಂಡು ಒಂದು ವರ್ಗ ರಣಕೇಕೆ ಹಾಕುತ್ತಿದೆ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಅಲ್ಲಿ ''ಧುರಂಧರ್ 2'' ಕುರಿತು ಹತ್ತು ಹಲವು ಚರ್ಚೆಗಳು ಕಣ್ಣಿಗೆ ರಾಚುತ್ತಿವೆ.

ಇನ್ನೂ ಬಾಕ್ಸಾಫೀಸ್‌ನಲ್ಲಿ ಸದ್ಯ ''ಧುರಂಧರ್ 2'' ಅಬ್ಬರಕ್ಕೆ ಹಣದ ಮಳೆಯೇ ಬೀಳುತ್ತಿದೆ. ಆದರೆ, ಅದ್ಯಾಕೋ ದೀಪಿಕಾ ಪಡುಕೋಣೆ ಮಾತ್ರ ''ಧುರಂಧರ್''ನ ಈ ಅಬ್ಬರ, ಆಡಂಬರ ಕಂಡರೂ ಕಾಣದಂತೆ ಇದ್ಧಾರೆ. ಗಂಡನ ಗೆಲುವಿನ ಕುರಿತು ಮಾತನಾಡದೇ ಮೌನ ವಹಿಸಿದ್ದಾರೆ. ಇವರ ಈ ಮೌನ ಸದ್ಯ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಯಾಕೆಂದರೆ.. ''ಧುರಂಧರ್'' ಗೆಲುವು ರಣವೀರ್ ಸಿಂಗ್ ಪಾಲಿಗೆ ಸಾಮಾನ್ಯವಾದ ಗೆಲುವು ಅಲ್ಲ. ಇಂತಹದ್ದೊಂದು ದಿನಕ್ಕೆ ರಣ್ವೀರ್ ಸಿಂಗ್ ಹಲವಾರು ವರ್ಷಗಳಿಂದ ಪರಿತಪಿಸುತ್ತಿದ್ದರು. ಹಲವು ಅವಮಾನಗಳನ್ನು ಬಾಲಿವುಡ್‌ನಲ್ಲಿ ಎದುರಿಸಿದ ನಂತರ ರಣವೀರ್ ಸಿಂಗ್‌ಗೆ ಈ ಭವ್ಯವಾದ ಸನ್ಮಾನ ಸಿಕ್ಕಿದೆ. ದೀಪಿಕಾ ಪಡುಕೋಣೆ ಅವರಿಗಿಂತ ಈ ಎಲ್ಲ ವಿಷಯವನ್ನು ಚೆನ್ನಾಗಿ ಬಲ್ಲ ವ್ಯಕ್ತಿ ಯಾರಿದ್ದಾರೆ..? ರಣವೀರ್ ಸಿಂಗ್ ಬದುಕಿನ ಏರಿಳಿತವನ್ನು ಹತ್ತಿರದಿಂದ ಕಂಡವರು ದೀಪಿಕಾ ಪಡುಕೋಣೆ.

ಆದರೂ ಕೂಡ ದೀಪಿಕಾ ಇಲ್ಲಿಯವರೆಗೆ ''ಧುರಂಧರ್ 2'' ಚಿತ್ರದ ಕುರಿತು ಒಂದೇ ಒಂದು ಮಾತು ಆಡಿಲ್ಲ. ಚಿತ್ರವನ್ನು ಹೊಗಳುವುದು ಬೇಡ, ಕೊನೆ ಪಕ್ಷ ರಣವೀರ್ ಸಿಂಗ್ ಅವರಿಗೆ ಸಿಕ್ಕ ಈ ಗೆಲುವನ್ನಾದರೂ ದೀಪಿಕಾ ಪಡುಕೋಣೆ ಸಂಭ್ರಮಿಸಬೇಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಣ್ವೀರ್ ಸಿಂಗ್ ಪರಿಶ್ರಮದ ಕುರಿತು ನಾಲ್ಕು ಮಾತನಾಡಬೇಕಿತ್ತು. ಆದರೆ.. ದೀಪಿಕಾ ಮಾಡಿಲ್ಲ.

The Dhurandhar Silence Why Deepika Padukone Muted While South Superstars Hail Ranveer Singh

ಹೀಗಾಗಿಯೇ ಕೆರಳಿರುವ ಕೆಲವರು ಸದ್ಯ ದೀಪಿಕಾ ಪಡುಕೋಣೆಯ ವಿರುದ್ಧ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ಧಾರೆ. ಟ್ರೋಲ್ ಮಾಡುತ್ತಿದ್ದಾರೆ. ಇನ್ನು ವಿಪರ್ಯಾಸ ಅಂದರೆ ''ಧುರಂಧರ್ 2'' ಚಿತ್ರದ ಕುರಿತು ದಕ್ಷಿಣದ ಹಲವು ಸ್ಟಾರ್ ಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟ್ವೀಟ್ ಮಾಡಿದ್ದಾರೆ.

ಆದರೆ.. ಬಾಲಿವುಡ್ ನಲ್ಲಿಯೇ ಹಲವು ಸ್ಟಾರ್ ಗಳು ರಣವೀರ್ ಸಿಂಗ್ ಅವರನ್ನು ಮೆಚ್ಚಿ ಕೊಂಡಾಡಿಲ್ಲ. ಸ್ಟಾರ್ ಗಳ ಕಥೆ ಬಿಡಿ, ಆಗಲೇ ಹೇಳಿದಂತೆ ದೀಪಿಕಾ ಪಡುಕೋಣೆಯೇ ಮಾತನಾಡಿಲ್ಲ. ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್‌ ವಿರುದ್ಧ ಹಲವರು ಕಿಡಿ ಕಾರಲು ಇದು ಕೂಡ ಪ್ರಮುಖ ಕಾರಣ.

ಅಂದ್ಹಾಗೇ ದೀಪಿಕಾ ಪಡುಕೋಣೆ ಎಡಪಂಥೀಯ ಚಿಂತನೆ ಹೊಂದಿರುವ ಚೆಲುವೆ ಎನ್ನುವ ಅನುಮಾನ ಮೊದಲಿಂದ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯಾಗಿ ನೋಡಬೇಕೆನ್ನುವ ಆಶಯವನ್ನು ದೀಪಿಕಾ ಹಿಂದೆ ವ್ಯಕ್ತಪಡಿಸಿದ್ದರು. 2020ರಲ್ಲಿ ಜೆ ಎನ್ ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)ದಲ್ಲಿ ಹಿಂಸಾಚಾರ ನಡೆದಾಗ ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು.

ಇನ್ನೂ ''ಧುರಂಧರ್'' ಬಲ ಪಂಥೀಯ ಚಿಂತನೆಗಳನ್ನು ಹೊಂದಿರುವ ಸಿನಿಮಾ. ದೀಪಿಕಾ ಪಡುಕೋಣೆಯ ಮೌನಕ್ಕೆ ಈ ವಿಚಾರ ಕೂಡ ಕಾರಣ ಆಗಿದ್ದರು ಆಗಿರಬಹುದು. ಗಂಡ ಹೆಂಡ್ತಿಯ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರು ಇರಬಹುದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X